Categories: ಲೇಖನ

ಮಹಾಲಯ ಅಮಾವಾಸ್ಯೆ – ಪಿತೃ ಪಕ್ಷ – ಎಡೆ ಹಬ್ಬ….

ಮತ್ತೆ ಮತ್ತೆ ಕಾಲದ ಅಗ್ನಿಪರೀಕ್ಷೆಯಲ್ಲಿ ನಮ್ಮ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಪುನರ್ ವಿಮರ್ಶೆಗೊಳಪಡಿಸಿ, ಅನುಭವದ ಆಧಾರದ ಮೇಲೆ ಸಾರ್ವತ್ರಿಕ ಸತ್ಯಗಳನ್ನು ಒಪ್ಪಿಕೊಂಡು ಮುನ್ನಡೆದಲ್ಲಿ ಮಾತ್ರ ಸಮಾಜ ಸದಾ ಜೀವನೋತ್ಸಾಹಿಯಾಗಿ, ಪ್ರಗತಿಪರವಾಗಿ, ಚಲನಶೀಲತೆಯನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಎಲ್ಲಾ ಆಚರಣೆಗಳು ನಿಂತಲ್ಲೇ ನಿಂತು ಕೊಳೆತು ನಾರುವುದು ನಿಶ್ಚಿತ.

ಈಗಾಗಲೇ ವಿಶ್ವದ ಕೆಲವು ಸಮಾಜಗಳು ಬದಲಾವಣೆಗೆ ಒಪ್ಪಿಕೊಂಡು ಮುನ್ನಡೆಯುತ್ತಿವೆ. ಮತ್ತೆ ಕೆಲವು ಅದೇ ಪುರಾತನ ಚಿಂತನೆಗಳಲ್ಲಿ ಹಿಂಸಾತ್ಮಕವಾಗಿ ನಾಶವಾಗುತ್ತಿವೆ. ಆಯ್ಕೆ ನಮ್ಮ ಮುಂದಿದೆ…..

ಮಹಾಲಯ ಅಮಾವಾಸ್ಯೆ –
ಪಿತೃ ಪಕ್ಷ – ಎಡೆ ಹಬ್ಬ…………..

ನಗರ ಮತ್ತು ಗ್ರಾಮೀಣ ಪ್ರದೇಶ ಎಂಬ ಭೇದವಿಲ್ಲದೆ ಬಹುತೇಕರ ಮನೆಯಲ್ಲಿ ಆಚರಿಸುವ ಒಂದು ಹಬ್ಬ……

ತೀರಿಹೋದ ಹಿರಿಯರ ನೆನಪಿನಲ್ಲಿ, ಅವರ ಇಷ್ಟದ ಊಟ, ಬಟ್ಟೆ, ವಸ್ತುಗಳು ಇತ್ಯಾದಿಗಳನ್ನು ಇಟ್ಟು ಅವರಿಗೆ ಅರ್ಪಿಸಿದಂತೆ ಮಾಡಿ ನಾವೇ ಉಪಯೋಗಿಸುವುದು……

ಜ್ಯೋತಿಷಿಗಳಂತು ಟಿವಿಗಳಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಅನೇಕ ಮೌಢ್ಯಗಳನ್ನು ಹೇಳಿ ಜನರನ್ನು ಮತ್ತಷ್ಟು ದಿಕ್ಕು ತಪ್ಪಿಸುತ್ತಿದ್ದಾರೆ.
ಪುನರ್ ಜನ್ಮ, ಆತ್ಮಗಳ ಅಲೆದಾಟ, ಶವಗಳ ಕನಸುಗಳು,.. ಇನ್ನೂ ಮುಂತಾದ ಭಯಂಕರ ವಿಷಯಗಳನ್ನು ಪ್ರಸ್ತಾಪಿಸಿ ಜನರನ್ನು ಭಯಗೊಳಿಸಿ ಹಬ್ಬದ ತೀವ್ರತೆ ಹೆಚ್ಚಿಸುತ್ತಿದ್ದಾರೆ. ‌ಒಂದೇ ಒಂದು ಟಿವಿ ವಾಹಿನಿ ವಿವೇಚನೆಯಿಂದ ಈ ಹಬ್ಬದ ವಿಮರ್ಶೆ ಮಾಡುತ್ತಿಲ್ಲ. ಊಹಾತ್ಮಕ ಮೂಡನಂಬಿಕೆಯನ್ನೇ ಮತ್ತಷ್ಟು ಆಳಕ್ಕೆ ಇಳಿಸುತ್ತಿದ್ದಾರೆ.

ಬದಲಾದ ಕಾಲಮಾನದಲ್ಲಿ ಈ ಹಬ್ಬದ ಆಚರಣೆಯನ್ನು ಮತ್ತಷ್ಟು ವಿಶಾಲ, ಸರಳ, ಅರ್ಥಪೂರ್ಣ, ಪ್ರಾಯೋಗಿಕ ಮತ್ತು ಮಾನವೀಯಗೊಳಿಸಬಹುದಾದ ಒಂದು ಸಲಹೆ ಮತ್ತು ಮನವಿ………

ವ್ಯಕ್ತಿಯ ಸಾವೇ ಆತನ ಕೊನೆ. ಬದುಕಿದ್ದಾಗ ಎಷ್ಟೇ ಪ್ರಮುಖನಾಗಿದ್ದರೂ ಉಸಿರು ನಿಂತ ನಂತರ ಆತನ ದೇಹ ಪ್ರಕೃತಿಯಲ್ಲಿ ಲೀನವಾಗುತ್ತದೆ. ಅನಂತರ ನಾವು ಮಾಡುವ ಯಾವ ಕ್ರಿಯೆಗಳು, ಚಟುವಟಿಕೆಗಳು ಅವನಿಗೆ ಅರಿವಾಗುವುದಿಲ್ಲ. ಅವೆಲ್ಲಾ ಬದುಕಿರುವವರ ಮಾನಸಿಕ ನೆಮ್ಮದಿಗಾಗಿ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು. ಜನ್ಮ ಜನ್ಮಾಂತರ ಎಂಬುದು ಒಂದು ಸಾಂಕೇತಿಕ ಕಲ್ಪನೆ ಮಾತ್ರ.

ಹೌದು ನಿಜ, ಸತ್ತ ವ್ಯಕ್ತಿ ಅದರಲ್ಲೂ ನಮ್ಮ ತಾತ, ಅಜ್ಜಿ, ಅಪ್ಪ, ಅಮ್ಮ ಮುಂತಾದ ರಕ್ತ ಸಂಬಂಧಿಗಳು ಆಗಿದ್ದರೆ ಅವರನ್ನು, ಅವರ ಒಳ್ಳೆಯ ಆದರ್ಶ ಗುಣಗಳನ್ನು ನೆನಪಿಸಿಕೊಳ್ಳುವುದು ಮತ್ತು ಅದನ್ನು ಪಾಲಿಸುವುದು, ಬದುಕಿರುವ ಮುಂದಿನ ಪೀಳಿಗೆಯವರಿಗೆ ತಲುಪಿಸುವುದು ನಮ್ಮ ಕರ್ತವ್ಯ. ಅದರಲ್ಲಿ ಎರಡು ಮಾತಿಲ್ಲ.

ಆದರೆ ಎಂದೋ ಸತ್ತಿರುವ ನಮ್ಮ ಹಿರಿಯರ ಹೆಸರಿನಲ್ಲಿ ಅನಾವಶ್ಯಕವಾಗಿ ಅವರಿಗೆ ತಲುಪದಿರುವ ಕಾರ್ಯಗಳನ್ನು ಸಂಪ್ರದಾಯವೆಂಬತೆ ಮಾಡಿ,
ಹಣ ಮತ್ತು ಸಮಯ ವ್ಯರ್ಥಮಾಡುವ ಬದಲು, ಜೀವಂತವಿರುವ ನಮ್ಮ ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಚಿಕ್ಕಪ್ಪ, ದೊಡ್ಡಮ್ಮ ಮುಂತಾದ ನಮ್ಮ ಅವಲಂಬಿತರ ಬದುಕಿನ ಕೊನೆಯ ಹಂತದಲ್ಲಿರುವ ಹಿರಿಯ ಚೇತನಗಳಿಗೆ ಮಹತ್ವ ನೀಡಿ, ವೃದ್ಧಾಪ್ಯದಲ್ಲಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ಹೆಚ್ಚು ಉಪಯುಕ್ತವಲ್ಲವೇ. ಅದರಲ್ಲೂ ಇಂದಿನ ಆಧುನಿಕ ಜೀವನದಲ್ಲಿ ನೆಮ್ಮದಿಯ ಆಶ್ರಯಕ್ಕಾಗಿ ಪರಿತಪ್ಪಿಸುತ್ತಿರುವ ನಮ್ಮ ಪೋಷಕರಿಗೆ ನೆರವಾಗುವುದು ಸತ್ತ ವ್ಯಕ್ತಿಗೆ ನಾವು ತೋರಿಸುವ ಗೌರವಕ್ಕಿಂತ ಹೆಚ್ಚು ಮಾನವೀಯವಲ್ಲವೆ….‌.

ಇದ್ದಾಗ ಅವರನ್ನು ಸರಿಯಾಗಿ ನೋಡಿಕೊಳ್ಳದೆ ತುಚ್ಚವಾಗಿ ಕಂಡು ಸತ್ತ ನಂತರ ಅವರಿಗಾಗಿ ಏನು ಮಾಡಿದರೇನು ಫಲ. ವಾಸ್ತವ ನೆಲೆಯಲ್ಲಿ ಆಗಿಹೋದವರನ್ನು ಮಾನಸಿಕವಾಗಿ ಗೌರವಿಸಿ ಕೃತಜ್ಞತೆ ಅರ್ಪಿಸೋಣ.

ಆದರೆ ಅದರ ಜೊತೆಗೆ ನಮ್ಮೆಲ್ಲಾ ತನು, ಮನ, ಧನಗಳನ್ನು ಭೌತಿಕವಾಗಿ ನಮ್ಮೊಂದಿಗಿರುವ ನಮ್ಮ ಆತ್ಮೀಯ ಹಿರಿಯ ಜೀವಗಳಿಗೆ ಮೀಸಲಿಡೋಣ. ಈ ಹಬ್ಬವನ್ನು ಹೆಚ್ಚು ಮಾನವೀಯ, ಜೀವಪರಗೊಳಿಸೋಣ. ಇದಕ್ಕಾಗಿ ಹೆಚ್ಚು ಶ್ರಮವೇನು ಪಡಬೇಕಾಗಿಲ್ಲ. ಕೇವಲ ಒಂದು ಸಣ್ಣ ಜೀವಪರ ನಿಲುವಿನಿಂದ ಇದು ಸಾಧ್ಯ.

ಸತ್ತವರ ನೆನಪುಗಳ ಸಾರ್ಥಕತೆ ಬದುಕಿರುವ ನಮ್ಮ ಅವಲಂಬಿತರ ಸೇವೆಯಲ್ಲಿ ಅಡಗಿದೆ……..

ಅದೇ ಮಹಾಲಯ ಅಮಾವಾಸ್ಯೆ ಹಬ್ಬ, ಅದೇ ಪಿತೃ ಪಕ್ಷದ ಪ್ರಾಮುಖ್ಯತೆ, ಅದೇ ಎಡೆ ಹಬ್ಬದ ಶ್ರೇಷ್ಠತೆ……….

ಬದಲಾವಣೆ ಇಲ್ಲಿಂದಲೇ,
ನಮ್ಮಿಂದಲೇ ಪ್ರಾರಂಭವಾಗಲಿ.
ಮತ್ತೆ ಇದು ಹಿಂದೂ ಸಂಪ್ರದಾಯ ವಿರೋಧಿ ನಿಲುವು ಎಂದು ಭಾವಿಸದಿರಿ. ಅನುಭವದಿಂದ ಮೂಡಿದ ಸಾಂಪ್ರದಾಯಿಕ, ವೈಚಾರಿಕ ಆಚರಣೆಗಳು ಕಾಲದ ಪರೀಕ್ಷೆಯಲ್ಲಿ ಮತ್ತಷ್ಟು ಹೊಳಪು ಮೂಡಿ ಹೆಚ್ಚು ಪ್ರಯೋಜನಕಾರಿಯಾಗಲಿ ಎಂಬ ಆಶಯವಷ್ಟೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

12 hours ago

ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…

13 hours ago

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…

13 hours ago

ಪೋಷಕರ ಗೌರವವೇ ಬದುಕಿನ ಮೊದಲ ಪಾಠ- ಸುರೇಶ್ ಗೌಡ ಬಿ

ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…

14 hours ago

10.50 ಕೋಟಿ ಸಾಲ ವಂಚನೆ ಆರೋಪ: ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ 10.50 ಕೋಟಿ ಸಾಲ ಮಂಜೂರು ಮಾಡಿ ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ ಆರ್ಥಿಕ…

16 hours ago

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ–ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್…

1 day ago