Categories: ಕೋಲಾರ

ಹಾಲು ದುಡ್ಡು ತಿಂದವರು ಯಾರು ಉದ್ದಾರ ಆಗಲ್ಲ- ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್

ಕೋಲಾರ: ಜಿಲ್ಲೆಯ ಬಹುತೇಕ ಜನರ ಜೀವನಾಧಾರ ಹೈನುಗಾರಿಕೆಯಾಗಿದೆ. ಮಹಿಳೆಯರು ಮತ್ತು ರೈತರ ಬೆವರು ಇದರಲ್ಲಿ ಅಡಗಿದೆ.ಹಾಲಿನ ಹಣ ತಿಂದವರು ಯಾವುದೇ ಕಾರಣಕ್ಕೂ ಉದ್ದಾರವಾಗಲ್ಲ ಎಂದು ಕೋಮುಲ್ ನಿರ್ದೇಶಕ ಚಂಜಿಮಲೆ ಬಿ ರಮೇಶ್ ತಿಳಿಸಿದರು.

ತಾಲೂಕಿನ ಚಂಜಿಮಲೆ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು ಹಾಲಿಗೂ ನೀರಿಗೂ ತುಂಬಾ ವ್ಯತ್ಯಾಸವಿದೆ. ಕಲಬೆರಕೆ ಮಾಡಬೇಡಿ. ಯಾವುದಾದರೂ ತಪ್ಪು ಕಂಡುಬಂದರೆ ಕೂಡಲೇ ಪ್ರಶ್ನೆ ಮಾಡಬೇಕು. ಹಾಲಿನ ದುಡ್ಡು ತಿನ್ನಂದರೆ ರೈತರು ಮಹಿಳೆಯರ ಶಾಪ ತಟ್ಟುತ್ತದೆ ಹಾಲು ದುಡ್ಡು ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಚಂಜಿಮಲೆ ಡೇರಿಯಲ್ಲಿ ಈ ಸಾಲಿನಲ್ಲಿ 13 ಲಕ್ಷ ವ್ಯಾಪಾರ ಗಳಿಸಿದ್ದು ಅದರಲ್ಲಿ 7.46 ಲಕ್ಷದಷ್ಟು ನಿವ್ವಳ ಲಾಭಗಳಿಸಿದೆ ಉತ್ಪಾದಕರು ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಉತ್ತಮ ಲಾಭಾಂಶವನ್ನು ಪಡೆಯಬೇಕು ಕಾಲಕಾಲಕ್ಕೆ ರಾಸುಗಳಿಗೆ ವಿಮೆ, ವಾಕ್ಸಿನ್ ಮಾಡಿಸಬೇಕು ಜೊತೆಗೆ ಉತ್ಪಾದಕರು ಕಡ್ಡಾಯವಾಗಿ ಯಶಸ್ವಿನಿ ಯೋಜನೆ ಮಾಡಿಸಿ ಅದರ ಪ್ರಯೋಜನವನ್ನು ಪಡೆಯಬೇಕು ಕೋಮುಲ್ ವತಿಯಿಂದ ಎಂವಿಕೆ ಡೇರಿ, ಸೋಲಾರ್ ಘಟಕದ ಮೂಲಕ ಹಾಲು ಉತ್ಪಾದಕರಿಗೆ ಅನುಕೂಲವಾಗುವಂತೆ ಒಕ್ಕೂಟ ಮಾಡಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಮುನೇಶ್ ಮಾತನಾಡಿ ಒಕ್ಕೂಟಕ್ಕೆ ಸಂಘಗಳು ಆಧಾರಸ್ಥಂಭವಾಗಿದ್ದು ಯಾವುದೇ ಕಾರಣಕ್ಕೂ ಒಕ್ಕೂಟದಲ್ಲಿ ಹಣ ಪೋಲು ಆಗದಂತೆ ಚಂಜಿಮಲೆ ಡೇರಿಯಿಂದ ಪ್ರತಿನಿಧಿಸಿ ಆಯ್ಕೆಯಾದ ಕೋಮುಲ್ ನೂತನ ನಿರ್ದೇಶಕರು ಕ್ರಮ ವಹಿಸಬೇಕಾಗಿದೆ ಮಹಿಳೆಯರು ರೈತರ ಧ್ವನಿಯಾಗಿ ಕೋಮುಲ್ ಆಡಳಿತ ಮಂಡಳಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಚಂಜಿಮಲೆ ಡೇರಿ ಉಪಾಧ್ಯಕ್ಷ ಎನ್ ಶ್ರೀರಾಮಪ್ಪ, ನಿರ್ದೇಶಕರಾದ ಇ ಚಂದ್ರಪ್ಪ, ನರಸಿಂಹಪ್ಪ, ಪ್ರಸನ್ನ, ಅಲ್ಲಾಭಕಾಷ್, ದೇವರಾಜ್, ರಾಜಪ್ಪ, ಪುಷ್ಪ, ಗೌರಮ್ಮ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಸಿ.ಎನ್ ಪಾಪಣ್ಣ, ಹಾಲು ಪರೀಕ್ಷಕ ಶ್ರೀನಿವಾಸಯ್ಯ, ಸಹಾಯಕ ಮೋಹನ್ ಸೇರಿದಂತೆ ಹಾಲು ಉತ್ಪಾದಕರ ಗ್ರಾಮಸ್ಥರು ಇದ್ದರು‌.

Ramesh Babu

Journalist

Recent Posts

ಗುತ್ತಿಗೆದಾರರಿಂದ ಲಂಚ ವಸೂಲಿ ಶಂಕೆ; ಎಂಜಿನಿಯರ್ ಬಳಿ 21.88 ಲಕ್ಷ ನಗದು ಪತ್ತೆ!

ಒಡಿಶಾ: ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಆಧಾರದ ಮೇಲೆ ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,…

5 hours ago

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

9 hours ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

12 hours ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

23 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

1 day ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

1 day ago