Categories: ಕೋಲಾರ

ವೇಮಗಲ್ ಭಾಗದಲ್ಲಿ 11.50 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಕೇಳಿದಷ್ಟು ಅನುದಾನ ತಂದು ಅಭಿವೃದ್ಧಿ ಮಾಡಕ್ಕೆ ಸಿದ್ದವಿದ್ದು ಅವಕಾಶಗಳು ಇವೆ ಯಾರೋ ಮಾತಾಡರೋಕಿ ಅಭಿವೃದ್ಧಿ ಮೂಲಕವೇ ಉತ್ತರವಾಗಲಿ ಇಲ್ಲ ಎಂದರೆ ಯಾರು ತಪ್ಪು ಮಾಡಿದ್ದಾರೆ ಅವರನ್ನು ಸೀತಿ ಬೈರೇಶ್ವರ ಸ್ವಾಮಿಯೇ ನೋಡಿಕೊಳ್ಳಲಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲೂಕಿನ ವೇಮಗಲ್ ಹೋಬಳಿಯ ಚಂಜಿಮಲೆ ಗ್ರಾಮದಿಂದ ಕಡಗಟ್ಟೂರು, ಸೀತಿಹೊಸೂರು ಮತ್ತು ಬೈರಂಡಹಳ್ಳಿವರೆಗೆ 5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ, ಬೈರಂಡಹಳ್ಳಿ ಕೆರೆ ಅಭಿವೃದ್ಧಿಗೆ 3.5, ಕಡಗಟ್ಟೂರು ಗ್ರಾಮದಿಂದ ಮಠಪುರ ಕ್ಯಾಲನೂರು ತಿಪ್ಪೇನಹಳ್ಳಿ ರಸ್ತೆ 2 ಕೋಟಿ ಎಂಎಲ್ಸಿ ಅನಿಲ್ ಕುಮಾರ್ ಅನುದಾನದಲ್ಲಿ ಸೀತಿ ಬೆಟ್ಟದಲ್ಲಿ ಸೀತಿ ದೇವಾಲಯದ ಬಳಿ ಊಟದ ವ್ಯವಸ್ಥೆಗೆ ಡೈನಿಂಗ್ ಹಾಲ್ ನಿರ್ಮಾಣಕ್ಕೆ 95 ಲಕ್ಷ, ಮಹಿಳೆಯರ ವಿಶ್ರಾಂತಿ ಕೊಠಡಿಗೆ 25 ಲಕ್ಷ ಹಾಗೂ ಮುಡಿ ಕಟ್ಟು ನಿರ್ಮಾಣಕ್ಕೆ 15 ಲಕ್ಷ ಒಟ್ಟು 11.50 ಕೋಟಿ ಮತ್ತು ಸೀತಿ ಗ್ರಾಮ ಪಂಚಾಯಿತಿ ವತಿಯಿಂದ ದೇವಾಲಯದ ಬಳಿ ನಿರ್ಮಿಸಿರುವ 23 ಅಂಗಡಿ ಮಳಿಗೆಗಳ ಉದ್ಘಾಟನಾ ಕಾರ್ಯಾಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸೀತಿ ಬೈರೇಶ್ವರ ದೇವಾಲಯ ಇತಿಹಾಸ ಪ್ರಸಿದ್ದ ವಾಗಿದ್ದು ಮೂರು ರಾಜ್ಯಗಳಿಂದ ಭಕ್ತಾದಿಗಳು ಇಲ್ಲಿಗೆ ಬರತ್ತಾರೆ ಇಂತಹ ಐತಿಹಾಸಿಕ ಸ್ಥಳವನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.

ಸೀತಿ ಗ್ರಾಮ ಪಂಚಾಯತಿಯು ಮಾದರಿ ಪಂಚಾಯತಿಗಳಲ್ಲಿ ಒಂದಾಗಿದೆ ಯಾವುದೇ ಅನುದಾನವಿಲ್ಲದೇ 23 ಅಂಗಡಿ ಮಳಿಗೆಗಳು ಕಟ್ಟಲಾಗುತ್ತಿದೆ ನನ್ನ ಅನುದಾನದಲ್ಲಿ 10 ಲಕ್ಷ ನೀಡಲಾಗುತ್ತದೆ ಮುಂದೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಎಂಎಲ್ಸಿ ನಸೀರ್ ಅಹಮದ್ ಅವರನ್ನು ಕರೆದುಕೊಂಡು ಬಂದು ಅವರ ಅನುದಾನವನ್ನು ನೀಡಲಾಗುತ್ತದೆ ವಸತಿ ನಿಲಯವನ್ನು ಮಾಡಿದರೆ ಅನುಕೂಲವಾಗುತ್ತೆ ಅಭಿವೃದ್ಧಿ ವಿಚಾರದಲ್ಲಿ ನಿಮ್ಮೊಂದಿಗೆ ಸದಾ ಇರತ್ತೇವೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಯಾರು ಕೂಡು ಸುಮ್ಮನೆ ಬಂದು ಪೂಜೆ ಮಾಡಲ್ಲ ಇಲಾಖೆಗಳಿಂದ ಟೆಂಡರ್ ಆಗಿ ಅನುಮೋದನೆ ಸಿಕ್ಕಿದ ಮೇಲೆಯೇ ಗುದ್ದಲಿ ಪೂಜೆಗೆ ಬಂದಿರೋದು ಪ್ರಶ್ನೆ ಮಾಡಲಿ ಅದನ್ನು ಬಿಟ್ಟು ದೌರ್ಜನ್ಯ ಮಾಡುವುದು ದಬ್ಬಾಳಿಕೆ ನಡೆಸಬಾರದು ಅಭಿವೃದ್ಧಿ ತೊಂದರೆ ಕೊಡಕ್ಕೆ ಅಂತ ಬಂದವರಿಗೆ ಅಭಿವೃದ್ಧಿ ಮೂಲಕವೇ ಉತ್ತರವಾಗಬೇಕು ಎಂದರು

ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಸೀತಿ ಗ್ರಾಪಂ ಅಧ್ಯಕ್ಷೆ ಕವಿತ ಮುನಿರಾಜು, ಉಪಾಧ್ಯಕ್ಷೆ ಅನಿತಾ ಶ್ರೀನಿವಾಸ್, ತಾಪಂ ಇಒ ಮಂಜುನಾಥ್ ಎಇಇ ಮಂಜುನಾಥ್, ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೀರೇಂದ್ರ ಪಾಟೀಲ್, ಅಂಕತಟ್ಟಿ ಬಾಬು, ಉರಟ ಅಗ್ರಹಾರ ಚೌಡರೆಡ್ಡಿ, ಸಕಲೇಶ್, ಕುಮಾರ್, ರಾಜಕುಮಾರ್, ಪೆರ್ಜೇನಹಳ್ಳಿ ನಾಗೇಶ್, ಬೈರಪ್ಪ, ಮುನಿರಾಜು ಮುಜರಾಯಿ ತಹಶಿಲ್ದಾರ್ ಶ್ರೀನಿವಾಸ್ ನಿರ್ಮಿತಿ ಕೇಂದ್ರದ ಅಶ್ವಿನ್ ಮುಂತಾದವರು ಇದ್ದರು

Ramesh Babu

Journalist

Recent Posts

‘ಆಸರೆ’ ಯೋಜನೆ: ಒಂಟಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಭದ್ರತೆ, ಆರೋಗ್ಯ ನೆರವು ಹಾಗೂ ಯೋಗಕ್ಷೇಮ ವಿಚಾರಣೆ

'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…

6 hours ago

ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು- ಸಿಎಂ ಸಿದ್ದರಾಮಯ್ಯ

ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದ್ದಾರೆ..…

8 hours ago

ದಲಿತರ ಕಾಲೋನಿಗಿಲ್ಲ ಚರಂಡಿ ಭಾಗ್ಯ: ರಸ್ತೆ‌ ಮೇಲೆಯೇ ಹರಿಯುವ ಚರಂಡಿ ನೀರು: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹಿಡಿ ಶಾಪ

ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ‌ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…

12 hours ago

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪ.ಪಂ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರಿಂದ ಹಲ್ಲೆ: ದೂರು ದಾಖಲು

ಸೆಲೂನ್ ನಲ್ಲಿ ಯುವಕನ‌ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ‌ಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…

13 hours ago

ಬೆಂ.ಗ್ರಾ ನೂತನ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಆಗಿ ಎ.ವಿ ಲಕ್ಷ್ಮಿನಾರಾಯಣ ನೇಮಕ

ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…

15 hours ago

ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾ ದಾಳಿ: ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆ

ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ  14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…

15 hours ago