Categories: ಕೋಲಾರ

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ಭ್ರಷ್ಟಾಚಾರ ಆರೋಪ: ಮಾರುಕಟ್ಟೆ ಹೆಚ್ಚುವರಿ ನಿರ್ದೇಶಕ ಭೇಟಿ, ಪರಿಶೀಲನೆ

ಕೋಲಾರ: ಎಪಿಎಂಸಿ ಮಾರುಕಟ್ಟೆಯ ಜೆಎನ್‌ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದವರು ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದು ಎಪಿಎಂಸಿಯಲ್ಲಿನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು. ಆ ದೂರಿನ ಸತ್ಯಾಸತ್ಯತೆ ತಿಳಿಯಲು ಭೇಟಿ ನೀಡಿ ವಿವರಣೆ ಪಡೆದಿದ್ದೇನೆ ಎಂದು ಕೃಷಿ ಮಾರುಕಟ್ಟೆ ಇಲಾಖೆ ಹೆಚ್ಚುವರಿ ನಿರ್ದೇಶಕ (ಆಡಳಿತ) ನಜೀಬುಲ್ಲಾ ಖಾನ್‌ ತಿಳಿಸಿದರು.

ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಜೆಎನ್‌ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದವರು ಹಾಗೂ ಇತರೆ ಮಂಡಿ ಮಾಲೀಕರಿಂದ ವಿವರಣೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘದವರು, ಮಂಡಿ ಮಾಲೀಕರು ಹಾಗೂ ಸಿಬ್ಬಂದಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಕೆಲವರು ಭ್ರಷ್ಟಾಚಾರದ ಆರೋಪ ಮಾಡಿದ್ದು, ಅದಕ್ಕೆ ಪೂರಕವಾಗಿ ಮಂಡಿ ಮಾಲೀಕ ಜಿಬಿಆರ್ ಸತೀಶ್ ಸಿಡಿ ನೀಡಿದ್ದಾರೆ. ಅದನ್ನು ನಾನು ಇನ್ನೂ ನೋಡಿಲ್ಲ. ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಿರ್ದೇಶಕರಿಗೆ ವರದಿ ಸಲ್ಲಿಸುತ್ತೇನೆ ಎಂದರು.

ಮೂಲಸೌಕರ್ಯ ಸಮಸ್ಯೆ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು, ಮಳಿಗೆ ಹಂಚಿಕೆ ವಿಷಯ, ಪರವಾನಗಿ ನವೀಕರಣ ಸಮಸ್ಯೆ ಕುರಿತು ದೂರುಗಳು ಬಂದಿವೆ. ಈ ಎಲ್ಲಾ ಅಂಶಗಳು ವರದಿಯಲ್ಲಿ ಇರಲಿದ್ದು, ಅದನ್ನು ಆಧರಿಸಿ ನಿರ್ದೇಶಕರು ಕ್ರಮ ಕೈಗೊಳ್ಳುತ್ತಾರೆ ಮಾರುಕಟ್ಟೆಗೆ ಜಾಗದ ಸಮಸ್ಯೆ ಸಂಬಂಧ ಸಚಿವರ ನೇತೃತ್ವದ ಸಮಿತಿಯು ಈಗಾಗಲೇ ಬಂದು ಪರಿಶೀಲಿಸಿದೆ. ಜಾಗ ಕಲ್ಪಿಸಲು ಪ್ರಯತ್ನ ನಡೆಯುತ್ತಿದೆ. ಸಚಿವರು, ಶಾಸಕರು ಬಂದು ಸಮಸ್ಯೆ ಆಲಿಸಿದ್ದಾರೆ. ಕೇಂದ್ರ ಸರ್ಕಾರದ ಗಮನಕ್ಕೂ ಹೋಗಿದೆ ಎಂದರು.

ಸಭೆಯಲ್ಲಿ ಜೆಎನ್‌ಜಿ ತರಕಾರಿ ದಲ್ಲಾಳರ ಕ್ಷೇಮಾಭಿವೃದ್ಧಿ ಸಂಘದವರು ಇದೇ ಸಂದರ್ಭದಲ್ಲಿ ದೂರಿನ ಸುರಿಮಳೆಗರೆದರು. ಎಪಿಎಂಸಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಅಲ್ಲದೇ, ಎಪಿಎಂಸಿ ಕಾರ್ಯದರ್ಶಿ ಎನ್‌.ವಿಜಯಲಕ್ಷ್ಮಿ ಸುಮಾರು ಐದು ವರ್ಷದಿಂದ ಇಲ್ಲೇ ಇದ್ದು ಅವರನ್ನು ವರ್ಗಾವಣೆ ಮಾಡಿ ನಿಷ್ಠಾವಂತ ಅಧಿಕಾರಿಯನ್ನು ನಿಯೋಜಿಸುವಂತೆ ಆಗ್ರಹಿಸಿದರು.

ತರಕಾರಿ ಮಾರುಕಟ್ಟೆಗೆ ಸದಸ್ಯರೆಲ್ಲಾ ಸೇರಿ ಎರಡೂವರೆ ಲಕ್ಷ ಖರ್ಚು ಮಾಡಿ ಮಣ್ಣು ಹೊಡೆಸಿದೆವು. ಆದರೆ, ಎಪಿಎಂಸಿಯಿಂದ ಇನ್ನೂ ಬಿಲ್ ಮಾಡಿಲ್ಲ. ನಾವೇ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದೇವೆ, ಸಿ.ಸಿ.ಟಿ.ವಿ ಹಾಕಿಸಿದ್ದು ನಾವೇ. ಮಾರುಕಟ್ಟೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಕುಡಿಯಲು ನೀರು ಇಲ್ಲ. ಆದೇಶವಿದ್ದರೂ ಕಾರ್ಯಗತವಾಗಿಲ್ಲ ಎಂದು ದೂರಿದರು.

ತರಕಾರಿ ಮಾರುಕಟ್ಟೆಯಲ್ಲಿನ ಕುಂದುಕೊರತೆ ಸಂಬಂಧ ಈವರೆಗೆ 50 ಅರ್ಜಿ‌ ಕೊಟ್ಟಿದ್ದೇವೆ. ಒಂದೂ ಸಮಸ್ಯೆ ಬಗೆಹರಿದಿಲ್ಲ ಆರ್‌ಎಂಸಿ ಪಾವತಿಗೆ ಹೆಚ್ಚುವರಿ ಹಣ ಕೇಳುತ್ತಾರೆ. ಆಗಲ್ಲ ಎಂದರೆ ನಿಯಮ ಪ್ರಕಾರ ಹಣ ಪಾವತಿಸಿ ಎನ್ನುತ್ತಾರೆ. ಈ ಎಲ್ಲಾ ವಿಚಾರ ಇಟ್ಟುಕೊಂಡು ಜಿಲ್ಲಾಧಿಕಾರಿಗೂ ದೂರು ಕೊಟ್ಟಿದ್ದೆವು. ಆದರೆ, ಎಪಿಎಂಸಿ ಕಾರ್ಯದರ್ಶಿ ನಮಗೇ ನೋಟಿಸ್ ಕೊಟ್ಟಿದ್ದಾರೆ ಎಂದು ಹೇಳಿದರು.

ಮಂಡಿ ಮಾಲೀಕ ಜಿಬಿಆರ್.ಸತೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಎಪಿಎಂಸಿ ಕಾರ್ಯದರ್ಶಿಯ ಭ್ರಷ್ಟಾಚಾರ ಸಂಬಂಧ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಿಗೆ ದೂರು ನೀಡಿದ್ದೆವು. ಅದರ ತನಿಖೆಗೆ ನಜೀಬುಲ್ಲಾ ಖಾನ್‌ ಬಂದಿದ್ದಾರೆ. ಪರವಾನಗಿ ನವೀಕರಣಕ್ಕೆ ಹೆಚ್ಚುವರಿ ಹಣ ಕೊಡಬೇಕು, ಸರ್ಕಾರದಿಂದ ಮಂಜೂರಾಗಿರುವ ಗೋದಾಮನ್ನು ನಮ್ಮ ಹೆಸರಿಗೆ ಮಾಡಿಕೊಳ್ಳಲು ಹಿರಿಯ ಅಧಿಕಾರಿಗೆ ಹಣ ಕೊಡಬೇಕು ಎನ್ನುತ್ತಾರೆ. ಕಾರ್ಯದರ್ಶಿಯು ಲಂಚ ಕೇಳಿರುವುದಕ್ಕೆ ಸಾಕ್ಷ್ಯವಿರುವ ಸಿ.ಡಿ ಕೊಟ್ಟಿದ್ದೇವೆ’ ಎಂದರು.

ಸಂಘದ ಅಧ್ಯಕ್ಷ ಅಂಬರೀಶ್ ಮಾತನಾಡಿ, ಪರವಾನಗಿ ನವೀಕರಣದಿಂದ ಹಿಡಿದು ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ. ಹೀಗಾಗಿ, ತನಿಖೆಗೆ ಆಗ್ರಹಿಸಿದ್ದವುಎಂದು ಹೇಳಿದರು.

ಸಭೆಯಲ್ಲಿ ಸಹಾಯಕ ನಿರ್ದೇಶಕ ರವಿಕುಮಾರ್ ಮಂಡಿ ಮಾಲೀಕರಾದ ಆರ್.ಎ.ಪಿ ನಾರಾಯಣಸ್ವಾಮಿ, ಬೈಚೇಗೌಡ, ಸತೀಶ್ ವೆಂಕಟೇಶ್ ನಾಗೇಶ್ ಎಪಿಎಂಸಿ ಪುಟ್ಟುರಾಜು, ಗೋಪಾಲಕೃಷ್ಣ, ನಾಗರಾಜು ಹರೀಶ್, ಮಂಜುನಾಥ್ ಮುನಿರಾಜು, ಸಂತೋಷ್, ಸುನಿಲ್, ಇದ್ದರು.

Ramesh Babu

Journalist

Recent Posts

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

2 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

6 hours ago

ಸಮಾಜಸೇವೆ ಮೂಲಕ ಹುಟ್ಟುಹಬ್ಬ ಆಚರಣೆ ಎಲ್ಲರಿಗೂ ಮಾದರಿ: ಸಂಜೀವ್ ನಾಯಕ್

ದೊಡ್ಡಬಳ್ಳಾಪುರ: ಅದ್ದೂರಿ ಆಚರಣೆಗಳಿಗೆ ಸೀಮಿತವಾಗದೆ, ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸುವುದು ಇತರರಿಗೂ ಮಾದರಿಯಾಗಲಿದೆ ಎಂದು ಕನ್ನಡ ಪಕ್ಷದ ರಾಜ್ಯ…

8 hours ago

ನಾಡಕಚೇರಿ, ಕಾವೇರಿ ತಂತ್ರಾಂಶಕ್ಕೆ ತಾಂತ್ರಿಕ ಗ್ರಹಣ! ಸರ್ವರ್ ಸಮಸ್ಯೆಯಿಂದ ಸರ್ಕಾರಿ ಸೇವೆಗಳಿಗೆ ಬ್ರೇಕ್‌; ಕಚೇರಿಗಳಿಗೆ ಅಲೆದು ಹೈರಾಣಾದ ಜನರು

ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ, ತ್ವರಿತವಾಗಿ ತಲುಪಿಸಬೇಕೆಂಬ ಉದ್ದೇಶದಿಂದ ಜಾರಿಗೆ ತಂದಿರುವ ಡಿಜಿಟಲ್ ವ್ಯವಸ್ಥೆಗಳೇ ಇದೀಗ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿವೆ.…

8 hours ago

ದೊಡ್ಡಬಳ್ಳಾಪುರದಲ್ಲಿ 4 ಲಕ್ಷ ಮೌಲ್ಯದ ಗಾಂಜಾ ವಶ: ಆರೋಪಿ ಬಂಧನ

ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ,…

10 hours ago

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆ

ಲಂಚ ಪ್ರಕರಣ: ಮ್ಯೂನಿಷನ್ಸ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಸಿಬಿಐ ಬಲೆಗೆಲಂಚ ಸ್ವೀಕಾರ ಆರೋಪಕ್ಕೆ ಸಂಬಂಧಿಸಿದಂತೆ ಮ್ಯೂನಿಷನ್ಸ್ ಇಂಡಿಯಾ ಲಿಮಿಟೆಡ್‌ (MIL)…

13 hours ago