Categories: ಆರೋಗ್ಯ

22 ವರ್ಷದ ಯುವತಿಗೆ ಆಪರೇಷನ್ ಮಾಡಿ, ಎರಡೇ ದಿನದಲ್ಲಿ ದೈನಂದಿನ ಸ್ಥಿತಿಗೆ ಬರುವಂತೆ ಮಾಡಿದ್ದಾರೆ ಮೆಡಿಕವರ್‌ ಆಸ್ಪತ್ರೆಯ ಹೃದಯ ತಜ್ಞ‌

ಸುಮಾರು ದಿನಗಳಿಂದ ಎಡಗಾಲಿನಲ್ಲಿ ಊತಕಂಡುಬಂದಿದ್ದ ಕಾರಣ ನಡೆಯಲಾಗದೇ, ಹಾಸಿಗೆಯಲ್ಲೆ ಬಳಲುತ್ತಾ ಇದ್ದ ರೋಗಿಗೆ ಅಪರೇಷನ್‌ ಮಾಡಿ ಎರಡೇ ದಿನದಲ್ಲಿ ಎದ್ದು ಓಡಾಡುವಂತೆ ಮಾಡಿದ್ದಾರೆ ವೈಟ್‌ ಫಿಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯ ಹೃದಯ ತಜ್ಞ ಡಾ. ರಾಮ್‌ ನರೇಶ್‌ ಸೌದ್ರಿ.

22ವರ್ಷದ ಯುವತಿಗೆ ಕಾಲಿನಲ್ಲಿಊತ ಶುರುವಾಗಿದ್ದು, ನೋವಿನಲ್ಲಿ ಬೆಡ್‌ ಇಂದ ಮೇಲೆ ಎಳೆಲು ಕಷ್ಟವಾಗುತ್ತಾ ಇತ್ತು , ಸುಮಾರು 12 ದಿನಗಗಳೀಗೂ ಹೆಚ್ಚು ಕಾಲ ಹಾಸಿಗೆಯಿಂದ ಮೇಲೆಳಲು ಕಷ್ಟ ಪಡುತ್ತಾ ಇದ್ದರು . ಅಷ್ಟೇ ಅಲ್ಲದೇ ನೋವಿನಿಂದ ಉಸಿರಾಟದ ತೊಂದ್ರೆ ಕೂಡ ಶುರುವಾಗಿತ್ತು . ಅವರು ಕೂಡದೇ ಮೆಡಿಕವರ್‌ ಆಸ್ಪತ್ರೆಗೆ ಬಂದು ಡಾ. ರಾಮ್‌ ನರೇಶ್‌ ಸೌದ್ರಿಯವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರು .

ಅವರನ್ನು ಪರೀಕ್ಷೆ ಮಾಡಿದ ಬಳಿಕ ಪಡೆದ ಬಳಿಕ ಅವರ ಎಡ ಗಾಲಿನ ಕಾಲಿನಲ್ಲಿ ರಕ್ತ ಗೆಪ್ಪುಗಟ್ಟಿದ್ದು, ಹೃದಯದಿಂದ ಶ್ವಾಸಕೋಶದ ಪಲ್ಮನರಿವರೆಗೆ ಬ್ಲಾಕೇಜ್‌ ಆಗಿರೋದು ತಿಳಿದುಬಂದಿದೆ. ಅಲ್ಲದೇ ಎಡ ಗಾಲಿನ ರಕ್ತನಾಳ ಸಂಪೂರ್ಣ ಹೆಪ್ಪುಗಟ್ಟಿದ್ದು, ರಕ್ತ ಸಂಚಲನಕ್ಕೆ ಜಾಗ ಇಲ್ಲದೇ ಜಾಮ್‌ ಆಗಿತ್ತು . ಹಾಗಾಗೀ ಶ್ವಾಸಕೋಶದಲ್ಲಿ ರಕ್ತ ಸಂಚಲನ ಫುಲ್‌ ಬಂದ್‌ ಆಗಿತ್ತು. ರಕ್ತ ಕರಗಿಸೋಕೆ ಇಂಜೆಕ್ಚನ್‌ ನೀಡಿದ್ರೂ ರೋಗಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬಳಿಕ ಅವರಿಗೆಸಿಟಿ ವಿನೋಗ್ರಾಮ್‌ ನಡೆಸಲಾಯ್ತು, ಅದರಲ್ಲಿ ಅವರಿಗೆ ಥ್ರಂಬೋಸಿಸ್‌ ಖಾಯಿಲೆ ಇರೋದು ತಿಳಿದು ಬಂದಿದೆ. ಅದಕ್ಕಾಗಿ ಪಲ್ಮನರಿ ಎಂಬೋಲೆಕ್ಟಮಿ ಹಾಗೂ ವೀಸನ್‌ ಥ್ರಂಬೆಕ್ಟಮಿ ಅಪರೇಷನ್‌ ಮಾಡಿಸುವ ಅಗತ್ಯತೆಯನ್ನು ಹೃದಯ ತಜ್ಞ ಡಾ ರಾಮ್‌ ನರೇಶ್‌ ಸೌದ್ರಿ ರೋಗಿಗೆ ತಿಳಿಸಿದ್ದಾರೆ.

ರೋಗಿಯ ಸಮಸ್ಯೆಗೆ ಕಾರಣವೇನೆಂದು ಹುಡುಕುತ್ತಾ ಇದ್ದ ವೈದ್ಯರಿಗೆ ತಿಳಿದು ಬಂದಿದ್ದು , ಅವರು ಹಾರ್ಮೋನಲ್‌ ಚಿಕಿತ್ಸೆ ಪಡೆಯುತ್ತಾ ಇದ್ದರು ಅನ್ನೋದು . ಅದರ ಪರಿಣಾಮವಾಗಿ ರೋಗಿಯೂ ಇಷ್ಟೊಂದು ಸಮಸ್ಯೆ ಎದುರಿಸ್ತಾ ಇರೋದು . ಹಾಗಾಗೀ ಅವರಿಗೆ ಅಪರೇಷನ್‌ ನಡೆಸಲಾಯ್ತು . ಮೊದಲಿಗೆ ಶ್ವಾಸಕೋಶದಲ್ಲಿ ಉಂಟಾಗಿರುವ ರಕ್ತದ ಕ್ಲಾಟನ್ನು ತೆಗೆದು ಬಳಿಕ ಐವಿಸಿ ಫಿಲ್ಟರ್‌ ಹಾಕಿ ಎಡಗಾಲಿನಲ್ಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆದು ಹಾಕಿಲಾಯ್ತು. ಬಳಿಕ ಅವರನ್ನು ಐಸಿಯು ಇಂದ ವಾರ್ಡ್‌ಗೆ ಒಂದೇ ದಿನದಲ್ಲಿ ಶಿಫ್ಟ್‌ ಮಾಡಲಾಗಿದೆ . ಮರುದಿನವೇ ಅವರು ಎಂದಿನಂತೆ ನಡೆಯುವುದಕ್ಕೆ ಅವಕಾಶವಾಗಿದೆ.

ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ಯುವತಿಯೂ ತಮ್ಮ ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ ಹೃದಯ ತಜ್ಞ ಡಾ. ರಾಮ್‌ ನರೇಶ್‌ ಸೌದ್ರಿ .

Ramesh Babu

Journalist

Recent Posts

ಸರ್ಕಾರಿ ಶಾಲಾ ಮಕ್ಕಳಿಗೆ ಟ್ರ್ಯಾಕ್‌ಸೂಟ್, ಶೂ ವಿತರಣೆ

ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…

10 hours ago

ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…

15 hours ago

ಅಕ್ಟೋಬರ್ 2….. ಶಾಸ್ತ್ರಿ ಮತ್ತು ಗಾಂಧಿ……..,

ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…

18 hours ago

ಬೆಂಬಲ ಬೆಲೆಯಡಿ ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್‌ಗೆ ಖರೀದಿಗೆ ಕೇಂದ್ರದ ಅನುಮೋದನೆ

2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…

1 day ago

ಸಿಎಂಗೆ ರೈತಪರ ಕಾಳಜಿ ಇಲ್ಲ ಶಾಸಕ ಧೀರಜ್ ಮುನಿರಾಜು ಆರೋಪ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…

1 day ago

ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ – ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…

1 day ago