ಗಂಡ ಹೆಂಡತಿ ಜಗಳ ಉಂಡು ಮಲಗೋ ವರೆಗೆ ಅಂತಾ ಇರಬೇಕು. ಆದರೆ ಕೆಲವೊಂದು ಬಾರಿ ಗಂಡ ಹೆಂಡತಿ ಜಗಳ ಮಿತಿ ಮೀರಿದರೆ ಒಂದೊಂದು ಸಲ ಏನ್ ಆಗುತ್ತೋ ಅನ್ನೋದು ಊಹೆಗೆ ಸಿಕ್ಕುವುದಿಲ್ಲ. ಗಂಡ ಹೆಂಡತಿ ಜಗಳ ಮಾಡಿಕೊಳ್ಳುವ ಮುನ್ನ ಒಂದು ಸಲ ಅಲೋಚನೆ ಮಾಡಬೇಕು. ಆದ್ರೆ ಇಲ್ಲೊಂದು ಜೋಡಿ ಯಾವುದು ಯೋಚನೆ ಮಾಡ್ದೆ ದೊಡ್ಡದೊಂದು ಅನಾಚಾರ ನಡೆದು ಹೋಗಿದೆ..
ಸತ್ತು ಮಲಗಿರುವ ಗಂಡ.. ರಕ್ತದ ಮಡುವಿನಲ್ಲಿ ಬಿದ್ದಿರುವ ಹೆಂಡತಿ.. ಘಟನೆ ಸ್ಥಳದಲ್ಲಿ ಇಂಚು ಇಂಚು ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು…. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ಕಂಡು ಬಂದಿದ್ದು..
ಹೌದು ಗಂಡ ಮೊದಲು ಹೆಂಡತಿಯನ್ನ ಜಿಮ್ ಡಂಬಲ್ಸ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ ನಂತರ ಕಾರಣಾಂತರಗಳಿಂದ ಗಂಡ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಜಯಪುರ ಪಟ್ಟಣದ ಬಸವಚಾರಿ ಅಲಿಯಾಸ್ ಶಾಮ್ (40) ಮತ್ತು ಸುಮಾ (35) ಮೃತ ದುರ್ದೈವಿಗಳು. ಶಾಮಣ್ಣ ಮತ್ತು ಸುಮಾ ಮಕ್ಕಳು ಶಾಲೆಯಿಂದ ಬಂದ ನಂತರ ಘಟನೆ ಹೊರ ಬಂದಿದೆ.
ಶಾಮಣ್ಣ ಮತ್ತು ಸುಮಾ ಇಬ್ಬರ ನಡುವೆ ಕೌಟುಂಬಿಕ ಕಲಹ ಸಾಕಷ್ಟು ದಿನಗಳಿಂದ ನಡೆಯುತ್ತಿದ್ದು, ಇದು ಅತಿರೇಕಕ್ಕೆ ಹೋಗಿ ಜಗಳ ಉಂಟಾಗಿ ಇಬ್ಬರ ಪ್ರಾಣ ಹೋಗಿದೆ. ಇನ್ನೂ ಇಬ್ಬರೂ ಗಂಡು ಮಕ್ಕಳು ಇದ್ದು, ಗಂಡ ಹೆಂಡತಿ ಕಲಹಕ್ಕೆ ಮಕ್ಕಳು ಅನಾಥಾರಾಗಿದ್ದಾರೆ. ಸದ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿ.ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಘಟನೆ ವಿಜಯಪುರ ಪಟ್ಟಣದ ಹೊರವಲಯದಲ್ಲಿ ನಡೆದಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಿಂದ ವಿಜಯಪುರ ಪಟ್ಟಣದ ಬೆಚ್ಚಿ ಬಿದ್ದಿದೆ.
ಒಟ್ಟಾರೆ ಗಂಡ ಹೆಂಡತಿ ಜಗಳ ಹೆಂಡತಿ ಉಂಡು ಮಲಗೋ ವರೆಗೂ ಅಂತಾ ಇರಬೇಕು ಆದ್ರೆ ಮುಂದುವರೆದರೆ ವಿಕೋಪಕ್ಕೆ ತಲುಪುತ್ತದೆ. ಅದಕ್ಕೊಂದು ತಾಜಾ ಉದಾಹರಣೆ ಇಂದು ವಿಜಯಪುರ ಪಟ್ಟಣದಲ್ಲಿ ನಡೆದಿರುವ ಘಟನೆ. ಹೆಂಡತಿಯನ್ನ ಕೊಲೆ ಮಾಡಿ ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದು ಅಸಲಿ ಸತ್ಯ ಪೋಲಿಸರ ತನಿಖೆಯಿಂದ ಹೊರಬರಬೇಕಾಗಿದೆ.
ದೊಡ್ಡಬಳ್ಳಾಪುರ: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಅಗತ್ಯ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ದೊರೆಯುವಂತೆ ಸಮಾಜದ…
ದೊಡ್ಡಬಳ್ಳಾಪುರ: ಕಸ ವಿಂಗಡಣೆ ಮಾಡುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಎಂಎಸ್‌ಜಿಪಿ ಕಸ ಸಂಸ್ಕರಣಾ ಘಟಕದಲ್ಲಿ…
ದೇಶದ ಪ್ರಧಾನಿಯೊಬ್ಬರು ಹೀಗೂ ಬದುಕಬಹುದು ಎಂದು ತೋರಿಸಿ ಮಾದರಿಯಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.......…
2026-27ನೇ ಸಾಲಿನ ಮುಂಗಾರು ಹಂಗಾಮಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಹೆಸರುಕಾಳು ಹಾಗೂ ಸೋಯಾಬೀನ್ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಹೂಡಿಕೆದಾರರು ಹಾಗೂ ಬಂಡವಾಳಶಾಹಿಗಳ ಹಿತಾಸಕ್ತಿಯ ಬಗ್ಗೆಯೇ…
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುವ ಬಿಎಲ್‌ಒ ಅಥವಾ…