Categories: ಕೋಲಾರ

ಹಾಲು ಉತ್ಪಾದಕರ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕೋಮುಲ್ ಆಡಳಿತಾಧಿಕಾರಿ ಮೈತ್ರಿಗೆ ಮನವಿ

ಕೋಲಾರ: ಹಾಲು ಉತ್ಪಾದಕರಿಗೆ ಲೀಟರ್ ಗೆ 5 ರೂ ಹೆಚ್ಚಳ ಸೇರಿದಂತೆ ಉತ್ಪಾದಕರ ಮತ್ತು ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಲು ಡೇರಿ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶುಕ್ರವಾರ ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ವಿಟ್ಟಪ್ಪನಹಳ್ಳಿ ಡೇರಿ ವೆಂಕಟೇಶ್ ಮಾತನಾಡಿ ಪ್ರತಿ ವರ್ಷ ಸಂಕ್ರಾಂತಿ ಸಂದರ್ಭದಲ್ಲಿ ಹಾಲು ಖರೀದಿ ದರ ಹೆಚ್ಚಿಸಲಾಗುತ್ತಿತ್ತು ಈ ಬಾರಿ ಬೇಸಿಗೆ ಪ್ರಾರಂಭವಾಗಿದ್ದರೂ ಹೆಚ್ಚಳ ಮಾಡಿಲ್ಲ ಕೂಡಲೇ ಹಾಲಿನ ದರ ಲೀ.5 ರೂ ಹೆಚ್ಚಳ ಮಾಡಬೇಕು ಒಕ್ಕೂಟದಿಂದ ಪ್ರಾಥಮಿಕ ಸಂಘಳಿಗೆ ಮೂರು ವಾರಗಳ ಬಟವಾಡೆ ಬಾಕಿ ಇದ್ದು ಸಂಘಗಳು ಮತ್ತು ಉತ್ಪಾದಕರ ಮಧ್ಯೆ ಗಲಾಟೆಗಳಿಗೆ ಕಾರಣವಾಗಿದ್ದು ಬಾಕಿ ಉಳಿದಿಕೊಂಡಿರುವ ಬಟವಾಡೆವನ್ನು ಕೂಡಲೇ ಸಂಘಗಳ ಖಾತೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದರು.

ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದ್ದು ವಾತಾವರಣದ ಪರಿಣಾಮ ಹಾಲಿನ ಗುಣಮಟ್ಟ ಕಡಿಮೆಯಾಗುತ್ತಿದೆ ಒಕ್ಕೂಟದ 0.5 ಗುಣಮಟ್ಟದ ವ್ಯತ್ಯಾಸವನ್ನು ಪರಿಗಣಿಸಿ ಉತ್ಪಾದಕರಿಗೆ ಉಂಟಾಗುವ ನಷ್ಟವನ್ನು ಸರಿಪಡಿಸಬೇಕು, ಉತ್ಪಾದಕರ ಬಳಿ ರಾಸುಗಳಿಗೆ ವಿಮೆ ಮಾಡಿಸುವ ಸಂದರ್ಭದಲ್ಲೇ ಡೇರಿಯ ಬಟವಾಡದಲ್ಲಿ ಹಣ ಕಡಿತ ಮಾಡಲಾಗುತ್ತದೆ ಆದರೆ ರಾಸುಗಳಿಗೆ ಕೊಡಬೇಕಾದರೆ ಕನಿಷ್ಠ ಆರು ತಿಂಗಳು ಆಗುತ್ತದೆ ರಾಸುಗಳು ಮರಣ ಹೊಂದಿದ ಕೂಡಲೇ ವಿಮಾ ಮೊತ್ತವನ್ನು ಉತ್ಪಾದಕರ ಕೈಸೇರುವಂತೆ ಮಾಡಬೇಕು ಬಿಎಂಸಿಗಳ ನಿರ್ವಹಣಾ ವೆಚ್ಚ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.

ವಿವಿಧ ಸಂಘಗಳ ಕಾರ್ಯದರ್ಶಿಗಳು ಮಾತನಾಡಿ ಪ್ರಾಥಮಿಕ ಡೇರಿಗಳಿಂದ ಒಕ್ಕೂಟವಿದೆ ಎಂಬುದನ್ನು ಅಧಿಕಾರಿಗಳು ಮರೆಯಬಾರದು ಸಾಫ್ಟ್‌ವೇರ್ ಹೆಸರಿನಲ್ಲಿ ಸಂಘಗಳಿಗೆ ತೊಂದರೆಯಾಗಿದೆ ಮೊದಲು ಒಕ್ಕೂಟದಲ್ಲಿ ಸಾಫ್ಟ್‌ವೇರ್ ಅಳವಡಿಸಿಕೊಳ್ಳಿ ನಂತರ ಸಂಘಗಳಿಗೆ ಆದೇಶ ಮಾಡಲಿ, ಮೂಲಭೂತ ಸೌಕರ್ಯಗಳ ಹೆಸರಿನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ ಅದರ ಬಗ್ಗೆ ಮೊದಲು ಕ್ರಮವಾಗಬೇಕು ಎಂದು ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಹಾಗೂ ಮ್ಯಾನೇಜರ್ ಚೇತನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಮನವಿ ಸ್ವೀಕರಿಸಿ ಮಾತನಾಡಿದ ಆಡಳಿತಾಧಿಕಾರಿ ಡಾ.ಮೈತ್ರಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದೇ ಇರುವುದೇ ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಹಾಲು ಉತ್ಪಾದಕರು ಹಾಗೂ ಡೇರಿ ನೌಕರರಿಗೆ ಅನುಕೂಲ ಮಾಡಲು ನಾನು ಇರುವಷ್ಟು ದಿನದಲ್ಲಿ ಪ್ರಾಮಾಣಿಕವಾಗಿ ಮಾಡತ್ತೇನೆ ಜೊತೆಗೆ ರಾಸುಗಳಿಗೆ ವಿತರಿಸುತ್ತಿರುವ ವಿಮಾ ಏಜೆನ್ಸಿಯನ್ನು ಬದಲಾವಣೆ ಮಾಡಲಾಗುತ್ತದೆ ಈ ತಿಂಗಳೊಳಗೆ ನಿಮ್ಮ ಬೇಡಿಕೆಗಳ ಈಡೇರಿಕೆಗೆ ಕೂಡಲೇ ಸಭೆ ಕರೆದು ತೀರ್ಮಾನ ತೆಗೆದುಕೊಂಡು ಉತ್ಪಾದಕರ ಮತ್ತು ನೌಕರರ ಹಿತ ಕಾಯುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು

ಈ ಸಂದರ್ಭದಲ್ಲಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚಿನ್ನಹಳ್ಳಿ ಗೋಪಾಲ್, ಉಪಾಧ್ಯಕ್ಷ ಮಿಂಡಹಳ್ಳಿ ಮುನಿರಾಜು, ಪ್ರಧಾನ ಕಾರ್ಯದರ್ಶಿ ಬಗಲಹಳ್ಳಿ ನಾಗೇಶಗೌಡ, ಖಜಾಂಚಿ ವಕ್ಕಲೇರಿ ನಾಗರಾಜ್, ಚಿಂತಾಮಣಿ ಕೆಂಪರೆಡ್ಡಿ, ಜಿಲ್ಲಾ ಸಮಿತಿ ನಿರ್ದೇಶಕರಾದ ಎಸ್.ಎಂ ಗೋಪಾಲ್, ಮದನಹಳ್ಳಿ ರಮೇಶ್, ತಾಲೂಕು ಅಧ್ಯಕ್ಷ ತೊಂಡಾಲ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ತಿಮ್ಮೇಗೌಡ, ಮುಖಂಡರಾದ ಗಂಗಾಪುರ ಬಾಬು, ಮಿಟ್ಟಮಾಲಹಳ್ಳಿ ಮಂಜುನಾಥ್, ಮುದುವಾಡಿಹೊಸಹಳ್ಳಿ ಮೋಹನ್, ಚಿನಪನಹಳ್ಳಿ ಗೋಪಾಲ್, ವೆಂಕಟಾಪುರ ಶ್ರೀನಿವಾಸ್, ಅಲಹಳ್ಳಿ ಮಂಜುನಾಥ್ ಮುಂತಾದವರು ಇದ್ದರು

Ramesh Babu

Journalist

Recent Posts

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ವಿವರ

3 hours ago

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

5 hours ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

8 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

9 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

16 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

16 hours ago