Categories: ಲೇಖನ

ಸಕ್ರೀಯವಾಗಿರುವ ವೃತ್ತಿನಿರತರು……

ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು ಒಂದು ಅಂದಾಜಿನಂತೆ……..

ಸಕ್ರೀಯವಾಗಿರುವ ವೃತ್ತಿನಿರತರು……..

ಕರ್ನಾಟಕದ ಜನಸಂಖ್ಯೆಯ ಶೇಕಡಾವಾರು…..

ರಾಜಕಾರಣಿಗಳು 1%,
ಅಧಿಕಾರಿಗಳು 3%,
ನ್ಯಾಯಾಧೀಶರು
ಮತ್ತು ವಕೀಲರು .50%,
ಪತ್ರಕರ್ತರು .50%,
ಧರ್ಮಾಧಿಕಾರಿಗಳು .25%,
ವೈದ್ಯರು .15%,
ಪೋಲೀಸರು .50%,
ಶಿಕ್ಷಕರು .75%,
ತೆರಿಗೆ ಸಂಗ್ರಹಕಾರರು .15%,
ಲೆಕ್ಕಾಧಿಕಾರಿಗಳು .10%,
ಹೋರಾಟಗಾರರು .25%…..

ಬಹುಶಃ ಇನ್ನೊಂದಿಷ್ಟು ಇದಕ್ಕೆ ಸೇರಿಸಿದರು ಶೇಕಡಾ 10% ದಾಟುವುದಿಲ್ಲ.

ಇನ್ನುಳಿದ ಶೇಕಡಾ 90% ಮಕ್ಕಳು, ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ವ್ಯಾಪಾರಸ್ಥರು, ಚಾಲಕರು, ದರ್ಜಿಗಳು, ಪೂಜಾರಿಗಳು ಇತ್ಯಾದಿ ಇತ್ಯಾದಿ….

ಒಂದು ವೇಳೆ ಮೇಲಿನ ಶೇಕಡಾ 10% ಜನ ಪ್ರಾಮಾಣಿಕತೆ ಮತ್ತು ದಕ್ಷತೆಯ ಒಂದು ಪ್ರತಿಜ್ಞೆ ಸ್ವೀಕರಿಸಿದರೆ ಏನಾಗಬಹುದು. ಏಕೆಂದರೆ ಈ ಹತ್ತರಷ್ಟು ಜನ ಅಕ್ಷರಸ್ಥರು, ವಿದ್ಯಾವಂತರು ಬುದ್ದಿವಂತರು ಅಧಿಕಾರ ಹೊಂದಿರುವವರು, ಕೆಲವರನ್ನು ಹೊರತುಪಡಿಸಿ ಬಹುತೇಕರು ನಿಗದಿತ ಸರ್ಕಾರಿ ಅಥವಾ ಅರೆ ಸರ್ಕಾರಿ ಆದಾಯ ಹೊಂದಿರುವವರು, ಬಹುತೇಕ ಸಂಪನ್ಮೂಲಗಳನ್ನು ಬಳಸುತ್ತಿರುವವರು, ಸಮಾಜದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವವರು, ರಾಜ್ಯದ ಎಲ್ಲಾ ಸಮಕಾಲೀನ ಸಮಸ್ಯೆ ಮತ್ತು ಮಾಹಿತಿಯ ಅರಿವಿರುವವರು.

ಇವರುಗಳೇನಾದರೂ ಮುಂದಿನ ಕೇವಲ 3/4 ವರ್ಷಗಳಲ್ಲಿ ಕಾನೂನಿನ ಅಡಿಯಲ್ಲಿ, ನೈತಿಕತೆಯ ನೆಲೆಯಲ್ಲಿ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ನಿರ್ವಹಿಸಿದ್ದೇ ಆದರೆ ಕರ್ನಾಟಕ ರಾಜ್ಯದ ಭವಿಷ್ಯ, ಜನರ ಜೀವನಮಟ್ಟದ ಆಧಾರದಲ್ಲಿ ಹೇಗಾಗಬಹುದು ಊಹಿಸಿ.

ಅವರೇನು ಸ್ವಾತಂತ್ರ್ಯ ಹೋರಾಟಗಾರರಂತೆ ಪ್ರಾಣ ತ್ಯಾಗ ಮಾಡಬೇಕಾಗಿಲ್ಲ, ಉಪವಾಸ ಸತ್ಯಾಗ್ರಹ ಮಾಡಬೇಕಾಗಿಲ್ಲ, ಮನೆ ಮಠ ಸಂಸಾರ ತೊರೆಯಬೇಕಾಗಿಲ್ಲ. ಕೇವಲ ಸರ್ಕಾರದ ಸಂಬಳ ಮಾತ್ರ ಪಡೆಯುವುದು ಮತ್ತು ಅದಕ್ಕೆ ತಕ್ಕ ಕರ್ತವ್ಯ ನಿರ್ವಹಿಸುವುದು. ಅಷ್ಟು ಮಾತ್ರ ಮಾಡಿದರೆ ಸಾಕು. ಸರ್ಕಾರದ ಸಂಬಳ ಇಲ್ಲದವರು ಒಂದು ಮಿತಿ ಮೀರದ ಲಾಭದ ಒಳಗೆ ಕೆಲಸ ಮಾಡಿದರೆ ಸಾಕು.

ಅತಿ ಮುಖ್ಯವಾಗಿ……..

ಕರ್ನಾಟಕದಲ್ಲಿ…………

ನಮ್ಮ ರಾಜ್ಯದ ಎಲ್ಲಾ ಅಧಿಕಾರ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ನೌಕರರು ಒಂದು ವರ್ಷದ ಮಟ್ಟಿಗೆ ತಮ್ಮ ಕೆಲಸವನ್ನು ಸೇವೆ ಎಂದು ಪರಿಗಣಿಸಿ ಯಾವುದೇ ಲಂಚ ಸ್ವೀಕರಿಸದೆ ಸಹಜವಾಗಿ ಮತ್ತು ಪ್ರಾಮಾಣಿಕವಾಗಿ ತಮ್ಮ ಎಂದಿನ ಸರಳ ಕೆಲಸಗಳನ್ನು ಅಧಿಕೃತ ಸಂಬಳವನ್ನು ಪಡೆದು ಮಾಡಿದರೆ ಈ ರಾಜ್ಯದ ಈಗಿನ ಆದಾಯಕ್ಕೆ ಹೆಚ್ಚುವರಿಯಾಗಿ ಸುಮಾರು ಒಂದು ಲಕ್ಷ ಕೋಟಿಯಷ್ಟು ಸುಲಭವಾಗಿ ಏರಿಕೆಯಾಗುತ್ತದೆ.

ಇಷ್ಟೇ ಪ್ರಾಮಾಣಿಕತೆಯ ಕೆಲಸ ಇಲ್ಲಿಯವರೆಗೂ ಅವರ ಬೇಜವಾಬ್ದಾರಿ, ನಿರ್ಲಕ್ಷ್ಯ , ಸೋಮಾರಿತನದಿಂದ ಸರ್ಕಾರಕ್ಕೆ ಆಗುತ್ತಿರುವ ನಷ್ಟವನ್ನು ಉಳಿಸಿ ತಮ್ಮ ಕೆಲಸಗಳನ್ನು ಕ್ರಮಬದ್ಧಗೊಳಿಸಿದರೆ ಈ ಆದಾಯದ ಜೊತೆಗೆ ಮತ್ತೆ ಕನಿಷ್ಠ ಒಂದು ಲಕ್ಷ ಕೋಟಿಯಷ್ಟು ಉಳಿತಾಯ ರೂಪದಲ್ಲಿ ಸಿಗುತ್ತದೆ.

ಅಂದರೆ ಹೊಟ್ಟೆ ತುಂಬಿ ಸಂಸಾರ ನಡೆಸುವಷ್ಟು ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳ ಕೇವಲ ಒಂದು ವರ್ಷದ ಪ್ರಾಮಾಣಿಕ ದುಡಿಮೆ ರಾಜ್ಯದ ಈಗಿನ ಆದಾಯವನ್ನು ದ್ವಿಗುಣ ಗೊಳಿಸುತ್ತದೆ.

ಆ ಹಣವನ್ನು ರಾಜಕಾರಣಿಗಳು ಅಷ್ಟೇ ಪ್ರಾಮಾಣಿಕತೆಯಿಂದ ಉಪಯೋಗಿಸಿದರೆ ಖಂಡಿತವಾಗಿಯೂ ಜನರ ಜೀವನಮಟ್ಟ ಬಹಳಷ್ಟು ಉತ್ತಮವಾಗುತ್ತದೆ.

ಇದರಿಂದಾಗಿ,
ಆರೋಗ್ಯ, ಶಿಕ್ಷಣ, ಸ್ವಚ್ಚತೆ, ಕ್ರೀಡೆ ಸಂಗೀತ ಸಾಹಿತ್ಯ ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಕಾಣುವುದಲ್ಲದೆ ವೇಶ್ಯಾವಾಟಿಕೆ, ವಲಸೆ, ಬಾಲ ಕಾರ್ಮಿಕ ಪದ್ದತಿ,
ಅಪಘಾತ, ಅಪೌಷ್ಟಿಕತೆ, ಶಿಶು ಮರಣ, ಕಳ್ಳತನ ದರೋಡೆ ಕೊಲೆ ಮುಂತಾದುವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತದೆ.

ಕೇವಲ ಕೆಲವೇ ಲಕ್ಷಗಳ ಸಂಖ್ಯೆಯಲ್ಲಿ ಇರುವ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಸಂಕಲ್ಪ ಮಾಡಿದರೆ ಎಷ್ಟೊಂದು ಮಹತ್ವದ ಬದಲಾವಣೆ ಸಾಧ್ಯ.

ಇದರ ಪರೋಕ್ಷ ಪರಿಣಾಮ ಸಾಮಾನ್ಯ ಜನರ ಮೇಲಾಗಿ ಅವರೂ ಕೂಡ ಜಾಗೃತರಾಗುತ್ತಾರೆ. ಇಡೀ ವ್ಯವಸ್ಥೆ ಉತ್ತಮ ಗುಣಮಟ್ಟದ ಸಮಾಜವಾಗಿ ರೂಪಗೊಳ್ಳುತ್ತದೆ.

ಆ ಸೌಭಾಗ್ಯದ ದಿನಗಳನ್ನು ಕಾಣಲು ನಾವೆಲ್ಲರೂ ಮನಸ್ಸುಗಳ ಅಂತರಂಗದ ಚಳವಳಿ ರೂಪಿಸೋಣ‌.
ಇದು ತುಂಬಾ ಕಷ್ಟ ನಿಜ. ಆದರೆ ಅಸಾಧ್ಯವಲ್ಲ.

ಸೂರ್ಯನಲ್ಲಿಗೇ ಉಪಗ್ರಹ ಕಳಿಸುವ ತಯಾರಿಯಲ್ಲಿರುವಾಗ ಇದು ಯಾವ ಮಹಾ ಕಷ್ಟ ಅಲ್ಲವೇ…… ‌

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು ಗ್ರಾಮಾಂತರ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ…

16 hours ago

ಬೆಸ್ಕಾಂ ವಿರುದ್ಧ ರೈತರ ಆಕ್ರೋಶ: 10 ತಾಸು ಗುಣಮಟ್ಟದ ವಿದ್ಯುತ್‌ಗೆ ಆಗ್ರಹ: ನಷ್ಟ ಬೆಳೆ, ಮೆಣಸಿನಕಾಯಿ ಹಾಗೂ ಜಾನುವಾರುಗಳ ಸಮೇತ ಪ್ರತಿಭಟನೆ

ಕೋಲಾರ: ಬರದಿಂದ ತತ್ತರಿಸಿರುವ ರೈತರ ಬೆಳೆಗಳನ್ನು ರಕ್ಷಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 10 ತಾಸು ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಬೆಸ್ಕಾಂ…

19 hours ago

ಘಾಟಿ ತೇರಿನಬೀದಿ ಒತ್ತುವರಿ ತೆರವು; ವ್ಯಾಪಾರಸ್ಥರಲ್ಲಿ ಆತಂಕ

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ತೇರಿನಬೀದಿಯಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಂಗಡಿ ಮಳಿಗೆಗಳನ್ನು ಒತ್ತುವರಿ…

1 day ago

ಹೃದಯ ವೈಶಾಲ್ಯತೆ ಮತ್ತು ಶುದ್ಧತೆ…

" ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ " ಸ್ವಾಮಿ ವಿವೇಕಾನಂದ....... ಜೊತೆಗೆ ಹೃದಯ ಅಥವಾ ಮನಸ್ಸು…

1 day ago

ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ: ಪಿಡಿಒ ಗೌರಮ್ಮ

ಚಿಕ್ಕನಾಯಕನಹಳ್ಳಿ ಸೆ.07: ರೈತರ ಸಾರ್ಥಕ ಜೀವನಕ್ಕೆ ವಿಬಿ- ಜಿ ರಾಮ್ ಜಿ ನಾಂದಿ ಹಾಗಾಗಿ ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಕ್ಷಿ…

2 days ago

ಅರ್ಹ ರೈತರು ಸೌಲಭ್ಯಗಳನ್ನು ಪಡೆದುಕೊಳ್ಳಿ : ಪಿಡಿಒ ರಂಜಿತ

ಚಿಕ್ಕನಾಯಕನಹಳ್ಳಿ ಸೆ.08: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…

2 days ago