ಪೂರ್ವ ಭಾರತದ ಅರಣಾಚಲಪ್ರದೇಶ ರಾಜ್ಯದ ಯಿಂಗ್ಕು (Yingku) ಗ್ರಾಮದ ಅರಣ್ಯ ಪ್ರದೇಶದಲ್ಲಿ ಪರಾಪರಾಟ್ರೆಚಿನಾನೀಲಾ (Paraparatrechinaneela) ಎಂಬ ಅಪರೂಪದ ಜಾತಿಗೆ ಸೇರಿದ ನೀಲಿ ಬಣ್ಣದ ಇರುವೆ ಪತ್ತೆಯಾಗಿದೆ.
ಇತ್ತೀಚೆಗೆ ಬೆಂಗಳೂರಿನ ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ಎನ್ವಿರಾನ್ಮೆಂಟ್(ATREE) ಸಂಸ್ಥೆಯ ಕೀಟ ಶಾಸ್ತ್ರಜ್ಞರಾದ ಡಾ.ಪ್ರಿಯದರ್ಶನನ್ ಧರ್ಮರಾಜನ್ ಮತ್ತು ಆರ್.ಸಹನಶ್ರೀ, ಫ್ಲೋರಿಡಾ ವಿಶ್ವವಿದ್ಯಾಲಯದ ಅಶ್ವಜ್ ಪುನ್ನತ್ ಜೊತೆಗೂಡಿ ಈ ಇರುವೆಯ ವೈಜ್ಞಾನಿಕ ವಿವರಣೆಯನ್ನು ಜೋಕಿಯಾ (ZooKeys) ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ದೊಡ್ಡಬಳ್ಳಾಪುರದ ಕೀಟಶಾಸ್ತ್ರಜ್ಞರಾದ ಆರ್.ಸಹನಶ್ರೀ ‘ಅರುಣಾಚಲ ಪ್ರದೇಶದ ಯಿಂಗ್ಕು ಗ್ರಾಮದ ಸುಮಾರು 10 ಅಡಿ ಎತ್ತರದ ಮರವನ್ನು ಅನ್ವೇಷಿಸುವಾಗ, ಎರಡು ಇರುವೆಗಳನ್ನು ಗುರುತಿಸಲಾಗಿತ್ತು. ಇವು ಹೊಸ ಇರುವೆಗಳು ಎಂದು ಸಂಶೋಧನೆಯಲ್ಲಿ ಕಂಡುಕೊಳ್ಳಲಾಯಿತು’ ಎಂದರು.
ಈ ಇರುವೆಯ ಗುಣಲಕ್ಷಣ
ಪರಾಪರಾಟ್ರೆಚಿನಾನೀಲಾ ಒಂದು ಸಣ್ಣ ಇರುವೆಯಾಗಿದ್ದು, ಒಟ್ಟು ಉದ್ದ 2 ಮಿ.ಮೀ ಗಿಂತ ಕಡಿಮೆಯಿದೆ. ಆಂಟೆನಾಗಳು, ದವಡೆಗಳು ಮತ್ತು ಕಾಲುಗಳನ್ನು ಹೊರತುಪಡಿಸಿ ಇದರ ದೇಹವು ಪ್ರಧಾನವಾಗಿ ಲೋಹೀಯ ನೀಲಿ ಬಣ್ಣದ್ದಾಗಿದೆ. ತಲೆಯು ದೊಡ್ಡ ಕಣ್ಣುಗಳೊಂದಿಗೆ ಉಪ ತ್ರಿಕೋನವಾಗಿದೆ ಮತ್ತು ಐದು ಹಲ್ಲುಗಳನ್ನು ಒಳಗೊಂಡಿರುವ ತ್ರಿಕೋನ ಮುಖಭಾಗವನ್ನು (ಮಂಡಬಲ್) ಹೊಂದಿದೆ. ಈ ಇರುವೆಯು ವಿಶಿಷ್ಟವಾದ ಲೋಹೀಯ ನೀಲಿ ಬಣ್ಣವನ್ನು ಹೊಂದಿದೆ. ಇರುವೆ ಕುಲದ ಯಾವುದೇ ಜಾತಿಗಳಿಗಿಂತ ಭಿನ್ನವಾಗಿದೆ.
ನೀಲಿ ಬಣ್ಣದ ವಿಶಿಷ್ಟತೆ
ಪ್ರಾಣಿ ಸಂಕುಲದಲ್ಲಿ ನೀಲಿ ಬಣ್ಣವು ಅಪರೂಪ. ಆದರೆ ಕೆಲವು ಮೀನು, ಕಪ್ಪೆಗಳು ಮತ್ತು ಪಕ್ಷಿಗಳು ಹಾಗೆಯೇ ಜೇಡಗಳು, ನೊಣಗಳು ಮತ್ತು ಕಣಜಗಳು ನೀಲಿ ಬಣ್ಣವನ್ನು ಪ್ರದರ್ಶಿಸುತ್ತವೆ. ಕೀಟಗಳಲ್ಲಿ, ನೀಲಿ ಬಣ್ಣವು ಹೆಚ್ಚಾಗಿ ಬಯೊಫೋಟೊನಿಕ್ನ್ಯಾನೊಸ್ಟ್ರಕ್ಚರ್ಗಳ ಜೋಡಣೆಯಿಂದ ಉತ್ಪತ್ತಿಯಾಗುತ್ತದೆ ಮತ್ತು ರಚನಾತ್ಮಕ ಬಣ್ಣಗಳನ್ನು ಸೃಷ್ಟಿಸುತ್ತದೆ. ಚಿಟ್ಟೆಗಳು, ಜೀರುಂಡೆಗಳು, ಜೇನು ನೊಣಗಳು ಮತ್ತು ಕಣಜಗಳಂತಹ ಕೆಲವು ಕೀಟಗಳಲ್ಲಿ ನೀಲಿ ಬಣ್ಣವು ಸಾಮಾನ್ಯವಾಗಿ ಕಂಡುಬಂದರೆ, ಇರುವೆಗಳಲ್ಲಿ ಇದು ಅಪರೂಪ. ಪ್ರಪಂಚದಾದ್ಯಂತ ತಿಳಿದಿರುವ 16,724 ಜಾತಿಗಳು ಮತ್ತು ಇರುವೆಗಳ ಪ್ರಬೆದಗಳಲ್ಲಿ ಕೆಲವು ಮಾತ್ರ ನೀಲಿ ಬಣ್ಣವನ್ನು ಪ್ರದರ್ಶಿಸುತ್ತವೆ ಎಂದು ನೀಲಿ ಬಣ್ಣದ ಇರುವ ವಿಶಿಷ್ಟತೆಯನ್ನು ವಿವರಿಸಿದರು.
ಪರಾಪರಾಟ್ರೆಚಿನಾ ನೀಲಾ ಆವಿಷ್ಕಾರವು ಇರುವೆ ವೈವಿಧ್ಯತೆಯ ಶ್ರೀಮಂತಿಕೆಗೆ ಕೊಡುಗೆ ನೀಡುತ್ತದೆ ಮತ್ತು ಪೂರ್ವ ಹಿಮಾಲಯದ ವಿಶಿಷ್ಟ ಜೀವವೈ ವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಇರುವೆಯ ನೀಲಿ ಬಣ್ಣವು ಕುತೂಹಲಕಾರಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ನೀಲಿ ಬಣ್ಣವು ಇರುವೆಯ ಸಂವಹನ, ಮರೆ ಮಾಚುವಿಕೆ ಅಥವಾ ಇತರ ಪರಿಸರ ಸಂವಹನಗಳಲ್ಲಿ ಸಹಾಯ ಮಾಡುತ್ತದೆಯೇ? ಈ ಎದ್ದು ಕಾಣುವ ಬಣ್ಣಗಳ ವಿಕಸನ ಸಂಶೋಧನೆಗೆ ಒಂದು ಉತ್ತೇಜಕ ಮಾರ್ಗವನ್ನು ಒದಗಿಸುತ್ತದೆ ಎಂದರು.
ಇದಾಗಿ ಒಂದು ಶತಮಾನದ ನಂತರ ಬೆಂಗಳೂರಿನ ಏಟ್ರಿಯ (ATREE) ಯಸಂಶೋಧಕರ ತಂಡ ಮತ್ತು ಫೆಲಿಸ್ಕ್ರಿಯೇಷನ್ಸ್ ತಂಡವು ‘ಸಿಯಾಂಗ್ ಎಕ್ಸ್ಪೆಡಿಶನ್’ ಬ್ಯಾರ್ ಅಡಿಯಲ್ಲಿ ಈ ಪ್ರದೇಶದ ಜೀವ ವೈವಿಧ್ಯವನ್ನು ಮರು ಸಮೀಕ್ಷೆ ಮಾಡಲು ಮತ್ತು ದಾಖಲಿಸಲು ದಂಡಯಾತ್ರೆಗಳ ಸರಣಿಯನ್ನು ಪ್ರಾರಂಭಿಸಿದೆ. ಈ ದಂಡಯಾತ್ರೆಗೆ ನ್ಯಾಷನ್ ಜಿಯೋಗ್ರಾಪಿಕ್ ಸೋಸೈಟಿಯು(National Geographic Society) ವನ್ಯಜೀವಿ ಸಂರಕ್ಷಣ ದಂಡಯಾತ್ರೆಯ ಅನುದಾನದ ಮೂಲಕ ಅನುದಾನ ನೀಡಿದೆ. ಈ ದಂಡಯಾತ್ರೆ ಸಮಯದಲ್ಲಿ ಒಂದು ಹೊಸ ಉಪಕುಟುಂಬ, 6 ಹೊಸ ತಳಿಗಳು ಮತ್ತು 40 ಕ್ಕೂ ಹೆಚ್ಚು ಹೊಸ ಪ್ರಭೇದಗಳನ್ನು ಏಟ್ರಿಯ ಕೀಟಶಾಸ್ತ್ರಜ್ಞರು ಪತ್ತೆಮಾಡಿದ್ದಾರೆ.
ಹಿಮಾಲಯದ ಜೀವವೈವಿಧ್ಯದ ಹಾಟ್ಸ್ಪಾಟ್ನಲ್ಲಿ (biodiversity hotspot) ನೆಲೆಗೊಂಡಿರುವ ಅರುಣಾಚಲಪ್ರದೇಶದ ಸಿಯಾಂಗ್ ಕಣಿವೆಯು ಸಾಟಿಯಿಲ್ಲದ ವೈವಿಧ್ಯತೆಯ ಜಗತ್ತನ್ನು ಹೊಂದಿದೆ. ಇದರಲ್ಲಿ ಹೆಚ್ಚಿನದನ್ನು ಇನ್ನೂ ಅನ್ವೇಷಿಸಬೇಕಾಗಿದೆ.
ಸಾಂಸ್ಕೃತಿಕ ಮತ್ತು ಪರಿಸರ ಶ್ರೀಮಂತಿಕೆ ಇರುವ ಈ ಅಭೂತಪೂರ್ವ ಪ್ರದೇಶ ಆಪತ್ತುಗಳನ್ನು ಎದುರಿಸುತ್ತಲೆ ಇದೆ. ಹವಾಮಾನ ಬದಲಾವಣೆಯ ಜೊತೆಗೆ ಅಣೆಕಟ್ಟುಗಳು, ಹೆದ್ದಾರಿಗಳು ಮತ್ತು ಮಿಲಿಟರಿ ಸ್ಥಾಪನೆಗಳಂತಹ ದೊಡ್ಡ ಪ್ರಮಾಣದ ಮೂಲ ಸೌಕರ್ಯ ಯೋಜನೆಗಳು ಈ ಕಣಿವೆಯನ್ನು ವೇಗವಾಗಿ ಬದಲಾಯಿಸುತ್ತಿವೆ.
ಈ ಪರ್ವತಗಳು ತಮ್ಮದೇ ಆದ ವೈವಿಧ್ಯಮಯ ಪರಿಸರ ವ್ಯವಸ್ಥೆಗಳನ್ನು ಉಳಿಸಿಕೊಳ್ಳುವಲ್ಲಿ ಮಾತ್ರವಲ್ಲದೆ ಕಣಿವೆಯ ಕೆಳಭಾಗದಲ್ಲಿ ವಾಸಿಸುವ ಲಕ್ಷಾಂತರ ಜನರ ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ ಇದರ ಪ್ರಭಾವವು ಆಪಾರ ಎನ್ನುವುದು ಡಾ.ಪ್ರಿಯದರ್ಶನನ್ ಧರ್ಮರಾಜನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಖ್ಯಮಂತ್ರಿ ಮೆಚ್ಚುಗೆ
ನೀಲಿ ಬಣ್ಣದ ಅಪರೂಪದ ಇರುವೆ ಪತ್ತೆ ಮಾಡಿರುವ ತಂಡದ ಬಗ್ಗೆ ಮೆಚ್ಚುಗೆ ಸೂಚಿಸಿ ‘ಸಿಯಾಂಗ್ ಕಣಿವೆಯಲ್ಲಿ ಸಂಶೋಧಕರು ಪರಾಪರಾಟ್ರೆಚಿನಾ ನೀಲಾ ಎಂಬ ಹೊಸ ಇರುವೆಯ ಆವಿಷ್ಕಾರವು ಅರುಣಾಚಲ ಪ್ರದೇಶದ ವೈವಿಧ್ಯಮಯ ಜೀವ ವೈವಿಧ್ಯದ ಶ್ರೀಮಂತಿಕೆಯನ್ನು ಮತ್ತಷ್ಟು ಒತ್ತಿಹೇಳುತ್ತದೆ. ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಪ್ರಾಣಿಗಳನ್ನು ಸಂರಕ್ಷಿಸೋಣ’ ಎಂದು ‘ಅರುಣಾಚಲಪ್ರದೇಶ ರಾಜ್ಯ ಮುಖ್ಯಮಂತ್ರಿ ಪ್ರೇಮ ಖಂಡು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹಾಗೆಯೇ ನೀಲಿ ಬಣ್ಣದ ಇರುವೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…