ಸೃಜನಾತ್ಮಕ ಲೇಖಕರನ್ನು ಪ್ರೋತ್ಸಾಹಿಸಬೇಕು-ಜೆ.ರಾಜೇಂದ್ರ

ದೊಡ್ಡಬಳ್ಳಾಪುರ: ಲೇಖಕರ ಕೃತಿಗಳನ್ನು ಓದುವ ಮೂಲಕ ಅವರನ್ನು ಸಮಾಜದಲ್ಲಿ ಗುರುತಿಸುವ ಕಾರ್ಯವನ್ನು ಮಾಡಬೇಕು ಹಾಗೂ ಸಾಹಿತಿಗಳನ್ನ ಪ್ರೋತ್ಸಾಹಿಸಬೇಕು ಎಂದು ಶ್ರೀ ದೇವರಾಜ ಅರಸ್ ಎಜುಕೇಶನಲ್ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ರಾಜೇಂದ್ರ ಹೇಳಿದರು.

ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜು, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜೆ.ಸಮೂಹ ಶಿಕ್ಷಣ ಸಂಸ್ಥೆಗಳು, ಐ.ಕ್ಯೂ.ಎ.ಸಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ.ಎಂ ಚಿಕ್ಕಣ್ಣ ಅವರ “ಹೊಸ ಚಿಗುರು” ಸಂಶೋಧನಾ ಲೇಖನಗಳ ಸಂಕಲನ ಹಾಗೂ ಡಾ.ಆರ್.ನಾಗರಾಜು ಅವರ ಪ್ರಿನ್ಸಿಪಲ್ಸ್ ಆಫ್ ಇಂಟರ್ನೆಟ್ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಯಾರಲ್ಲಿ ವಿವೇಕ, ವಿದ್ವತ್ತು ಇದೆಯೋ ಅವರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ಸಾಗಬೇಕು, ಸಾಹಿತಿಗಳನ್ನು ಪ್ರೀತಿಸಬೇಕು ಅವರ ಕೃತಿಗಳನ್ನು ಇಷ್ಟಪಡಬೇಕು ಆಗ ಮಾತ್ರ ಸಾಹಿತಿ ಬೆಳೆಯುತ್ತಾನೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನೃಪತುಂಗ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಸಿ ಪುಟ್ಟೇಶ್ “ಹೊಸ ಚಿಗುರು” ಕೃತಿ ಕುರಿತು ಮಾತನಾಡಿದ ಅವರು
ಸಂಶೋಧನಾ ಸಂಕಲನದ ಲೇಖನಗಳು ಕನ್ನಡ ಅಧ್ಯಾಪಕರು, ಯುವ ಸಂಶೋಧನಾರ್ಥಿಗಳು ಸಮಕಾಲೀನ ಸಂದರ್ಭದಲ್ಲಿ ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುತ್ತಿರುವ ರೀತಿಯನ್ನೂ ಹಾಗೂ
ಈ ಕೃತಿಯಲ್ಲಿ ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹ, ವಿಶ್ಲೇಷಣೆಗಳು ಗಮನ ಸೆಳೆಯುತ್ತವೆ, ವಿವಿಧ ಜ್ಞಾನಶಿಸ್ತುಗಳ ಆಕರಗಳನ್ನು ಇಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ, ಸಾಹಿತ್ಯ ಕೃಷಿ, ಸಂಶೋಧನೆಯು ನಿರಂತರವಾಗಿ ಸಾಗಬೇಕಾದುದು, ಸಾಹಿತ್ಯ ಶೋಧವು ಚಲನಶೀಲ ಪ್ರಕ್ರಿಯೆ ಎಂಬುದು ಇಲ್ಲಿನ ಪ್ರಧಾನ ದೃಷ್ಟಿಕೋನವಾಗಿದೆ, ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ರೀತಿಯನ್ನು ಸಹ ಇಲ್ಲಿನ ವಿಶ್ಲೇಷಣೆಗಳಲ್ಲಿ ಕಾಣಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್. ಎಲ್ ಜಾಲಪ್ಪ ಕ್ಯಾಂಪಸ್ ನ ಅಧ್ಯಕ್ಷರಾದ ಜೆ. ಆರ್ ರಾಕೇಶ್, ಮಾನವ ಸಂಪನ್ಮೂಲ ನಿರ್ದೇಶಕರಾದ ಬಾಬುರೆಡ್ಡಿ, ಉಪ ಪ್ರಾಂಶುಪಾಲರಾದ ಕೆ. ದಕ್ಷಿಣ ಮೂರ್ತಿ, ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಪಿ. ಚೈತ್ರ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಕಾಶ್ ಸಿ.ಪಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವೆಂಕಟೇಶ್, ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಬಾಬುಸಾಬಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್ ಬಿ ಮತ್ತಿತರರು ಹಾಜರಿದ್ದರು.

Ramesh Babu

Journalist

Recent Posts

ರಸ್ತೆಯಲ್ಲಿ ಅಡ್ಡಾದಿಡ್ಡಿ ಲಾರಿ ಚಾಲನೆ: ವಾಹನ ಸವಾರರಿಗೆ ಕಿರಿಕಿರಿ: ಲಾರಿ ತಡೆದು ಚಾಲಕನಿಗೆ ತರಾಟಗೆ ತೆಗೆದುಕೊಂಡ ಸಾರ್ವಜನಿಕರು

ಲಾರಿಯನ್ನು ಅಡ್ಡಾದಿಡ್ಡಿಯಾಗಿ ಚಾಲಾಯಿಸಿಕೊಂಡು ಬಂದ ಚಾಲಕನು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದು ಕಿರಿಕಿರಿ ಉಂಟು ಮಾಡಿರುವ ಘಟನೆ…

10 hours ago

ಅಸಂಘಟಿತ ಕಾರ್ಮಿಕರ ಮಂಡಳಿಗೆ ಪೆಟ್ರೋಲ್, ಡೀಸೆಲ್ ಸೆಸ್ ನಲ್ಲಿ ಪಾಲು- ಕಾರ್ಮಿಕ ಸಚಿವ ಸಂತೋಷ್ ಲಾಡ್

ಕಾರವಾರ:- ರಾಜ್ಯದಲ್ಲಿನ ಅಸಂಘಟಿತ ಕಾರ್ಮಿಕರಿಗೆ ಹೆಚ್ಚಿನ ಸಂಖ್ಯೆಯ ಸಾಮಾಜಿಕ ಭದ್ರತೆ ಯೋಜನೆಗಳನ್ನು ಒದಗಿಸಲು ರಾಜ್ಯದಲ್ಲಿನ ಡೀಸೆಲ್ ಪೆಟ್ರೋಲ್ ಮೇಲೆ ವಿಧಿಸುತ್ತಿರುವ…

11 hours ago

“ಬದುಕಿನ ಬೆಳದಿಂಗಳು”

ಬದುಕಿನ ಬೆಳದಿಂಗಳಲ್ಲಿ ನಮ್ಮ ಹುರುಪು, ಹುಕುಂಗಳು ಹಾಗೂ ಹಲವು ವಿಭಿನ್ನತೆಗಳ ವಿಚಾರಾರ್ಥಗಳು ನೆನೆಗುದಿಗೆ ಬಿದ್ದಿದ್ದುಂಟು. ಹಾಗೆಯೇ ಸದ್ಗುಣ-ದುರ್ಗುಣಗಳ ವ್ಯತ್ಯಾಸವನು ಅರಿತು…

12 hours ago

ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3 ಗಂಟೆಯಲಿ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ…

12 hours ago

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ…

14 hours ago

ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ರೈತರಲ್ಲಿ ಮನವಿ

ತೋಟಗಾರಿಕೆ ಇಲಾಖೆ ವತಿಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ತೋಟಗಾರಿಕೆ…

14 hours ago