ರಾತ್ರಿಹೊತ್ತು ಎಲ್ಲರೂ ಟಿವಿಗೀವಿ ನೋಡಿ, ಊಟಗೀಟ ಮಾಡಿ, ಗಾಢ ನಿದ್ರೆಗೆ ಜಾರಿದ ಮೇಲೆ ನಡುರಾತ್ರಿ ಕಳ್ಳರ ಓಡಾಟ ಶುರುವಾಗುತ್ತೆ. ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ಕದ್ದ ವಸ್ತುಗಳನ್ನು ತುಂಬಿಕೊಳ್ಳಲು ಬೆನ್ನಿಗೆ ಒಂದು ಬ್ಯಾಗ್ ತಗಲಾಕೊಂಡು, ಕೈಗಳಲ್ಲಿ ಲಾಂಗ್, ಮಚ್ಚು, ಕಬ್ಬಿಣದ ರಾಡ್, ಕಲ್ಲುಗಳನ್ನು ಹಿಡಿದುಕೊಂಡು ಅಲ್ಲಲ್ಲಿ ಸಿಸಿಟಿವಿ ಇದ್ರುನೂ ಕ್ಯಾರೆ ಎನ್ನದೆ ರಾಜಾರೋಷವಾಗಿ ಮನೆಗಳ ಗೇಟ್ ತೆಗೆಯೋದು, ಕಾಂಪೌಡ್ ಹತ್ತೋದು, ಕಿಟಕಿಗಳಲ್ಲಿ ಬಗ್ಗಿ ನೋಡೋದು, ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಗುವ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗೋದು. ಇಂತಹ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ನಂದಿನಿ ಲೇಔಟ್, ನಿಜಗಲ್ ಲೇಔಟ್, ಯೋಗಿ ನಾರಾಯಣ ಬಡಾವಣೆ ಸುತ್ತಾಮುತ್ತ ಇರುವ ಏರಿಯಾಗಳಲ್ಲಿ ಮಂಗಳವಾರ ರಾತ್ರಿ ಬೆಳಕಿಗೆ ಬಂದಿದೆ…. ಕಳ್ಳರ ಚಲನವಲನ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಖದೀಮರ ಭಯಾನಕ ದೃಶ್ಯಗಳನ್ನ ಕಂಡ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ…..
ಮಂಗಳವಾರ ಮಧ್ಯರಾತ್ರಿ ಸುಮಾರು 2:45ರ ಸಮಯದಲ್ಲಿ ಚೋರರ ಗ್ಯಾಂಗ್ ದೊಡ್ಡಬಳ್ಳಾಪುರ ನಗರದ ನಂದಿನಿ ಲೇಔಟ್, ನಿಜಗಲ್ ಲೇಔಟ್, ಯೋಗಿ ನಾರಾಯಣ ಬಡಾವಣೆ ಸುತ್ತಾಮುತ್ತ ಇರುವ ಏರಿಯಾಗಳಲ್ಲಿನ ಮನೆಗಳ ರಾಬರಿಗೆ ಇಳಿದಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು, ಜನರು, ನಾಯಿಗಳ ಭಯವಿಲ್ಲದೇ ಇದು ನಮ್ದೆ ಏರಿಯಾ, ಮನೆ ಎಂದು ಭಾಬಿಸಿ ನಿಶಬ್ಧವಾದ ರಾತ್ರಿ ವೇಳೆ ಹಾದಿಬೀದಿಗಳಲ್ಲಿ ಸ್ಮಗ್ಲಿಂಗ್ ಗ್ಯಾಂಗ್ ಓಡಾಡುತ್ತಿದ್ದಾರೆ. ಚೋರರ ಸಂಚಾರದಿಂದ ಎಲ್ಲರಲ್ಲಿ ಸಂಚಲನ ಸೃಷ್ಟಿಸಿದೆ. ಮಂಗಳವಾರ ರಾತ್ರಿ ನಡೆದಿರುವ ಘಟನೆಯಿಂದ ಇಲ್ಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮಹಿಳೆಯರು, ಮಕ್ಕಳು, ಹೆಣ್ಣು ಮಕ್ಕಳು, ವೃದ್ಧರು ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದಾರೆ. ಕಳ್ಳಕಾಕರಿಂದ ನಮಗೆ ರಕ್ಷಣೆ ಬೇಕೆಂದು ಪೊಲೀಸರ ಮೊರೆ ಹೋಗಿದ್ದಾರೆ.
ಮಂಗಳವಾರ ರಾತ್ರಿ ನಡೆದ ಘಟನೆಯಿಂದ ನಾವು ತುಂಬಾನೇ ಭಯಭೀತರಾಗಿದ್ದೇವೆ. ಜೀವ ಭಯದಲ್ಲಿ ರಾತ್ರಿಗಳನ್ನ ಕಳೆಯುತ್ತಿದ್ದೇವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ರಾಜ್ಯ ಪೊಲೀಸ್ ಇಲಾಖೆಯು ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಇದು ನೆಪ ಮಾತ್ರಕ್ಕೆ ಇದೆ. ನಮ್ಮ ಏರಿಯಾದ ಮನೆಗಳಿಗೆ ಯಾವೊಬ್ಬ ಪೊಲೀಸ್ ಸಿಬ್ಬಂದಿ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗಳನ್ನು ಆಲಿಸಿಲ್ಲ. ಬೀಟ್ ಕಾನ್‌ಸ್ಟೆಬಲ್‌ಗಳು, ಇನ್‌ಸ್ಪೆಕ್ಟರ್‌ಗಳು ಮತ್ತು ಪೊಲೀಸ್ ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿ, ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡಿ ಸ್ಥಳೀಯ ಸಮಸ್ಯೆಗಳ ದತ್ತಸಂಚಯವನ್ನು ನಿರ್ವಹಿಸುತ್ತಿಲ್ಲ ಎಂದು ನಿಜಗಲ್ ನಿವಾಸಿ ಸೋಮಣ್ಣ ಆರೋಪಿಸಿದ್ದಾರೆ.
ಕಳ್ಳರ ಕಾಟದಿಂದ ನಾವು ನಮ್ಮ ಮನೆಗಳಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಪ್ರತಿದಿನ ಜೀವಭಯದಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳ ಕೂಗಳತೆ ದೂರದಲ್ಲಿರುವ ನಮ್ಮ ಮನೆಗಳ ಬಳಿ ಕಳ್ಳರು ಓಡಾಡುತ್ತಿದ್ದಾರೆ. ನಾವು ವಾಸ ಮಾಡುತ್ತಿರುವ ಏರಿಯಾಗಳ ಖಾಲಿ ಜಾಗಗಳು ಕುಡುಕರ ತಾಣವಾಗಿವೆ. ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ನಮಗೆ ಪೊಲೀಸರ ಸೂಕ್ತ ರಕ್ಷಣೆ ಅತ್ಯವಶ್ಯಕವಾಗಿ ಬೇಕೇಬೇಕು. ಕೂಡಲೇ ಪೊಲೀಸ್ ಬೀಟ್ ಹೆಚ್ಚಿಸಬೇಕು. ಕಳ್ಳರ ಹೆಡೆಮುರಿಕಟ್ಟಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರ ವಹಿಸಬೇಕು ಎಂದು ಯೋಗಿ ನಾರಾಯಣ ಬಡಾವಣೆ ನಿವಾಸಿ ಗೌರಮ್ಮ ಆಗ್ರಹಿಸಿದ್ದಾರೆ….
ದೊಡ್ಡಬಳ್ಳಾಪುರ: ಕೊಳೆತ ಸ್ಥಿತಿಯಲ್ಲಿ ತಲೆ ಇಲ್ಲದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನೆಲಮಂಗಲ–ಮಧುರೆ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಸಮೀಪ…
ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು…
ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…
ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…
ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…
ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…