ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸತೀಶ್ ಕುಮಾರ್ ಮತ್ತು ಪಿಡಿಒ ಶಿವಾನಂದ ಮರಕೇರಿಯದ್ದೇ ದರ್ಬಾರ್ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದು, ಈ ಕುರಿತು ಮಾಧ್ಯಮಗಳು ಸವಿಸ್ತಾರವಾಗಿ ವರದಿ ಮಾಡಿದ್ದವು. ಜೊತೆಗೆ ಶಾಸಕ ಧೀರಜ್ ಮುನಿರಾಜ್ ಅವರಿಗೂ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರ ಕುರಿತು ಹೆಚ್ಚು ದೂರು ಹೊದ ಕಾರಣ ಪಂಚಾಯತಿ ಪಿಡಿಒಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿನ ಪಿಡಿಒ ಇ ಖಾತೆ ಮಾಡಲು 25 ಸಾವಿರಕ್ಕೂ ಹೆಚ್ಚು ಹಣವನ್ನ ಲಂಚ ಪಡೆಯುತ್ತಿದ್ದರು. ಹಣ ಕೊಟ್ಟವರಿಗೆ ಕೆಲಸ, ಇಲ್ಲದಿದ್ದರೆ ವಾಪಸ್ ಆಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಹಾಗಾಗಿ ಶಾಸಕ ಧೀರಜ್ ಮುನಿರಾಜ್ ಗಮನಕ್ಕೆ ಬಂದ ಕೂಡಲೇ, ಪಿಡಿಒಗೆ ಕರೆ ಮಾಡಿ ಜನರ ಪರ ಕೆಲಸ ಮಾಡಬೇಕು, ಈ ರೀತಿಯ ದೂರುಗಳು ಪದೇ ಪದೇ ಬರುತ್ತಲೇ ಇವೆ. ಹೀಗೆ ಮುಂದುವರೆದರೆ financial misappropriation ಕ್ರಮಕ್ಕೆ ಬರೆದು ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮಿತಿ ಮೀರಿದ ಇ ಖಾತೆ ಹೆಸರಲ್ಲಿ ಹಗಲು ದರೋಡೆ
ತಾಲೂಕಿನ ಹಾದ್ರೀಪುರ ಪಂಚಾಯತಿಯಲ್ಲಿ ಇ ಖಾತೆ ಅಕ್ರಮ ಜೋರಾಗಿ ಮುಂದುವರೆದಿದೆ. ಹಣ ಇಲ್ಲದೆ ಯಾವುದೇ ದಾಖಲೆಗಳು ಈ ಗ್ರಾಮದಲ್ಲಿ ಆಗಲ್ಲ. ಈ ವಿಚಾರವಾಗಿ ಸಾಕಷ್ಡು ಬಾರಿ ಪಿಡಿಓ ವಿರುದ್ದ ಶಾಸಕರಿಗೆ ದೂರು ನೀಡಿದ್ದೇವೆ ಎಂದು ಚೆನ್ನಲಕ್ಷ್ಮಯ್ಯ ಹೇಳಿದರು.
ಇನ್ನಾದರೂ ಅಧಿಕಾರಿ ಬದಲಾಗಿ ಜನ ಪರ ಕೆಲಸ ಮಾಡುತ್ತಾರಾ ಕಾದು ನೋಡಬೇಕಿದೆ….
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…
ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್…
ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…