ರಸಗೊಬ್ಬರ ಮುಂಗಡ ಕಾಯ್ದಿರಿಸಿ ಖರೀದಿಸಲು ಆ್ಯಪ್‌ ಬಿಡುಗಡೆ: ಡಿ.01 ರಿಂದ ಜಾರಿ

ಕೇಂದ್ರ ಸರ್ಕಾರವು ಮೊಬೈಲ್ ಮೂಲಕ ರೈತರು ಎಲ್ಲಾ ರಸಗೊಬ್ಬರಗಳನ್ನು ಮುಂಗಡವಾಗಿ ಕಾಯ್ದಿರಿಸಿ ಖರೀದಿಸುವ ನೂತನ ” ಫರ್ಟಿಲೈಸರ್ ಸೇಲ್ ಅಪಿಕೇಶನ್ ಸಿಸ್ಟಮ್” ಎಂಬ ನೂತನ ವ್ಯವಸ್ಥೆಯ ಫ್ರೇಮ್ವರ್ಕ್ ಫಾರ್ ಫರ್ಟಿಲೈಸರ್ (ಎಫ್.ಎಫ್.ಎಸ್) ಆ್ಯಪ್‌‌ ಅನ್ನು ಅನುಷ್ಠಾನಗೊಳಿಸಿದ್ದು ಡಿಸೆಂಬರ್ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ಕರ್ನಾಟಕದ ಒಟ್ಟು 15 ಜಿಲ್ಲೆಗಳಲ್ಲಿ ಜಾರಿಯಾಗಲಿದೆ.

ರೈತರು ತಾವು ಇರುವ ಸ್ಥಳದಿಂದಲೇ ತಮಗೆ ಅಗತ್ಯವಿರುವ ಎಲ್ಲಾ ರಸಗೊಬ್ಬರಗಳನ್ನು ಎರಡು ದಿನ ಮುಂಗಡವಾಗಿ ಎಫ್ ಎಫ್ ಎಸ್ ಆ್ಯಪ್‌ನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡು ಆ ಆ್ಯಪ್‌ ಮೂಲಕ ಕಾಯ್ದಿರಿಸಬಹುದು. ಕಾಯ್ದಿರಿಸಿದ ನಂತರ ಎರಡು ದಿನಗಳೊಳಗೆ ರೈತರು ತಾವು ಆಯ್ಕೆ ಮಾಡಿದ ರಸಗೊಬ್ಬರದ ಮಳಿಗೆ ಅಥವಾ ಸೊಸೈಟಿಗೆ ಹೋಗಿ ಕ್ಯೂಆರ್ ಕೋಡ್ ಅಥವಾ ಟೋಕನ್ ನಂಬರ್ ಅನ್ನು ನೀಡಿ ರಸಗೊಬ್ಬರವನ್ನು ಖರೀದಿಸಬಹುದಾಗಿದೆ.

ಇದರಿಂದ ರೈತರ ಕೋಟದ ಗೊಬ್ಬರ ಅನ್ಯರ ಪಾಲಾಗುವ ಭಯ ಇರುವುದಿಲ್ಲ ಹಾಗೂ ರಸಗೊಬ್ಬರ ಖರೀದಿ ರೈತರ ಸ್ನೇಹ ಮತ್ತು ಸರಳ ವಿಧಾನವಾಗಿದ್ದು ರೈತರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!