Categories: ಕೋಲಾರ

ಹರಟಿ ಅರಣ್ಯ ಜಂಟಿ ಸರ್ವೆ ಅನುಮಾನ ಮೂಡಿದೆ, ರೈತ ಶ್ರೀನಿವಾಸನ್ ಆರೋಪ

ಕೋಲಾರ: ತಾಲೂಕಿನ ಹುತ್ತೂರು ಹೋಬಳಿಯ ವ್ಯಾಪ್ತಿಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ವತಿಯಿಂದ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಆದರೆ ಸರಿಯಾಗಿ ನಡೆಯುತ್ತಿದೆಯೇ ಎಂಬ ಅನುಮಾನ ಈ ಭಾಗದ ರೈತರಿಗೆ ಕಾಡುತ್ತಿದೆ ಎಂದು ರೈತ ಮುಖಂಡ ಶ್ರೀನಿವಾಸನ್ ತಿಳಿಸಿದರು

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅರಣ್ಯ ಇಲಾಖೆಯ ಹತ್ತಿರವಿರುವ ದಾಖಲೆ ‌ಪತ್ರಗಳ ಬಗ್ಗೆಯೇ ಅನುಮಾನವಿದೆ ಕಂದಾಯ ಇಲಾಖೆಯಲ್ಲಿ ಪುರಾವೆಗಳೇ ಇಲ್ಲ ಆದರೆ ರೈತರ ಬಳಿ ಸೂಕ್ತವಾದ ದಾಖಲೆಗಳು ಇದ್ದರು ವಿನಾಕಾರಣ ಅರಣ್ಯ ಇಲಾಖೆ ಕಂದಾಯ ಇಲಾಖೆ ಮತ್ತು ಪೋಲಿಸ್ ಇಲಾಖೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು

ಹೋಬಳಿಯ ಶಿಲ್ಲಂಗೆರೆಯಿಂದ ಅಬ್ಬಣಿಯವರೆಗೆ ಮೂಲ ಅರಣ್ಯ ಎನ್ನುತ್ತಿದ್ದಾರೆ, ಕಂದಾಯ, ಸರ್ವೆ, ಪೊಲೀಸ್ ಇಲಾಖೆ ಯಾಮಾರಿಸುತ್ತಿದ್ದಾರೆ‌. ಆರ್ ಟಿಸಿಯಲ್ಲಿ ಗೋಮಾಳ‌ ಎಂದಿದೆ ಅದರಿಂದ ರೈತರಿಗೆ ತೊಂದರೆ ಕೊಟ್ಟಿದ್ದರಿಂದಾಗಿ ಅರಣ್ಯ ಇಲಾಖೆಯ ಸರಿನಾ ಸಿಕ್ಕಲಿಗರ್,, ಮಹೇಶ್, ಪುಷ್ಪಲತಾ ಅವರ ಮೇಲೆ ದೌರ್ಜನ್ಯ ಕೇಸ್ ಹಾಕಿದ್ದೇವೆ ಈ ಭಾಗದಲ್ಲಿ ಹಿಡುವಳಿ ಜಮೀನು ಇದ್ದು ಅರಣ್ಯ ಇಲಾಖೆ ನಕಲಿ ನಕ್ಷೆ ಮಾಡಿಕೊಂಡಿದ್ದಾರೆ ಮಾತು ಎತ್ತಿದರೆ ರಿಯಲ್ ಎಸ್ಟೇಟ್ ಎನ್ನುತ್ತಾರೆ ರೈತರನ್ನು ಅವಮಾನ ಮಾಡತ್ತಾರೆ ಎಂದರು

ಅರಣ್ಯ ಇಲಾಖೆಯ 1931 ನೋಟಿಫಿಕೇಷನ್ ದಾಖಲೆ ಸರಿ ಇಲ್ಲ.ಸಹಿ ಇಲ್ಲ. ನಕಲಿ ಎಂಬ ಅನುಮಾನ ಇದೆ. ಈ ಬಗ್ಗೆ ತನಿಖೆ ‌ನಡೆಸಬೇಕು ರೈತರ ಮೇಲೆ ದಬ್ಬಾಳಿಕೆ ‌ಮಾಡಬಾರದು ಅರಣ್ಯ ಇಲಾಖೆ‌ ಜಾಗಕ್ಕೆ ನಂಬರ್ ಕೊಟ್ಟು ದುರಸ್ತಿ ಮಾಡಬೇಕು ಜಂಟಿ ಸರ್ವೆಯಲ್ಲಿ ಮೊದಲು ಅರಣ್ಯ ಜಮೀನು ಎಷ್ಟಿದೆ ಎಂಬುದನ್ನು ಸ್ಕೆಚ್‌ ಮಾಡಿ, ನಂಬರ್ ಕೊಟ್ಟು ದುರಸ್ತಿ ಮಾಡಬೇಕು.

ಈ ಪತ್ರಿಕಾಗೋಷ್ಠಿಯಲ್ಲಿ ರೈತರಾದ ಹರಟಿ ಪ್ರಕಾಶ್, ಶಿಲ್ಲಂಗೆರೆ ಮಂಜುನಾಥ್, ಅರವಿಂದ್, ವೆಂಕಟರಣಪ್ಪ ಇದ್ದರು.

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

9 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

13 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

16 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

18 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago