ಸ್ವಂತ ತಂಗಿ ಮೇಲಿನ ಸೇಡಿಗೆ ಆಕೆಯ 6 ವರ್ಷದ ಗಂಡು ಮಗುವನ್ನು ನಿರ್ಜನ ಪ್ರದೇಶಕ್ಕೆ ಕರದೊಯ್ದು ತಲೆಗೆ ಬಲವಾಗಿ ಹೊಡೆದು ಕೊಂದು ಹಾಕಿ, ಅಲ್ಲೇ ಮಣ್ಣು ಮಾಡಿರುವ ಘಟನೆ ಚಿಕ್ಕಬಳ್ಳಾಪುರದ ಮುತ್ತಕದಹಳ್ಳಿ ಬಳಿ ನಡೆದಿದೆ.
6 ವರ್ಷದ ಮಧು ಎಂಬ ಗಂಡು ಮಗುವನ್ನ ಕೊಂದು ಹಾಕಿರುವ ಅಂಬಿಕಾ. ಮತ್ತೊಂದು ಹೆಣ್ಣು ಮಗುವಾದ ಮನುಶ್ರೀ ಕರೆದೊಯ್ದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಸಿದಾಗ ಪೊಲೀಸರಿಗೆ ಅಂಬಿಕಾ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿಯಲ್ಲಿ ನಾಗರಾಜು ಹಾಗೂ ಅನಿತಾ ದಂಪತಿ ವಾಸ ಮಾಡುತ್ತಿದ್ದರು. ಅಕ್ಕ ಅಂಬಿಕಾ ಹಾಗೂ ತಂಗಿ ಅನಿತಾಳ ತವರು ಮನೆ ಚಿಕ್ಕಬಳ್ಳಾಪುರ ತಾಲೂಕಿನ ಮುತ್ತಕದಹಳ್ಳಿ ಆಗಿರುತ್ತದೆ.
ಗಂಡಂದಿರನ್ನ ಬಿಟ್ಟು ಬಂದು ತವರೂರಲ್ಲೇ ವಾಸವಾಗಿರುವ ಅಕ್ಕ ಅಂಬಿಕಾ ಹಾಗೂ ತಂಗಿ ಅನಿತಾ. ಅಂಬಿಕಾ ಹಾಗೂ ಅನಿತಾ ನಡುವೆ ಪದೇ ಪದೇ ಜಗಳ ವೈಮನಸ್ಸು ಆಗುತ್ತಿತ್ತು.
ಅಂಬಿಕಾಳ ವ್ಯಕ್ತಿತ್ವ ಸರಿ ಇಲ್ಲ ಎಂದು ಅನಿತಾ ಪದೇ ಪದೇ ಬೈಯ್ಯುತ್ತಿದ್ದರು. ಇದೇ ಕೋಪಕ್ಕೆ ಅನಿತಾಳ ಮಕ್ಕಳನ್ನ ಕರೆದೊಯ್ದು ಕೃತ್ಯ ಎಸಗಿರುವ ಅಕ್ಕ ಅಂಬಿಕಾ.
ಗಂಡು ಮಗು ಮಧು ಕೊಲೆ ಮಾಡಿ, ಹೆಣ್ಣು ಮಗು ಮನುಶ್ರೀಯನ್ನ ಮಾರಾಟಕ್ಕೆ ಯತ್ನಸಿದ್ದಾರೆ ಎನ್ನಲಾಗಿದೆ. ಸದ್ಯ ಅಂಬಿಕಾ ಪೇರೇಸಂದ್ರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ರಿಂದ ಆರೋಪಿ ವಿಚಾರಣೆ ನಡೆಸಲಾಗುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…
ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…
ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್ಪಿ ಗುಂಜನ್…
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…