Categories: ಕೋಲಾರ

ಸೋತವನ ಕಂಡರೆ ಯಾಕಿಷ್ಟು ಭಯ : ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ: ನಾನು ಚುನಾವಣೆಯಲ್ಲಿ ಸೋತು ಮನೆಯಲ್ಲಿ ಇದ್ದು ತೋಟ ನೋಡಿಕೊಂಡು ಇದ್ದೇನೆ ಆದರೂ ನನ್ನನ್ನು ಕಂಡರೆ ಯಾಕೆ ಅಷ್ಟೊಂದು ಭಯ ಪಡತ್ತೀರಾ ನನ್ನ ಯೋಗ್ಯತೆಯನ್ನು ಎದುರಿಸುವ ಶಕ್ತಿ ಇಲ್ಲದೇ ಅಪಪ್ರಚಾರ ಮಾಡಲು ಹೊರಟಿದ್ದಾರೆ ಎಂದು ವಿರೋಧಿಗಳ ವಿರುದ್ದ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು

ತಾಲೂಕಿನ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸುಗಟೂರು ಮತ್ತು ಹೋಳೂರು ಗ್ರಾಮಗಳಲ್ಲಿ ಸೋಮವಾರ ಹೋಬಳಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವರಿಗೆ ದ್ರೋಹ ಮಾಡುವುದೇ ಅವರ ವೃತ್ತಿಯಾಗಿದೆ ಅವರ ಜಾತಕದಲ್ಲಿ ಕೂಡ ಇದೆ ಅನ್ನ ಕೊಟ್ಟು ಜೊತೆಯಲ್ಲಿ ಕರೆದುಕೊಂಡು ಹೋದವರ ಬಗ್ಗೆಯೇ ಅಪಪ್ರಚಾರ ಇದು ನನಗೆ ಹೊಸದಲ್ಲ ಇನ್ನೂ ಹೆಚ್ಚು ಹೆಚ್ಚು ನನ್ನ ವಿರುದ್ದ ಮಾಡಲಿ ಮನುಷ್ಯನಿಗೆ ಲಜ್ಜೆ ಮಾನಮಾರ್ಯಾದೆ ಜೊತೆಗೆ ನಿಯತ್ತು ಅನ್ನೋದು ಕೂಡ ಇರಬೇಕು ಅಲ್ಲವೇ ಎಂದು ದ್ರೋಹ ಮಾಡಿದವರನ್ನು ಪ್ರಶ್ನಿಸಿದರು.

ಸಮಾಜದಲ್ಲಿ ಹಸಿವಿನಲ್ಲಿ ಎರಡು ವಿಧ ಒಂದು ಅನ್ನದ ಹಸಿವು ಇನ್ನೊಂದು ದಾರಿದ್ರ ಇವತ್ತು ವೋಟು ಹಾಕುವರಲ್ಲಿ ದರಿದ್ರ ಜಾಸ್ತಿಯಾಗಿದೆ ಕೆಲಸ ಮಾಡಿಸಿಕೊಂಡು ಮೋಸ ಮಾಡಿದ್ದಾರೆ ಪಕ್ಷದಲ್ಲಿ ನನ್ನ ಜೊತೆಗೆ ನಿಷ್ಠಾವಂತರು ಇದ್ದರೆ ಅವರೊಂದಿಗೆ ನನ್ನ ಪ್ರಾಣ ಹೋಗುವರೆಗೂ ಜೊತೆಯಲ್ಲಿ ಇರತ್ತೇನೆ ಕಾಂಗ್ರೆಸ್ ಟಿಕೆಟ್ ಪಡೆದು ದ್ರೋಹ ಮಾಡಿದವರಿಗೆ ನೀತಿ ನಿಯಮಗಳ ಪ್ರಕಾರ ಅನರ್ಹ ಎನ್ನದೇ ಇನ್ನೂ ಏನು ಅನ್ನಬೇಕು ಅಂತಹ ಮಹಾನುಭಾವರು ನನ್ನ ಸೋಲಿಸಲು ಬಂಡವಾಳ ಹಾಕಿದ್ದಾರೆ ಅವರೊಂದಿಗೆ ಈ ಕೊಚ್ಚೇ ನೀರಿನ ಅಪಪ್ರಚಾರ, ಜೆಡಿಎಸ್‌ ಬಿಜೆಪಿಯವರು, ನಮ್ಮ ಸಮುದಾಯದ ವ್ಯಕ್ತಿಯನ್ನು ಸೋಲಿಸಿದ ಅಂತ ಇವರೊಂದಿಗೆ ಖಾಸಗಿ ನರ್ಸಿಂಗ್ ಆಸ್ಪತ್ರೆಗಳ ಮಾಲೀಕರು ಎಲ್ಲರೂ ಒಗ್ಗಟ್ಟಿನಿಂದ ನನ್ನ ವಿರುದ್ದ ಕೆಲಸ ಮಾಡಿ ಸೋಲಿಸಿದ್ದಾರೆ ಎಂದರು.

ನಾವು ಯಾರಿಗೆ ಜಾಸ್ತಿ ಪ್ರೀತಿ ಮಾಡಿ ತಲೆ ಬಗ್ಗಿಸಿ ನಮಸ್ಕಾರ ಮಾಡತ್ತೀವೋ ಅವರೇ ನಮಗೆ ಹೆಚ್ಚು ದ್ರೋಹ ಮಾಡತ್ತಾರೆ ಅವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಕೆಲವರನ್ನು ಇದೇ ಸ್ಥಳದಲ್ಲಿ ಕೂರಿಸಿಕೊಂಡು ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ವಿತರಣೆಯ ಸಭೆಗಳನ್ನು ಮಾಡಿದ್ದೇವೆ ಅ ಮಹಾನುಭಾವ ದೈವ ಸಮಾನರೂಪದ ಶ್ರೀಕೃಷ್ಣ ಪರಮಾತ್ಮ ಅತನ ಸೇವೆ ಉಪಕಾರ ಗುಣಗಳು ಭಗವಂತನ ಮೀರಿಸುವಂತಿದೆ ಅತನ ನೆರಳಲ್ಲಿ ಇವತ್ತು ಊಟ ಮಾಡುತ್ತಾ ಇದ್ದೇವೆ 2013 ಕ್ಕಿಂತ ಮುಂಚೆ ಹೇಗಿತ್ತು ಗೊತ್ತಿಲ್ಲವೇ ಅವರಿಗೆ ದೇವರು ಇದ್ದನಾ ಇಲ್ಲವಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದರು.

ದೇಶದಲ್ಲಿ ಆದಾಯ ತೆರಿಗೆ ಇಲಾಖೆ, ಇಡಿ, ಐಟಿ ಬಿಜೆಪಿಯ ಕೈಗೊಂಬೆಗಳಾಗಿದ್ದಾರೆ ಅವರು ಮನೆಹಾಳುಗಳು ಇವತ್ತು ಒಳ್ಳೆಯ ಕೆಲಸಗಾರ ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರನ್ನು ಬಂಧಿಸಿ ಜೈಲಿನಲ್ಲಿ ಇಟ್ಟಿದ್ದಾರೆ ಸಾಲದಕ್ಕೆ ಇವತ್ತು ಮೋದಿ ಮತ್ತು ಕುಮಾರಸ್ವಾಮಿ ಇಬ್ಬರೂ ಒಂದಾಗಿದ್ದಾರೆ ಮೋದಿಯ ಸುವರ್ಣ ಯುಗದಲ್ಲಿ ನಾವು ಇದ್ದೇವೆ ಎಂಬುದು ಇತಿಹಾಸವಾಗಿದೆ ಕ್ಷೇತ್ರದಲ್ಲಿ ನೀವು ಕೊಟ್ಟ ಭಗೀರಥ ಸೋತಿದ್ದಾನೆ ಇವತ್ತು ಕೆಸಿ ವ್ಯಾಲಿ ನೀರು ಬರಲಿಲ್ಲ ಇದರ ಬಗ್ಗೆ ಪ್ರಶ್ನೆ ಮಾಡೋರು ಇಲ್ಲವೇ ಒಕ್ಕಲಿಗ ಜಾತಿಯ ಅಲ್ಲ ಎಂದು ನನ್ನ ಸೋಲಿಸಿದ್ದಾರಾ ಅ ರೈತಾಪಿ ಒಕ್ಕಲಿಗ ಸಮುದಾಯಕ್ಕೆ ಅಭಿವೃದ್ಧಿಯಾಗುವ ಹಾಗೇ ಮಾಡಬೇಕಾದ ಜವಾಬ್ದಾರಿ ನಿಮ್ಮಂದು ಅಲ್ಲವೇ ಎಂದು ಪ್ರಶ್ನೆ ಮಾಡಿದರು

ಲೆಕ್ಕಾಚಾರ ಮಾಡಿ ವೋಟ್ ಹಾಕುವವನು ರಾಜಕೀಯಕ್ಕೆ ನಾಲಾಯಕ್ ಅವನು ಏನಿದ್ದರೂ ವ್ಯಾಪಾರಕ್ಕೆ ಅಷ್ಟೇ ಸೀಮಿತವಾಗಬೇಕು ತಿಂದ ಮನೆಗೆ ದ್ರೋಹ ಬಗೆಯಬಾರದು ನ್ಯಾಯಯುತ ರಾಜಕರಾಣ ಮಾಡೋಣ ಎಷ್ಟೇ ಕಷ್ಟ ಬಂದರೂ ನಿಮ್ಮ ಜೊತೆಗೆ ಇರತ್ತೇನೆ ಬಡವರಿಗೆ ಶಕ್ತಿಯಾಗಿ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಎಲ್ಲಾ ಜಾತಿ ಧರ್ಮಗಳೊಂದಿಗೆ ಕೆಲಸ ಮಾಡುವ ಕಾಂಗ್ರೆಸ್ ಪಕ್ಷದ ಗೌತಮ್ ಅವರನ್ನು ಗೆಲ್ಲಿಸಿ ನನ್ನ ಸೋಲಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ ರಮೇಶ್ ಕುಮಾರ್ ಒಕ್ಕಲಿಗರು ಹೆಚ್ಚು ವ್ಯವಸಾಯ ಮಾಡುವ ಜನ ಅವರ ಹೆಸರು ಹೇಳಿಕೊಂಡು ಬಂದವರು ಏನು ಮಾಡಿದ್ದರಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಇವತ್ತು ಅವರ ಮೇಲೆ ಅಪ್ರಚಾರ ನಡೆಯುತ್ತಾ ಇದೆ ಒಕ್ಕಲಿಗ ಮಧ್ಯೆ ವಿಷಬೀಜ ಬಿತ್ತುವುದು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಕೊಡಲಿ ಧರ್ಮದ ಹೆಸರಿನಲ್ಲಿ ಬಿಜೆಪಿ ಜಾತಿಯ ಹೆಸರಿನಲ್ಲಿ ಜೆಡಿಎಸ್‌ ಅಪವಿತ್ರ ಮೈತ್ರಿಯಾಗಿದ್ದು ಜನ ಎಚ್ಚರಿಕೆಯಿಂದ ಮತ ಹಾಕಬೇಕು ಎಂದರು

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಟಿ.ವಿ ಕೃಷ್ಣಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ವೆಲಗಬುರ್ರೆ ಶಶಿಧರ್, ಚಂಜಿಮಲೆ ರಮೇಶ್, ಸುಗಟೂರು ಸೊಸೈಟಿ ಅಧ್ಯಕ್ಷ ಅಂಕತಟ್ಟಿ ಬಾಬು, ಮುಖಂಡರಾದ ಸಂಜಯ್ ರೆಡ್ಡಿ, ರಾಜಣ್ಣ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಸಂಜಯ್ ರೆಡ್ಡಿ, ಮುನಿರಾಜು, ಭೂಪತ, ಸತೀಶ್, ದೇವರಾಜ್, ವಿಶ್ವನಾಥ್ ಮುಂತಾದರು ಇದ್ದರು

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

11 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

18 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

21 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

22 hours ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

1 day ago