ದೊಡ್ಡಬಳ್ಳಾಪುರ: 75ನೇ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಶನಿವಾರ ದೊಡ್ಡಬಳ್ಳಾಪುರ ತಾಲೂಕು ಪ್ರವೇಶಿಸಲಿದೆ.
ಫೆ.10 ರಿಂದ 17 ರವರೆಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮಾಪತಿ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶನಿವಾರ ಬೆಳಿಗ್ಗೆ 9ಕ್ಕೆ ತಾಲೂಕಿನ ಹೆಗ್ಗಡಿಹಳ್ಳಿ ಗ್ರಾಮ ಪಂಚಾಯ್ತಿಗೆ ಆಗಮಿಸಲಿದೆ. ಶಾಸಕರು ಸೇರಿ ಸ್ಥಳೀಯ ಜನಪ್ರತಿನಿಧಿಗಳು ಜಾಥಾದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಹೆಗ್ಗಡಿಹಳ್ಳಿ ಗ್ರಾ.ಪಂ ಬಳಿಕ ಜಾಗೃತಿ ಜಾಥಾ ಮೆಳೆಕೋಟೆ, ತೂಬಗೆರೆ, ಎಸ್.ಎಸ್.ಘಾಟಿಗೆ ತೆರಳಲಿದೆ. ಶ್ರೀಕ್ಷೇತ್ರ ಘಾಟಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೊದಲ ದಿನದ ಜಾಗೃತಿ ಜಾಥಾ ಮುಕ್ತಾಯವಾಗಲಿದೆ.
ಫೆ. 11 ರಂದು ಹಾಡೋನಹಳ್ಳಿ, ರಾಜಘಟ್ಟ, ಕೊನಘಟ್ಟ, ಹೊಸಹಳ್ಳಿ ಗ್ರಾ.ಪಂ ನಲ್ಲಿ ಜಾಥಾ ನಡೆಯಲಿದೆ. ಫೆ.12 ರಂದು ಆರೂಢಿ, ಸಾಸಲು, ಭಕ್ತರಹಳ್ಳಿ ಹಾಗೂ ಸಕ್ಕರೆ ಗೊಲ್ಲಹಳ್ಳಿಯಲ್ಲಿ ಜಾಥಾ ಸಾಗಲಿದೆ. ಫೆ.13 ರಂದು ದೊಡ್ಡಬೆಳವಂಗಲ, ಹುಲಿಕುಂಟೆ, ತಿಪ್ಪೂರು ಹಾಗೂ ಹಣಬೆ ಗ್ರಾ.ಪಂ.ಗಳಲ್ಲಿ ಸಂವಿಧಾನ ಜಾಥಾ ನಡೆಯಲಿದೆ.
ಫೆ.14 ರಂದು ಕೆಸ್ತೂರು, ಹೊನ್ನಾವರ, ಕನಸವಾಡಿ, ಚನ್ನದೇವಿ ಅಗ್ರಹಾರದಲ್ಲಿ ಜಾಥಾ ಸಾಗಲಿದೆ. ಫೆ.15 ರಂದು ಕಾಡನೂರು, ದೊಡ್ಡತುಮಕೂರು, ಮಜರಾ ಹೊಸಹಳ್ಳಿ, ಹಾದ್ರಿಪುರ ಗ್ರಾ.ಪಂ.ನಲ್ಲಿ ಜಾಥಾ ನಡೆಯಲಿದೆ.
ಫೆ.16 ರಂದು ಕಂಟನಕುಂಟೆ, ಕೊಡಿಗೇಹಳ್ಳಿ, ದರ್ಗಾ ಜೋಗಿಹಳ್ಳಿ, ಅರಳು ಮಲ್ಲಿಗೆ ಗ್ರಾ.ಪಂ.ನಲ್ಲಿ ಜಾಥಾ ನಡೆಯಲಿದೆ. ಕೊನೆಯ ದಿನವಾದ ಫೆ.17 ರಂದು ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಪ್ರತಿ ಪಂಚಾಯ್ತಿಯಲ್ಲಿ ನಡೆಯುವ ಜಾಗೃತಿ ಜಾಥಾದಲ್ಲಿ ಐದು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಉಮಾಪತಿ ತಿಳಿಸಿದರು.
ಜಾಗೃತಿ ಜಾಥಾ ಯಶಸ್ವಿಗೆ ಎಲ್ಲ ದಲಿತಪರ, ಕನ್ನಡಪರ ಸಂಘಟನೆಗಳು ಶ್ರಮಿಸುವ ಜೊತೆಗೆ ಜಾಥಾದಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
"ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್…
Cheap Emotional Support Animal Letter: Your Guide Understanding Cheap Emotional Support Animal Letters In recent…
Understanding ESA Letters for Mental Health Support The Role of ESA Letters in Mental Health…
ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಆಗಿದ್ದೇವೆ. ಆದ್ದರಿಂದ ದೇಶಕ್ಕೆ ಕಾಂಗ್ರೆಸ್ ಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ…
ದೇವಿಯ ಕರಗ ಉತ್ಸವದಲ್ಲಿ ಅಶ್ಲೀಲ ನರ್ತನ ಮಾಡಿದ್ದರಿಂದ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ…
ಬಾಬು ಜಗಜೀವನ್ ರಾಮ್ ಜಯಂತಿ ಪ್ರಯುಕ್ತ ಏ.5ರ ಭಾನುವಾರ ತೂಬಗೆರೆ ಸರ್ಕಾರಿ ಶಾಲೆಯಲ್ಲಿ ಬಾಬು ಜಗಜೀವನ ರಾಮ್ ರಾಷ್ಟ್ರೀಯ ಶಿಕ್ಷಣ…