Categories: ಮಂಡ್ಯ

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿರುವ ಅಕ್ರಮವನ್ನು ಸಚಿವ ಎನ್. ಚಲುವರಾಯಸ್ವಾಮಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ತಾಲೂಕಿನ ಉಪ್ಪಾರಹಳ್ಳಿ ಗ್ರಾಮದ ಆಂಜನೇಯ ದೇವಾಲಯದ ನೆಲದ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಗುವಳಿ ಚೀಟಿ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ಮತ್ತು ಅದರ ಹಿಂದಿನ ರೂವಾರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚುನಾವಣೆಗೂ ಮುನ್ನ ನಡೆದಿದ್ದ ಈ ಸಾಗುವಳಿ ಚೀಟಿ ಅಕ್ರಮದ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ, ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಅಂದಿನ ಎಡಿಸಿ ಆಗಿದ್ದ ನಿಶ್ಚಲಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಸಮಗ್ರ ತನಿಖೆಯಲ್ಲಿ ಅಕ್ರಮಗಳು ಸಾಬೀತಾಗಿದ್ದು, ಕಡತದಲ್ಲಿ ಸ್ಪಷ್ಟವಾಗಿ ಷರಾ ಬರೆಯಲಾಗಿದೆ.

ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ 4 ಎಕರೆ 38 ಗುಂಟೆ ಜಮೀನು ಇದ್ದವರಿಗೆ ಮಾತ್ರ ಸಾಗುವಳಿ ಚೀಟಿ ನೀಡಲು ಅವಕಾಶವಿದೆ. ಆದರೆ, ಕಾನೂನು ಉಲ್ಲಂಘಿಸಿ 5 ಎಕರೆ ಜಮೀನು ಹೊಂದಿದ್ದವರಿಗೂ ಮಂಜೂರು ಮಾಡಲಾಗಿದೆ. ಅರ್ಜಿ ಸಲ್ಲಿಸಿದ ವ್ಯಕ್ತಿ ಒಬ್ಬರಾದರೆ, ಸಾಗುವಳಿ ಚೀಟಿ ಪಡೆದವರು ಮತ್ತೊಬ್ಬರು. ಇನ್ನು ಕೆಲವು ಪ್ರಕರಣಗಳಲ್ಲಿ ಅರ್ಜಿ ಹಾಕದವರಿಗೂ ಸಾಗುವಳಿ ಚೀಟಿ ನೀಡುವ ಮೂಲಕ ಗೋಲ್ ಮಾಲ್ ನಡೆಸಲಾಗಿದೆ. ಹಲವು ಪತ್ರಗಳಲ್ಲಿ ತಹಸೀಲ್ದಾರ್ ಹಾಗೂ ಸಾಗುವಳಿ ಸಮಿತಿ ಅಧ್ಯಕ್ಷರ ಸಹಿಯೇ ಇಲ್ಲದೆ ವಿತರಣೆ ಮಾಡಲಾಗಿದೆ ಎಂದು ಸಚಿವರು ಅಕ್ರಮದ ಸ್ವರೂಪವನ್ನು ವಿವರಿಸಿದರು.

ಒಮ್ಮೆ ಸಾಗುವಳಿ ಚೀಟಿ ಮಂಜೂರಾದ ಬಳಿಕ ಅದನ್ನು ವಜಾಗೊಳಿಸುವ ಅಧಿಕಾರ ಕೇವಲ ಎಸಿ (ಉಪ ವಿಭಾಗಾಧಿಕಾರಿ) ಅವರಿಗೆ ಮಾತ್ರ ಇರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 38 ಅಕ್ರಮ ಪ್ರಕರಣಗಳನ್ನು ಎಸಿ ಅವರು ವಜಾಗೊಳಿಸಿದ್ದಾರೆ. ಉಳಿದ ಪ್ರಕರಣಗಳನ್ನು ಪರಿಶೀಲನೆಗಾಗಿ ಸಮಿತಿಯ ಮುಂದಿಡಲಾಗಿದೆ ಎಂದರು.

*ಅರ್ಹತೆ ಇದ್ದವರಿಗೆ ಸಾಗುವಳಿ ಚೀಟಿ*
ಕಾನೂನು ಪ್ರಕಾರ ಅರ್ಹತೆ ಇದ್ದು, ಕೇವಲ ತಾಂತ್ರಿಕ ಅಥವಾ ಪ್ರಕ್ರಿಯೆಯ (ಪ್ರೊಸೀಜರ್) ಲೋಪದಿಂದಾಗಿ ಸಾಗುವಳಿ ಚೀಟಿ ತಡೆಹಿಡಿಯಲ್ಪಟ್ಟಿದ್ದರೆ, ಅಂತಹ ರೈತರಿಗೆ ಯಾವುದೇ ಪಕ್ಷ ಭೇದಭಾವವಿಲ್ಲದೆ ಮಂಜೂರು ಮಾಡಿಕೊಡಲಾಗುವುದು. ಆದರೆ, ಕಾನೂನುಬಾಹಿರವಾಗಿ ಪಡೆದವರಿಗೆ ರಕ್ಷಣೆ ನೀಡಲು ಸಾಧ್ಯವೇ ಇಲ್ಲ ಎಂದರು.
ಈ ಹಿಂದೆ ತಂತ್ರಾಂಶದ ಲೋಪಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ಆದರೆ, ಪ್ರಸ್ತುತ ನಮ್ಮ ಸರ್ಕಾರ ರೂಪಿಸಿರುವ ಹೊಸ ತಂತ್ರಾಂಶದಲ್ಲಿ ಇಂತಹ ಯಾವುದೇ ಅಕ್ರಮಗಳಿಗೆ ಅವಕಾಶವೇ ಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

*ಮಾಜಿ ಶಾಸಕರಿಗೆ ತಿರುಗೇಟು*
ಇದೇ ವೇಳೆ ಹೆಸರು ಪ್ರಸ್ತಾಪಿಸದೆ ಮಾಜಿ ಶಾಸಕ ಸುರೇಶ್ ಗೌಡ ಅವರ ವಿರುದ್ಧ ಹರಿಹಾಯ್ದ ಸಚಿವರು, ಮಾಜಿ ಶಾಸಕರು ಕೇವಲ ಬಾಯಿ ಚಪಲಕ್ಕಾಗಿ ಮಾತನಾಡುತ್ತಾರೆ ಎಂದು ಕಿಡಿಕಾರಿದರು. ತಮಗೆ ತಾವೇ ಅತೀ ಬುದ್ಧಿವಂತರು ಎಂದು ಸ್ವಯಂ ಘೋಷಣೆ ಮಾಡಿಕೊಂಡಿರುವ ಇವರು, ಮೊದಲು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವುದನ್ನು ತಿಳಿದುಕೊಳ್ಳಬೇಕು. ನಮ್ಮ ಕೆಲಸವನ್ನು ನೋಡಿ ಬೇರೆಯವರು ನಮಗೆ ಸರ್ಟಿಫಿಕೇಟ್ ನೀಡಬೇಕೆ ಹೊರತು, ತಮಗೆ ತಾವೇ ಬುದ್ಧಿವಂತ ಎಂದು ಸರ್ಟಿಫಿಕೇಟ್ ಹಾಕಿಕೊಳ್ಳುವುದಲ್ಲ ಎಂದು ವ್ಯಂಗ್ಯವಾಡಿದರು.
ಅಲ್ಲದೆ, ಕಳೆದ ಚುನಾವಣೆಗೂ ಮುನ್ನ ಯಾರ ಆಡಳಿತಾವಧಿಯಲ್ಲಿ ಈ ಅಕ್ರಮಗಳು ನಡೆದಿವೆ ಎಂಬುದು ಕ್ಷೇತ್ರದ ಜನತೆಗೆ ಚೆನ್ನಾಗಿ ತಿಳಿದಿದೆ ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು.

Ramesh Babu

Journalist

Recent Posts

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

10 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

17 hours ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

20 hours ago

ಪೆನ್ ಡ್ರೈವ್…….

ಪೆನ್ ಡ್ರೈವ್....... ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ...... ಬರಗಾಲ -…

22 hours ago

ಸ್ಟಿಂಗ್ ಆಪರೇಷನ್ ಹಿಂದೆ ಜೆಡಿಎಸ್ ಕೈವಾಡ: ಸಚಿವ ಚಲುವರಾಯಸ್ವಾಮಿ ಗಂಭೀರ ಆರೋಪ

"ಕುಮಾರಸ್ವಾಮಿ ಯಾರು? Who is kumaraswmay. ಡಿ.ಕೆ. ಶಿವಕುಮಾರ್ ಸಿಎಂ ಆಗಿರುವುದನ್ನು ಒಪ್ಪದಿರುವುದಕ್ಕೆ ಅವರು ಯಾರು? ಅವರಿಗೂ ಇದಕ್ಕೂ ಏನು…

1 day ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ: ಅ.21 ರಿಂದ ಅ.23 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ-2026ರ ಸಂಬಂಧ ಅಕ್ಟೋಬರ್ 23 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ…

2 days ago