Categories: Home

ಸ್ನಾನ ಗೃಹದಲ್ಲಿ ಮಹಿಳೆ ಅನುಮಾನಾಸ್ಪದ ಸಾವು: ತೆಲುಗಿನ ಅವುನು ಹಾರರ್ ಫಿಲ್ಮ್ ರೀತಿಯಲ್ಲಿ ಮಹಿಳೆ ಡೆತ್

ಆಕೆ ಗಂಡನ ಜೊತೆಯಲ್ಲಿ ಶುಭ ಕಾರ್ಯಕ್ಕೆ ಎಂದು ತಮಿಳುನಾಡಿನಿಂದ ಬಂದಿದ್ದಾಳೆ. ಗಂಡನ ಸ್ನೇಹಿತರ ಮನೆಗೆ ಹೋಗಿ ರೆಡಿ ಹಾಗಿ ಶುಭ ಕಾರ್ಯಕ್ಕೆ ಹೋಗಬೇಕು ಎಂದು ಸ್ನಾನದ ಗೃಹಕ್ಕೆ ಹೋದವಳು ಈಚೆ ಬಂದಿದ್ದು ಮಾತ್ರ ಹೆಣವಾಗಿ.‌ ಅಷ್ಟಕ್ಕೂ ಆ ಮಹಿಳೆ ಸಾವನಪ್ಪಿದ್ದು ಯಾಕೆ ಅಂತಿರಾ ಈ ಸ್ಟೋರಿ ನೋಡಿ……

ಸಾವನ್ನಪ್ಪಿರುವ ಮಹಿಳೆಯ ಹೆಸರು ಲಕ್ಷ್ಮೀ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅಡೇಪೇಟೆಯಲ್ಲಿ ನಿನ್ನೆ ಸಾವನಪ್ಪಿದ್ದಾಳೆ. ತಿರುಪತಿಯಿಂದ ಮಲ್ಲೇಶ್ವರಂ ನಲ್ಲಿ ಕಾರ್ಯಕ್ರಮ ನಿಮಿತ್ತ ಸಂಬಂಧಿಕರ ಮನೆಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಸ್ನಾನಕ್ಕೆ ಎಂದು ಸ್ನಾನಗೃಹದಲ್ಲಿ ಹೆಣವಾಗಿ ಬಿದ್ದಿದ್ದಾಳೆ. ಆದರೆ, ಸ್ನಾನಕ್ಕೆ ಹೋಗುವ ವೇಳೆ ಆಕೆಯ ಮುಖದಲ್ಲಿ ಯಾವುದೇ ರೀತಿಯ ಗಾಯಗಳು ಇರುವುದಿಲ್ಲ. ಆದರೆ ಸ್ನಾನ ಗೃಹದಲ್ಲಿ ಬಿದ್ದಿದಾಗ ಆಕೆಯ ಮುಖದ ಮೇಲೆ  ಗಾಯಗಳಾಗಿದ್ದವು. ಆಕೆಯ ಮುಖದ ಮೇಲೆ ಗಾಯಗಳು ಹೇಗಾದವು ಎಂಬುದೇ ಗಂಡನ ಅನುಮಾನವಾಗಿದೆ.

ಇನ್ನೂ ಸ್ಥಳಕ್ಕೆ ನೆಲಮಂಗಲ ನಗರ ಪೊಲೀಸರು ಭೇಟಿ ನೀಡಿ, ಪ್ರಾಥಮಿಕ ತನಿಖೆಯನ್ನು ಮಾಡುತ್ತಿದ್ದಾರೆ.  ತನಿಖೆಯ ವೇಳೆ ಗೀಸರ್ ಆನ್ ಆಗಿಲ್ಲ, ಬಕೆಟ್ ನಲ್ಲಿ ನೀರು ಇರಲಿಲ್ಲ ಎಂದು ಮೃತ ಲಕ್ಷ್ಮೀಯ ಗಂಡ ಪೊಲೀಸರಿಗೆ ಮಾಹಿತಿ ನೀಡಿದ ಎನ್ನಲಾಗಿದೆ.

ಹೀಗಾಗಿ ಮನೆಯ ಮಾಲೀಕರ ಜೊತೆಗೆ ಗಂಡನ ಹೇಳಿಕೆಯನ್ನು ಪಡೆದು ಪೊಲೀಸರು ಈಗಾಗಲೇ ತನಿಖೆ ಕೈಗೊಂಡಿದ್ದಾರೆ.

ಇನ್ನೂ ನೆಲಮಂಗಲದ ಶವಾಗಾರದಲ್ಲಿ ಶವಪರೀಕ್ಷೆ ಆಗಿದ್ದು, ಮೃತಳ ಗಂಡನ ಸ್ವಗ್ರಾಮದಲ್ಲಿ ಮಹಿಳೆ ಅಂತಿಮ ಶವಸಂಸ್ಕಾರ ಮಾಡಲಾಗಿದೆ.

ಒಟ್ಟಾರೆ, ಶುಭ ಕಾರ್ಯಕ್ಕೆ ಹೋಗಬೇಕು ಎಂದು ಬಂದವಳು ಹೆಣವಾಗಿ ಸ್ವಾಗ್ರಾಮಕ್ಕೆ ವಾಪಸ್ ಆಗಿದ್ದಾಳೆ. ಆದರೆ, ಆಕೆಯ ಸಾವು ಮಾತ್ರ ನಿಗೂಢವಾಗಿದೆ. ಮಹಿಳೆಯ ಸಾವಿಗೆ ಸೂಕ್ತ ಕಾರಣ ಪೊಲೀಸರ ತನಿಖೆಯಿಂದಲೇ ಹೊರಬರಬೇಕಿದೆ…

Ramesh Babu

Journalist

Recent Posts

ಮಾರ್ಖಂಡೇಯ ಜಲಾಶಯದ ನೀರು ಪೋಲು ತಡೆಗೆ ಚಲುವರಾಯಸ್ವಾಮಿ ಖಡಕ್ ಸೂಚನೆ

ಬೆಳಗಾವಿ ಜಿಲ್ಲೆಯ ನೀರಾವರಿ ಯೋಜನೆಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ…

4 hours ago

ಪೊಲೀಸರೆಂದು ನಂಬಿಸಿ ವೃದ್ಧ ದಂಪತಿಗೆ ಚಿನ್ನಾಭರಣ ವಂಚನೆ: ಇಬ್ಬರು ಆರೋಪಿಗಳು ವಶಕ್ಕೆ: ದೂರುದಾರರಿಗೆ ಚಿನ್ನಾಭರಣ ಹಸ್ತಾಂತರ

ದೊಡ್ಡಬಳ್ಳಾಪುರ: ಪೊಲೀಸರೆಂದು ಪರಿಚಯಿಸಿಕೊಂಡು ವೃದ್ಧ ದಂಪತಿಯನ್ನು ನಂಬಿಸಿ ಚಿನ್ನಾಭರಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು…

9 hours ago

ಮಳೆ ಕೊರತೆ; ಮತ್ಸ್ಯ ಕೃಷಿಗೂ ಹೊಡೆತ!

ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ…

11 hours ago

ಬರಿದಾಗುತ್ತಿರುವ ಕರ್ನಾಟಕದ ಖಜಾನೆ…….

ಬರಿದಾಗುತ್ತಿರುವ ಕರ್ನಾಟಕದ ಖಜಾನೆ....... ಅಂದಿನ ಸಂಪಾದನೆ ಅಂದದಿಗೆ ಮಾತ್ರ ಎಂಬಂತಾಗಿದೆ...... ಬಹುತೇಕ ಕೆಳ ಮಧ್ಯಮ ವರ್ಗದ ಅಥವಾ ಬಡವರ ಮನೆಯ…

14 hours ago

ವಾಲ್ಮೀಕಿ ಜಯಂತಿ ರಜೆ ದಿನಾಂಕ ಬದಲು

ಬೆಂಗಳೂರು: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಬದಲಾಯಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ಹಿಂದೆ…

1 day ago

ನೇಯ್ಗೆ ಉದ್ಯಮದ ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ: ನೇಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ದಿನದಿಂದ ದಿನಕ್ಕೆ ನೇಕಾರಿಕೆ ಮಾಡುವುದು ಕಷ್ಟವಾಗುತ್ತಿದೆ. ಸೀರೆ ಉತ್ಪಾದನೆಯಲ್ಲಿ ಬಳಸುವ ಕಚ್ಚ ಸಾಮಗ್ರಿಗಳ ಬೆಲೆ ಗಗನಕ್ಕೆರುತ್ತಿದೆ ಕೂಡಲೇ ಸರ್ಕಾರ ಮಧ್ಯೆ…

1 day ago