Categories: ಲೇಖನ

ಸೆಲ್ಫೀಗಳ (ಫೋಟೋ) ನಡುವೆ ಮಾಯವಾಗುತ್ತಿರುವ ಮಾನವೀಯತೆ……

ಅಪಘಾತಗಳ ಸಂದರ್ಭಗಳಲ್ಲಿ ಜನ ಗಾಯಾಳುಗಳಿಗೆ ನೆರವಾಗದೆ ಅಮಾನವೀಯವಾಗಿ ವರ್ತಿಸುವುದು ಆ ಕ್ಷಣದ ಅಲ್ಲಿದ್ದ ಜನರ ಪ್ರತಿಕ್ರಿಯೆ ಮಾತ್ರ ಎಂದು ಭಾವಿಸದಿರಿ. ಆ ಮನಸ್ಥಿತಿಯ ಹಿಂದೆ ವ್ಯವಸ್ಥೆಯ ಕ್ರೌರ್ಯ – ಮೌಲ್ಯಗಳ ಕುಸಿತ ತನ್ನ ಪ್ರಭಾವ ಬೀರಿದೆ……

ಈ ವಿಷಯದಲ್ಲಿ ಸುಪ್ರೀಂಕೋರ್ಟಿನ ಆದೇಶ ಜನರಿಗೆ ಅನುಕೂಲವಾಗುವಂತಿದ್ದರೂ ನಮ್ಮ ಪೊಲೀಸರ ವರ್ತನೆ ಇದಕ್ಕೆ ಪೂರಕವಾಗಿಲ್ಲ. ಅವರ ಭಾಷೆ ಮತ್ತು ನಡವಳಿಕೆ ಸಾಮಾನ್ಯರ ಬಗ್ಗೆ ಅಸಹನೀಯವಾಗಿಯೇ ಇದೆ…..

ಬ್ಯಾಂಕುಗಳಲ್ಲಿ ಮಾಸಿದ ಹಳೆಯ ಬಟ್ಟೆಯ ಅಥವಾ ಪಂಚೆ ಟವಲ್ ಹಾಕಿದ ಅಮಾಯಕ ಜನರ ಮುಗ್ಧ ಮತ್ತು ತಿಳಿವಳಿಕೆ ಕೊರತೆಯ ಪ್ರಶ್ನೆಗಳಿಗೆ ಅಲ್ಲಿನ ಬಹುತೇಕ ಅಧಿಕಾರಿಗಳು ಉತ್ತರಿಸುವ ರೀತಿ ಅವಮಾನಕರವಾಗಿಯೇ ಇರುತ್ತದೆ……

ಆಸ್ಪತ್ರೆಗಳಲ್ಲಿ ಬಡವರಿಗೆ ನೀಡುವ ಚಿಕಿತ್ಸೆಗಳ ಗುಣಮಟ್ಟದಲ್ಲಿ ಕಣ್ಣಿಗೆ ಕಾಣುವಷ್ಟು ನಿರ್ಲಕ್ಷ್ಯ – ಪಕ್ಷಪಾತವಿರುತ್ತದೆ…..

ಮಾಧ್ಯಮಗಳಲ್ಲಿ ದುಷ್ಟತನಕ್ಕೆ ನೀಡುವ ಪ್ರಾಮುಖ್ಯತೆ ಒಳ್ಳೆಯ – ಅತ್ಯುತ್ತಮ ಸಾಧಕರ ಪ್ರಚಾರಕ್ಕೆ ನೀಡುವುದಿಲ್ಲ. ಕಪಟ ಪ್ರದರ್ಶಕ ಮನೋಭಾವನೆಗೇ ಹೆಚ್ಚಿನ ಆಧ್ಯತೆ ನೀಡುತ್ತಾರೆ…..

ಸರ್ಕಾರದ ಯಾವುದೇ ಇಲಾಖೆಯಲ್ಲಿ ಲಂಚವಿಲ್ಲದೆ – ನಿಮ್ಮನ್ನು ಸತಾಯಿಸದೆ ಕೆಲಸವಾಗಿದೆ ಎಂದರೆ ನೀವು ಅದೃಷ್ಟವಂತರೆಂದೇ ಭಾವಿಸಿ ಅಥವಾ ನೀವು ಪ್ರಭಾವಿಗಳೋ, ರಾಜಕಾರಣಿಗಳ ಸಂಬಂಧಿಗಳೋ, ರೌಡಿಯೋ ಆಗಿರಬೇಕು. ಇಲ್ಲದಿದ್ದರೆ ನಿಮ್ಮ ಸಂಕಷ್ಟಗಳಿಗೆ ಕೊನೆಯೇ ಇಲ್ಲ…..

ಇದು ಕೇವಲ ಉದಾಹರಣೆಗಳಷ್ಟೆ.
ಇಡೀ ವ್ಯವಸ್ಥೆ ಹೀಗೆಯೇ ನಡೆಯುತ್ತದೆ.
ಒಂದು ವೇಳೆ ನೀವು ಶ್ರೀಮಂತರೋ, ಬಲಶಾಲಿಗಳೋ, ಅತಿ ಧೈರ್ಯವಂತರೋ ಆಗಿದ್ದರೆ ವ್ಯವಸ್ಥೆ ಅಷ್ಟೊಂದು ಕಠೋರವಾಗಿ ವರ್ತಿಸುವುದಿಲ್ಲ. ಅಷ್ಟಕ್ಕೇ ಎಲ್ಲಾ ಸರಿಯಿದೆ ಎಂದು ಭಾವಿಸದಿರಿ……

ಜನಸಂಖ್ಯೆಯ ಅತಿಯಾದ ಒತ್ತಡ, ಮೌಲ್ಯಗಳ ಕುಸಿತ, ವೇಗದ ಮತ್ತು ದುರಾಸೆಯ ಜೀವನಶೈಲಿ, ಬೇಗನೆ ನಿರಾಸೆಗೊಳ್ಳುವ ಮನಸ್ಥಿತಿ, ಅದರಿಂದಾಗಿಯೇ ಉಂಟಾದ ಉದಾಸೀನತೆ ಜನರನ್ನು ಒತ್ತಡದಲ್ಲಿಟ್ಟಿದೆ……

ಆದ್ದರಿಂದಲೇ ಅಪಘಾತಗಳಂತ ಸಂದರ್ಭಗಳಲ್ಲಿ ಜನರಿಗೆ ಸಹಾಯಕ್ಕಿಂತ ಸೆಲ್ಫಿಯೇ ಮುಖ್ಯವಾಗುತ್ತದೆ…..

ಅದರೆ, ಕೆಲವು ಅಪರೂಪದ ಸಂದರ್ಭಗಳಲ್ಲಿ ಅಪಘಾತದ ಭೀಕರತೆ ಬಹುಶಃ ಅಲ್ಲಿದ್ದ ಜನರು ರಕ್ತ ಮತ್ತು ದೇಹದ ಭಾಗಗಳ ಚೆಲ್ಲಾಪಿಲ್ಲಿಯಿಂದ, ಭಯ ಆತಂಕದಿಂದ ಮನಸ್ಸಿದ್ದರೂ ಸಹಾಯಕ್ಕೆ ಬರದಿರುವ ಸಾಧ್ಯತೆಯೂ ಇರುತ್ತದೆ……

ನಮ್ಮ ಆತ್ಮೀಯರು ಅಲ್ಲಿದ್ದರೆ ಅವರಿಗೆ ಸಹಾಯ ಖಂಡಿತ ಸಿಗುತ್ತದೆ. ಅಪರಿಚಿತರ ಬಗ್ಗೆ ಮಾತ್ರ ಈ ಧೋರಣೆಯಿದೆ. ಏಕೆಂದರೆ ಟಿವಿಯಲ್ಲಿ ಆ ದೃಶ್ಯ ನೋಡುವಾಗಲೇ ಮೈ ನಡುಗುತ್ತದೆ.. ಇನ್ನು ಸ್ಪಾಟ್ ನಲ್ಲಿ ಇದ್ದರೆ ತಲೆತಿರುಗಿ ಬಿದ್ದರೂ ಆಶ್ಚರ್ಯವಿಲ್ಲ. ಇಲ್ಲಿ ಕುಳಿತುಕೊಂಡು ಹೇಳುವಷ್ಟು ಸುಲಭ ಸ್ಥಿತಿ ಈ ವಿಷಯದಲ್ಲಿ ಕಷ್ಟ……

ಆದ್ದರಿಂದ ಕೇವಲ ಇದೊಂದೆ ವಿಷಯದಲ್ಲಿ ಸುಧಾರಣೆ ಸಾಧ್ಯವಿಲ್ಲ. ಇಡೀ ವ್ಯವಸ್ಥೆಯ ಮಾನಸಿಕ – ನೈತಿಕ ಗಟ್ಟಿತನವನ್ನು ಪುನರ್ ರೂಪಿಸಬೇಕಾದ ಅವಶ್ಯಕತೆ ಇದೆ……

ಇತ್ತೀಚೆಗೆ ಅಪಘಾತದ ಸಂದರ್ಭದಲ್ಲಿ ಕೆಲವರು ಸಹಾಯಕ್ಕಿಂತ ಫೋಟೋ ತೆಗೆಯಲು ತೋರಿಸಿದ ಆಸಕ್ತಿಯನ್ನು ಟಿವಿ ಚಾನೆಲ್ ನಲ್ಲಿ ವೀಕ್ಷಿಸಿದಾಗ ಮೂಡಿದ ಭಾವನೆಗಳು……

ಮಾನವೀಯ ಮೌಲ್ಯಗಳ ಪುನರ್ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ನುಖರಾಗೋಣ ಎಂದು ಆಶಿಸುತ್ತಾ …………….

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

2 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

4 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

7 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

8 hours ago

ಬೆಂ.ಗ್ರಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ಎ.ವಿ ಲಕ್ಷ್ಮಿನಾರಾಯಣ ನೇಮಕ

ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…

10 hours ago

ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ: ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ  14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…

11 hours ago