Categories: ಲೇಖನ

ಸೆಲೆಬ್ರಿಟಿ…………….

ಸೆಲೆಬ್ರಿಟಿ…………….

ಇತ್ತೀಚಿನ ವರ್ಷಗಳ ಭಾರತೀಯ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದರೆ ಬದಲಾಗುತ್ತಿರುವ ಯುವಸಮೂಹದ ಗ್ರಹಿಕಾ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡುತ್ತಿದೆ. ಏಕೆಂದರೆ,

ಪ್ರಸಿದ್ಧರು – ಜನಪ್ರಿಯರು – ಪ್ರಖ್ಯಾತರು – ವಿಖ್ಯಾತರು – ಕುಖ್ಯಾತರು ಮುಂತಾದ ಹೆಸರುಗಳಿಂದ ಕರೆಯುವ ಒಂದು ವರ್ಗ ಅಸ್ತಿತ್ವದಲ್ಲಿದೆ………….

ಮಧ್ಯಮ – ಕೆಳ ಮಧ್ಯಮ ಮತ್ತು ಬಡವರೇ ಹೆಚ್ಚು ಇರುವ ಭಾರತದಲ್ಲಿ ಇವರ ಪ್ರಾಮುಖ್ಯತೆ ಹೆಚ್ಚಾಗಿಯೇ ಇದೆ………….

ಹಿಂದಿನ ಕಾಲದಲ್ಲಿ ರಾಜ ಮಹಾರಾಜರು, ಅವರ ಪರಿವಾರ, ಬರಹಗಾರರು, ಪಂಡಿತರು, ಜಮೀನ್ದಾರರು, ಸಾಧಕರು ಇತ್ಯಾದಿಗಳೇ ಹೆಚ್ಚಾಗಿ ಸೆಲೆಬ್ರಿಟಿ ಪಟ್ಟಿಯಲ್ಲಿ ಇರುತ್ತಿದ್ದರು……

ಮುಂದೆ,
ಸಿನಿಮಾ ನಟನಟಿಯರು, ರಾಜಕಾರಣಿಗಳು, ಶ್ರೀಮಂತ ವ್ಯಾಪಾರೋಧ್ಯಮಿಗಳು, ಕ್ರೀಡಾಪಟುಗಳು, ಮಾಡೆಲ್ ಗಳು, ಹಾಡು ನೃತ್ಯಗಾರರು ಮುಂತಾದವರು ಈ ಪಟ್ಟಿಯಲ್ಲಿ ಸೇರ್ಪಡೆಯಾದರು.

ಈಗ,
ದೃಶ್ಯ ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾ ಪ್ರಬಲವಾದಂತೆ ಆ ಸೆಲೆಬ್ರಿಟಿ ಪರಿಕಲ್ಪನೆಯೇ ಬದಲಾಗಿದೆ.

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದರೆ ಯಾವುದಾದರೂ ಕ್ಷೇತ್ರದಲ್ಲಿ ಸಾಮಾನ್ಯರು ಮಾಡಲು ಸಾಧ್ಯವಾಗದ ಅಸಾಧ್ಯ ಕೆಲಸವನ್ನೋ, ಕಲೆಯನ್ನೋ, ತ್ಯಾಗವನ್ನೋ ಮಾಡಿದ ಸಾಧಕರು ಎಂಬ ಅಭಿಪ್ರಾಯವಿತ್ತು. ಅವರ ಬಗ್ಗೆ ಗೌರವ ಮತ್ತು ಅವರನ್ನು ಆದರ್ಶ ಎಂದು ಪರಿಗಣಿಸಲಾಗುತ್ತಿತ್ತು.

ಆದರೆ ಈಗ…….
ಬರೆಯುವಾಗಲೇ ನಗು ಬರುತ್ತಿದೆ…….😄😄😄,
ಶ್ರಮ – ಸಾಧನೆ – ವ್ಯಕ್ತಿತ್ವ – ಒಳ್ಳೆಯತನಗಳಿಂದ ಸೆಲೆಬ್ರಿಟಿಗಳಾಗುತ್ತಿದ್ದ ಸಾಧಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಅದಕ್ಕೆ ‌ವಿರುದ್ಧ ವ್ಯಕ್ತಿತ್ವದ ಜನರು ಸೆಲೆಬ್ರಿಟಿಗಳು ಎಂದು ಗುರುತಿಸಲ್ಪಡುತ್ತಿರುವುದು ತುಂಬಾ ಅಪಾಯಕಾರಿಯಾಗಿದೆ ಮತ್ತು ಹಾಸ್ಯಾಸ್ಪದವಾಗಿದೆ. ಇಂದಿನ ಮಕ್ಕಳು ಮತ್ತು ಯುವಜನರು ಆ ಉಡಾಫೆ ಸೆಲೆಬ್ರಿಟಿಗಳನ್ನೇ ಆದರ್ಶಗಳೆಂದು ಭಾವಿಸಿದರೆ ತುಂಬಾ ಕಷ್ಟವಾಗುತ್ತದೆ.

ಯಾವುದೋ ಸಿನಿಮಾ ಧಾರಾವಾಹಿಯ ನಟನಟಿಯೋ, ನಿರೂಪಕರೋ, ವಾರ್ತಾವಾಚಕರೋ, ರಾಜಕಾರಣಿಯೋ, ಕ್ರೀಡಾಪಟುವೋ, ಬರಹಗಾರನೋ, ಜ್ಯೋತಿಷಿಯೋ, ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳೋ, ಭಾಷಣಕಾರನೋ, ಸಂಘಟನಾಕಾರನೋ ಇನ್ಯಾರೋ ಟಿವಿ ಪತ್ರಿಕೆ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಂಡು ಬಹಳ ಜನರನ್ನು ತಲುಪಿ, ಅವನನ್ನು ನೋಡಿದ ಜನ ಆತ ಸೆಲೆಬ್ರಿಟಿಯೇ ಇರಬೇಕೆಂದು ಭ್ರಮಿಸಿ ಆತನನ್ನೇ ಗಣ್ಯ ವ್ಯಕ್ತಿ ಎಂದು ತಪ್ಪಾಗಿ ಭಾವಿಸುವ ಸಾಧ್ಯತೆ ಇದೆ.

ವ್ಯಕ್ತಿತ್ವವೇ ಇಲ್ಲದ‌ ಈ ರೀತಿಯ ಜನ ಸಮಾಜದ ಮುಖ್ಯ ವಾಹಿನಿಗೆ ಬಂದು ತಮ್ಮ ತಿಕ್ಕಲುತನಗಳಿಂದ ಇಡೀ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲೂ ಈ ರೀತಿ ಹಾವಳಿ ಉಂಟು ಮಾಡುತ್ತಿರುವ ಹುಚ್ಚರನ್ನು ಉದಾಹರಣೆ ಸಮೇತ ಹೇಳಬಹುದು.
ಆದರೆ ಅದು ವೈಯಕ್ತಿಕ ನಿಂದನೆಯಾಗುತ್ತದೆ.

ಆದ್ದರಿಂದ ನಾವುಗಳೇ ಈ ಸೆಲೆಬ್ರಿಟಿ ಪರಿಕಲ್ಪನೆಯನ್ನು ನಮ್ಮ ಮನಸ್ಸಿನಲ್ಲಿಯೇ ಬದಲಾಯಿಸಿಕೊಂಡು…….

ಯಾವ ವ್ಯಕ್ತಿ ತನ್ನ ಪ್ರತಿಭೆಯಿಂದ, ತ್ಯಾಗದಿಂದ, ಶ್ರಮದಿಂದ, ನಿಸ್ವಾರ್ಥದಿಂದ, ಮಾನವೀಯ ನಿಲುವಿನಿಂದ ಮತ್ತು ತನ್ನ ಇಡೀ ವ್ಯಕ್ತಿತ್ವದಿಂದ ಸಾಮಾನ್ಯಕ್ಕಿಂತ ಮೇಲ್ಮಟ್ಟದ ಸಾಧನೆ ಮಾಡಿ ತನ್ನ ನಡವಳಿಕೆಯಿಂದ ಅನುಕರಣೀಯ ಎನಿಸಿಕೊಳ್ಳುತ್ತಾನೋ ಅವರನ್ನು ನಿಜವಾದ ಸೆಲೆಬ್ರಿಟಿ ಎಂದು ಗುರುತಿಸಿ ಅನುಕರಣೀಯ ಎಂದು ಪರಿಗಣಿಸಬೇಕು ಮತ್ತು ಅದೇ ರೀತಿ ಸಿನಿಮಾ ಧಾರಾವಾಹಿಗಳಲ್ಲಿ ನಟಿಸಿ, ದೃಶ್ಯ ಮಾಧ್ಯಮದಲ್ಲಿ ಹೆಚ್ಚು ಕಾಣಿಸಿಕೊಂಡು ತಿಕ್ಕಲರಂತೆ ವರ್ತಿಸಿ, ರಾಜಕೀಯದಲ್ಲಿ ಅಧಿಕಾರ ಹಿಡಿದು, ಇನ್ನೇನೋ ಕಾರಣಕ್ಕೆ ಸಮಾಜ ದ್ರೋಹದ ಹೇಳಿಕೆ ನೀಡುವ ಹುಚ್ಚರನ್ನು ಅವರು ಎಷ್ಟೇ ಖ್ಯಾತರಾಗಿದ್ದರೂ ಅವರ ವ್ಯಕ್ತಿತ್ವ ಸರಿ ಇಲ್ಲದಿದ್ದರೆ ಅವರನ್ನು ‌ಸಾಮಾನ್ಯ ಜನರಿಗಿಂತ ಕೆಳ ಮಟ್ಟದಲ್ಲಿಯೇ ಗುರುತಿಸಬೇಕು.

ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ , ಸಮೂಹ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಅನರ್ಹರು ಸೆಲೆಬ್ರಿಟಿ ಪಟ್ಟ ಪಡೆದು ಆಗಬಾರದ ಅನಾಹುತ ಅಗುವ ಸಾಧ್ಯತೆ ಇದೆ.

ಮತ್ತೆ ಮತ್ತೆ ಯೋಚಿಸಿ, ಪ್ರಶ್ನಿಸಿಕೊಳ್ಳಿ,
ಪ್ರಬುದ್ದತೆಯ ಗುಣಮಟ್ಟದ ಸಮಾಜ ನಮ್ಮದಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಗ್ಯಾಸ್ ಸೋರಿಕೆಯಿಂದ ಬೆಂಕಿ ಅವಘಡ: ಇಬ್ಬರು ಯುವಕರಿಗೆ ಸುಟ್ಟ ಗಾಯ

ದೊಡ್ಡಬಳ್ಳಾಪುರ: ರಾತ್ರಿ ವೇಳೆ ಗ್ಯಾಸ್ ಸ್ಟೌವ್ ಆನ್ ಸ್ಥಿತಿಯಲ್ಲಿಯೇ ಕೆಲಸಕ್ಕೆ ತೆರಳಿದ್ದ ಪರಿಣಾಮ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಇಬ್ಬರು…

3 hours ago

ಬರ ವೀಕ್ಷಣೆ ನಡೆಸಿದ ಸಚಿವ ಕೆ.ಎಚ್ ಮುನಿಯಪ್ಪ: ಬೆಳೆ ವಿಮೆ ಮಾಡಿಸಲು ರೈತರಲ್ಲಿ ಮನವಿ

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

1 day ago

28ಕ್ಕೂ ಹೆಚ್ಚು ಜಿಲ್ಲೆಗಳು ಬರದ ಸಂಕಷ್ಟದಲ್ಲಿ; ರೈತರಿಗೆ ತಕ್ಷಣ ₹10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಘೋಷಿಸಿ: ಬಿ.ವೈ. ವಿಜಯೇಂದ್ರ ಆಗ್ರಹ

ತುಮಕೂರು: ರಾಜ್ಯದ 28ಕ್ಕೂ ಹೆಚ್ಚು ಜಿಲ್ಲೆಗಳು ಸಮರ್ಪಕ ಮಳೆಯ ಕೊರತೆಯಿಂದ ತೀವ್ರ ಬರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರೈತರ ಹಿತದೃಷ್ಟಿಯಿಂದ ರಾಜ್ಯ…

2 days ago

ಅತಿವೃಷ್ಟಿ–ಬರ ಎದುರಿಸಲು ಸಚಿವರಿಗೆ ಜಿಲ್ಲೆಗಳ ಉಸ್ತುವಾರಿ: ಯಾವ ಸಚಿವರಿಗೆ ಯಾವ ಜಿಲ್ಲೆ? ಸರ್ಕಾರದಿಂದ ಉಸ್ತುವಾರಿ ಪಟ್ಟಿ ಪ್ರಕಟ

ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಚಿವ ಸಂಪುಟದ ಸದಸ್ಯರಿಗೆ…

2 days ago

ಲಯನ್ಸ್ ಕ್ಲಬ್ ಆಫ್ ಕೊನಘಟ್ಟ ಲೆಜೆಂಡ್ಸ್ ಅಧ್ಯಕ್ಷರಾಗಿ ಜಿ.ಲಕ್ಷ್ಮಿಪತಿ ಆಯ್ಕೆ

ದೊಡ್ಡಬಳ್ಳಾಪುರ: ಸಮಾಜ ಸೇವೆಯೇ ಲಯನ್ಸ್ ಕ್ಲಬ್‌ನ ಮೂಲ ಧ್ಯೇಯವಾಗಿದ್ದು, ನಿರಂತರವಾಗಿ ಸೇವಾ ಕಾರ್ಯಗಳನ್ನು ಮುಂದುವರಿಸಬೇಕು. ಲಯನ್ಸ್ ಕ್ಲಬ್ ಆಫ್ ಕೊನಘಟ್ಟ…

2 days ago

ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ; ₹5.50 ಲಕ್ಷ ಲಂಚ ಸ್ವೀಕರಿಸುವ ವೇಳೆ ಟ್ರ್ಯಾಪ್

ಮೈಸೂರು: ಹುಣಸೂರು ಉಪ ವಿಭಾಗಾಧಿಕಾರಿ (ಎಸಿ) ಕಾವ್ಯಾರಾಣಿ ಅವರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ…

2 days ago