Categories: ಆರೋಗ್ಯ

22 ವರ್ಷದ ಯುವತಿಗೆ ಆಪರೇಷನ್ ಮಾಡಿ, ಎರಡೇ ದಿನದಲ್ಲಿ ಚಲಿಸುವ ಸ್ಥಿತಿಗೆ ತಲುಪಿಸಿದ ಹೃದಯ ತಜ್ಞ‌

ಸುಮಾರು ದಿನಗಳಿಂದ ಎಡಗಾಲಿನಲ್ಲಿ ಊತಕಂಡುಬಂದಿದ್ದ ಕಾರಣ ನಡೆಯಲಾಗದೇ, ಹಾಸಿಗೆಯಲ್ಲೆ ಬಳಲುತ್ತಾ ಇದ್ದ ರೋಗಿಗೆ ಅಪರೇಷನ್‌ ಮಾಡಿ ಎರಡೇ ದಿನದಲ್ಲಿ ಎದ್ದು ಓಡಾಡುವಂತೆ ಮಾಡಿದ್ದಾರೆ ವೈಟ್‌ ಫಿಲ್ಡ್‌ ನಲ್ಲಿರುವ ಮೆಡಿಕವರ್‌ ಆಸ್ಪತ್ರೆಯ ಹೃದಯ ತಜ್ಞ ಡಾ. ರಾಮ್‌ ನರೇಶ್‌ ಸೌದ್ರಿ.

22ವರ್ಷದ ಯುವತಿಗೆ ಕಾಲಿನಲ್ಲಿಊತ ಶುರುವಾಗಿದ್ದು, ನೋವಿನಲ್ಲಿ ಬೆಡ್‌ ಇಂದ ಮೇಲೆ ಎಳೆಲು ಕಷ್ಟವಾಗುತ್ತಾ ಇತ್ತು, ಸುಮಾರು 12 ದಿನಗಗಳೀಗೂ ಹೆಚ್ಚು ಕಾಲ ಹಾಸಿಗೆಯಿಂದ ಮೇಲೆಳಲು ಕಷ್ಟ ಪಡುತ್ತಾ ಇದ್ದರು. ಅಷ್ಟೇ ಅಲ್ಲದೇ ನೋವಿನಿಂದ ಉಸಿರಾಟದ ತೊಂದ್ರೆ ಕೂಡ ಶುರುವಾಗಿತ್ತು. ಅವರು ಕೂಡದೇ ಮೆಡಿಕವರ್‌ ಆಸ್ಪತ್ರೆಗೆ ಬಂದು ಡಾ. ರಾಮ್‌ ನರೇಶ್‌ ಸೌದ್ರಿಯವರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದರು.

ಅವರನ್ನು ಪರೀಕ್ಷೆ ಮಾಡಿದ ಬಳಿಕ ಪಡೆದ ಬಳಿಕ ಎಡ ಗಾಲಿನ ಕಾಲಿನಲ್ಲಿ ರಕ್ತ ಗೆಪ್ಪುಗಟ್ಟಿದ್ದು, ಹೃದಯದಿಂದ ಶ್ವಾಸಕೋಶದ ಪಲ್ಮನರಿವರೆಗೆ ಬ್ಲಾಕೇಜ್‌ ಆಗಿರೋದು ತಿಳಿದುಬಂದಿದೆ. ಅಲ್ಲದೇ ಎಡ ಗಾಲಿನ ರಕ್ತನಾಳ ಸಂಪೂರ್ಣ ಹೆಪ್ಪುಗಟ್ಟಿದ್ದು, ರಕ್ತ ಸಂಚಲನಕ್ಕೆ ಜಾಗ ಇಲ್ಲದೇ ಜಾಮ್‌ ಆಗಿತ್ತು . ಹಾಗಾಗೀ ಶ್ವಾಸಕೋಶದಲ್ಲಿ ರಕ್ತ ಸಂಚಲನ ಫುಲ್‌ ಬಂದ್‌ ಆಗಿತ್ತು. ರಕ್ತ ಕರಗಿಸೋಕೆ ಇಂಜೆಕ್ಚನ್‌ ನೀಡಿದ್ರೂ ರೋಗಿಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಬಳಿಕ ಅವರಿಗೆಸಿಟಿ ವಿನೋಗ್ರಾಮ್‌ ನಡೆಸಲಾಯ್ತು, ಅದರಲ್ಲಿ ಅವರಿಗೆ ಥ್ರಂಬೋಸಿಸ್‌ ಖಾಯಿಲೆ ಇರೋದು ತಿಳಿದು ಬಂದಿದೆ. ಅದಕ್ಕಾಗಿ ಪಲ್ಮನರಿ ಎಂಬೋಲೆಕ್ಟಮಿ ಹಾಗೂ ವೀಸನ್‌ ಥ್ರಂಬೆಕ್ಟಮಿ ಅಪರೇಷನ್‌ ಮಾಡಿಸುವ ಅಗತ್ಯತೆಯನ್ನು ಹೃದಯ ತಜ್ಞ ಡಾ ರಾಮ್‌ ನರೇಶ್‌ ಸೌದ್ರಿ ರೋಗಿಗೆ ತಿಳಿಸಿದ್ದಾರೆ.

ರೋಗಿಯ ಸಮಸ್ಯೆಗೆ ಕಾರಣವೇನೆಂದು ಹುಡುಕುತ್ತಾ ಇದ್ದ ವೈದ್ಯರಿಗೆ ತಿಳಿದು ಬಂದಿದ್ದು , ಅವರು ಹಾರ್ಮೋನಲ್‌ ಚಿಕಿತ್ಸೆ ಪಡೆಯುತ್ತಾ ಇದ್ದರು ಅನ್ನೋದು . ಅದರ ಪರಿಣಾಮವಾಗಿ ರೋಗಿಯೂ ಇಷ್ಟೊಂದು ಸಮಸ್ಯೆ ಎದುರಿಸ್ತಾ ಇರೋದು . ಹಾಗಾಗೀ ಅವರಿಗೆ ಅಪರೇಷನ್‌ ನಡೆಸಲಾಯ್ತು . ಮೊದಲಿಗೆ ಶ್ವಾಸಕೋಶದಲ್ಲಿ ಉಂಟಾಗಿರುವ ರಕ್ತದ ಕ್ಲಾಟನ್ನು ತೆಗೆದು ಬಳಿಕ ಐವಿಸಿ ಫಿಲ್ಟರ್‌ ಹಾಕಿ ಎಡಗಾಲಿನಲ್ಲಿನ ರಕ್ತನಾಳದಲ್ಲಿ ಹೆಪ್ಪುಗಟ್ಟಿರುವ ರಕ್ತವನ್ನು ತೆಗೆದು ಹಾಕಿಲಾಯ್ತು. ಬಳಿಕ ಅವರನ್ನು ಐಸಿಯು ಇಂದ ವಾರ್ಡ್‌ಗೆ ಒಂದೇ ದಿನದಲ್ಲಿ ಶಿಫ್ಟ್‌ ಮಾಡಲಾಗಿದೆ . ಮರುದಿನವೇ ಅವರು ಎಂದಿನಂತೆ ನಡೆಯುವುದಕ್ಕೆ ಅವಕಾಶವಾಗಿದೆ.

ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೇ ಎಂದಿನಂತೆ ಯುವತಿಯೂ ತಮ್ಮ ದೈನಂದಿನ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ ಹೃದಯ ತಜ್ಞ ಡಾ. ರಾಮ್‌ ನರೇಶ್‌ ಸೌದ್ರಿ .

Ramesh Babu

Journalist

Recent Posts

ಬಾಶೆಟ್ಟಿಹಳ್ಳಿ ಪಪಂಗೆ ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸರ್ಕಾರವು ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ…

1 hour ago

ಗೌರಿ ಗಣೇಶ ಹಬ್ಬ: ಜಿಲ್ಲೆಯಾದ್ಯಾಂತ ಪಟಾಕಿ, ಡಿಜೆ ಸಂಪೂರ್ಣ ನಿಷೇಧ-ಪಿಒಪಿ ಗಣೇಶ ವಿಗ್ರಹಗಳ ತಯಾರಿಕೆ, ಸಂಗ್ರಹಣೆ, ಸಾಗಾಣಿಕೆ, ಮಾರಾಟ ನಿಷೇಧ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಜಿಲ್ಲಾಧಿಕಾರಿ ಕರೆ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವುದರ ಜೊತೆಗೆ, ಸಾರ್ವಜನಿಕರು ಪರಿಸರಸ್ನೇಹಿಯಾಗಿ ಹಬ್ಬವನ್ನು…

2 hours ago

ಜೇನುತುಪ್ಪಕ್ಕೂ ವರುಣನ ಬರೆ! ಮಳೆ ಕೊರತೆ ಹಿನ್ನೆಲೆಯಲ್ಲಿ ಒಣಗಿದ ಸಸ್ಯಗಳು: ಆಹಾರ ಅರಸಿ ಕಿಮೀಗಟ್ಟಲೆ ಜೇನುಹುಳುಗಳ ವಲಸೆ: ಜೇನುತುಪ್ಪ ಉತ್ಪಾದನೆಗೆ ಹೊಡೆತ

ಬೆಂಗಳೂರು ಗ್ರಾಮಾಂತರ: ಬರದ ಪರಿಣಾಮ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಜೇನು ಕೃಷಿಯ ಮೇಲೂ ಬರದ ಛಾಯೆ…

6 hours ago

ಡಿಕೆ 100 ದಿನ, ನೆನಪಾದ ಮೋದಿ…

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರ 100ನೇ ದಿನದ ಸಾಧನಾ ಸಂಭ್ರಮದ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ…

11 hours ago

ಮಳೆ ಕೈಕೊಟ್ಟಿತು, ರಾಗಿ ಕೈಬಿಟ್ಟಿತು: ಬೆಳೆಗೇ ಟ್ರ್ಯಾಕ್ಟರ್ ಹರಿಸಿದ ರೈತ: ದೊಡ್ಡಬಳ್ಳಾಪುರವನ್ನೂ ಬರಪೀಡಿತ ತಾಲೂಕು ಎಂದು ಘೋಷಿಸಲು ಆಗ್ರಹ: 3.5 ಎಕರೆ ರಾಗಿ ಬೆಳೆ ನಾಶ

ದೊಡ್ಡಬಳ್ಳಾಪುರ: ಮಳೆ ಕೈಕೊಟ್ಟ ಪರಿಣಾಮ ಬಿತ್ತಿದ್ದ ರಾಗಿ ಬೆಳೆ ಒಣಗಿ, ಕೈಗೆ ಬಾರದ ಸ್ಥಿತಿಗೆ ತಲುಪಿದ ಹಿನ್ನೆಲೆಯಲ್ಲಿ ಬೇಸರಗೊಂಡ ರೈತರೊಬ್ಬರು…

22 hours ago

ಚಿಕ್ಕನಹಳ್ಳಿ ಡೇರಿಗೆ 2.07 ಲಕ್ಷ ನಿವ್ವಳ ಲಾಭ: ಹೈನುಗಾರಿಕೆ ರೈತರ ಆರ್ಥಿಕ ಮೂಲ- ಸಿ.ಅಮರೇಶ್

ಕೋಲಾರ: ತಾಲೂಕಿನ ವಕ್ಕಲೇರಿ ಹೋಬಳಿಯ ಚಿಕ್ಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು 2025–26ನೇ ಸಾಲಿನಲ್ಲಿ ₹2.07 ಲಕ್ಷ ನಿವ್ವಳ ಲಾಭ…

1 day ago