ಕೋಲಾರ: ರೈತರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿ ಸಂಘಗಳು ಸಹಕಾರಿಯಾಗಿದ್ದು ರೈತರು ಹೆಚ್ಚಿನ ಠೇವಣಿ ಇಟ್ಟರೆ ಡಿಸಿಸಿ ಬ್ಯಾಂಕ್ ವತಿಯಿಂದ ಹೆಚ್ಚಿನ ಸಾಲ ನೀಡಲು ಸಾಧ್ಯವಾಗುತ್ತದೆ ಎಂದು ಸುಗಟೂರು ವಿವಿಧ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಅಂಕತಟ್ಟಿ ಎ.ಸಿ ಭಾಸ್ಕರ್ ಮನವಿ ಮಾಡಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ನಡೆದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಮೂಲಕ ಆರ್ಥಿಕ ನೆರವು ಕಲ್ಪಿಸುತ್ತಿದೆ. ಆದರೆ, ಜನರು ಸೌಲಭ್ಯ ಪಡೆದುಕೊಂಡು ತಮ್ಮ ಉಳಿತಾಯದ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆ ಸಹಕಾರಿ ವ್ಯವಸ್ಥೆಯ ಉಳಿವಿಗಾಗಿ ಸಹಕಾರಿ ಬ್ಯಾಂಕ್ ಗಳಲ್ಲಿ ಠೇವಣಿ ಇಡುವಂತೆ ಮನವಿ ಮಾಡಿದರು.
ನಾಲ್ಕು ವರ್ಷಗಳ ಹಿಂದೆ ರೈತರಿಗೆ ಒಂದು ಎಕರೆಗೆ 50 ಸಾವಿರ ಶೂನ್ಯ ಬಡ್ಡಿಯಲ್ಲಿ ನೀಡುತ್ತಿರುವ ಸಾಲ ಇಂದಿನ ಬೆಲೆ ಏರಿಕೆ ಕಾಲದಲ್ಲಿ ಯಾವುದಕ್ಕೂ ಸಾಕಾಗುವುದಿಲ್ಲ ಎಕರೆಗೆ ಶೂನ್ಯ ಬಡ್ಡಿಯಲ್ಲಿ ಒಂದು ಲಕ್ಷ ನೀಡಲಾಗುತ್ತದೆ ಜೊತೆಗೆ ಹೊಸಬರಿಗೆ ಒಂದು ಲಕ್ಷ ನೀಡಲಾಗುತ್ತದೆ ಜೊತೆಗೆ ಡಿಸಿಸಿ ಬ್ಯಾಂಕ್ ವತಿಯಿಂದ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಲಾಗುತ್ತದೆ ಮುಕ್ತವಾಗಿ ಹೊಸ ಷೇರುದಾರರನ್ನು ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ರೈತರು ಹೆಚ್ಚಿನ ಸದಸ್ಯರು ಆಗುವಂತೆ ಮನವಿ ಮಾಡಿದರು,
ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಮೂಲಕ ವಿವಿಧ ಕಂಪನಿಗಳ ಮೂಲಕ 52 ಲಕ್ಷದಷ್ಟು ಗೊಬ್ಬರ ಮಾರಾಟ ಮಾಡಲಾಗಿದೆ ಕೆಸಿಸಿ ಸಾಲವಾಗಿ 540 ರೈತರಿಗೆ 7 ಕೋಟಿ, ರೇಷ್ಮೆ ಹುಳುಮನೆಗೆ 11 ರೈತರಿಗೆ 79.70 ಲಕ್ಷ ಜೊತೆಗೆ 372 ಸ್ತ್ರೀಶಕ್ತಿ ಸಂಘಗಳಿಗೆ 18.60 ಕೋಟಿ ವ್ಯವಹರಿಸಲಾಗಿದೆ ಇದರಲ್ಲಿ 6.50 ಕೋಟಿ ವಸೂಲಿಯಾಗಿದ್ದು ಉಳಿದ ಹಣವನ್ನು ಪಾವತಿಸಲು ಮನವಿ ಮಾಡಿದರು,
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಅಮರನಾರಾಯಣಸ್ವಾಮಿ, ವೆಂಕಟರಾಮಪ್ಪ, ಎಂ.ಎಸ್.ರಮಣಾರೆಡ್ಡಿ, ಡಿ.ಗೋಪಾಲಪ್ಪ, ವೆಂಕಟಮ್ಮ, ಸವಿತಾ ಎನ್. ಶೆಟ್ಟಿ, ವೃತ್ತಿಪರ ನಿರ್ದೇಶಕ ಎ.ಎಂ.ಹನುಮೇಗೌಡ, ಸೈಯದ್ ಸಿರಾಜ್. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಪುಟ್ಟರಾಜು, ಹಿರಿಯ ಮಾರಾಟ ಗುಮಾಸ್ತರಾದ ಎಸ್.ವಿ.ರವಿಚಂದ್ರ,ಎಸ್. ನಾಗೇಶ್, ಆರ್. ಸುಶ್ಮಿತ, ಮಹೀದ್ದುಲ್ಲಾ ಷರೀಫ್ ಷೇರುದಾರರಾದ ಚಂದ್ರೇಗೌಡ, ಟಿ.ಎಂ.ವೆಂಕಟೇಶ್, ಟಿ.ಎನ್.ರವಿ, ಗೋಪಾಲಗೌಡ, ವಿ.ನಾರಾಯಣರೆಡ್ಡಿ, ನಾಗಪ್ಪ, ರಾಘವೇಂದ್ರ ಮುಂತಾದವರು ಇದ್ದರು
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…
ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…