ಸಚಿವ ಕೆ.ಎಚ್. ಮುನಿಯಪ್ಪರನ್ನು ಡಿಸಿಎಂ ಮಾಡುವಂತೆ ಕೆ.ಎಚ್.ಎಂ ಅಭಿಮಾನಿ ಸಂಘದ ಅಧ್ಯಕ್ಷ ಆರ್.ವಿ‌ ಮಹೇಶ್ ಒತ್ತಾಯ 

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ  ಬದಲಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಜೊತೆಗೆ ಸಚಿವ ಸಂಪುಟ ಪುನರ್ ರಚನೆಯೂ ಆಗುವ ಕಾಲ ಬಂದಿದೆ. 7 ಬಾರಿ ಸಂಸದರು ಕೇಂದ್ರ ಸಚಿವರೂ ಆಗಿ ಅಪಾರ ಅನುಭವ ಹೊಂದಿ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹಿರಿಯ ಮತ್ಸದ್ದಿ ಕೆ.ಎಚ್. ಮುನಿಯಪ್ಪನವರ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕೆ.ಎಚ್.ಎಂ ಅಭಿಮಾನಿ ಸಂಘದ ಅಧ್ಯಕ್ಷ ಆರ್.ವಿ‌ ಮಹೇಶ್ ಅವರು ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸಿದ್ದಾರೆ.

 

ಅನುಭವಿ ಹಿರಿಯ ಕಾಂಗ್ರೆಸ್ಸಿಗರಾದ ಮುನಿಯಪ್ಪನವರಿಗೆ ಅರ್ಹತೆಗೆ ತಕ್ಕಂತ ಸಚಿವ ಸ್ಥಾನ ದೊರೆತಿರಲಿಲ್ಲ ಈಗ ಬದಲಾವಣೆ ಪರ್ವದಲ್ಲಿ ಅವರನ್ನು ಗುರ್ತಿಸಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದರು.

 

ಕೇಂದ್ರ ಸಚಿವರಾಗಿ ಅನುಭವವಿದ್ದ ಮುನಿಯಪ್ಪನವರು ರಾಜ್ಯದಲ್ಲಿ ಗ್ಯಾರಂಟೀ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯದಂತಹ ಅಕ್ಕಿ ವಿತರಣೆಯ ಆಹಾರ ನಾಗರಿಕ ಸರಬರಾಜು ಸಚಿವರಾಗಿ ಮೂರು ವರ್ಷಗಳಿಂದ ಅತ್ಯತ್ತಮ ಸೇವೆ  ಸೇವೆ ಸಲ್ಲಿಸಿದ್ದು ಈಗ ಡಿಕೆ ಶಿವಕುಮಾರ್ ರವರ ಸಂಪುಟದಲ್ಲಿ ಇವರಿಗೆ ಡಿಸಿಎಂ. ಸ್ಥಾನ ನೀಡಲೇ ಬೇಕೆಂದರು.

ಮುನಿಯಪ್ಪನವರು ನಮ್ಮ ಕ್ಷೇತ್ರಕ್ಕೆ ಬಂದ ಮೇಲೆ ಇಲ್ಲಿಂದ ಸಚಿವರಾಗಿ ಯಾರೂ ಆಗಿಲ್ಲ ಎಂಬ ಕಳಂಕ ದೂರವಾಯಿತು. ಅವರು 1968 ರಲ್ಲಿಯೇ ತಾಲೂಕು ಬೋರ್ಡ್ ಅಧ್ಯಕ್ಷರಾಗಿದ್ದವರು ಶಂಕರಾನಂದ ಬಿಟ್ಟರೆ ಮುನಿಯಪ್ಪನವರೇ 7 ಬಾರಿ ಸಂಸದರಾಗಿದ್ದವರು ಅಂತಹವರು ರಾಹುಲ್ ಗಾಂಧೀ ಸೂಚನೆಯಂತೆ ಇಲ್ಲಿ ಬದು ನಿಂತು ಸಚಿವರಾದರು ಅವರು ಕೇಳಿದ ಸ್ಥಾನ ಬೇರೆ ಕೊಟ್ಟ ಖಾತೆಯೇ ಬೇರೆ ಆದರೂ ಅವರು ಯಾವುದಕ್ಕು ಆಸೆ ಪಡದೆ ಪಕ್ಷ ನಿಷ್ಟರಾಗಿದ್ದಾರೆ. ಹಾಗಾಗಿ ಅಂತಹ ಅನುಭವಿ ರಾಜಕಾರಣಿಗೆ ಹೊಸ ಸಂಪುಟದಲ್ಲಿ ಡಿಸಿಎಂ ಸ್ಥಾನ ಮೊದಲ ಆದ್ಯತೆಯಾಗಿ ನೀಡಬೇಕೆಂದರು.

Leave a Reply

Your email address will not be published. Required fields are marked *

error: Content is protected !!