Categories: ಲೇಖನಗಳು

ವೃತ್ತಿ ನಿರತರ ವೃತ್ತಿ ಧರ್ಮ…… ಮಾನವೀಯ ಮೌಲ್ಯಗಳ ಉಳಿವಿಗಾಗಿ ಪ್ರಯತ್ನಿಸೋಣ..

ಪತ್ರಕರ್ತರು

ಕೇವಲ ನಿರೂಪಕರಲ್ಲ-ಮನರಂಜನೆ ನೀಡುವವರಲ್ಲ-ಜನರನ್ನು ಆಕರ್ಷಿಸುವವರಲ್ಲ – ವ್ಯಾಪಾರಿಗಳಲ್ಲ – ಜನಪ್ರಿಯತೆಯ ಹಿಂದೆ ಹೋಗುವವರಲ್ಲ- ಜನರನ್ನು ಮೆಚ್ಚಿಸುವವರು ಮಾತ್ರವಲ್ಲ…….

ಜೊತೆಗೆ ಮುಖ್ಯವಾಗಿ,

ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ ಕಷ್ಟವಾದರೂ ಸತ್ಯವನ್ನು ಧೈರ್ಯವಾಗಿ ಹೇಳುವವರು.

ಪೊಲೀಸರು

ಕೇವಲ ಭಯ ಪಡಿಸುವವರಲ್ಲ – ಹೊಡೆಯುವವರಲ್ಲ – ಕೊಲ್ಲುವವರಲ್ಲ – ಬಂಧಿಸುವವರಲ್ಲ – ನಿಯಂತ್ರಿಸಿವವರಲ್ಲ-ಎಚ್ಚರಿಸುವವರಲ್ಲ – ರಕ್ಷಿಸುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ನ್ಯಾಯವನ್ನು – ಸತ್ಯವನ್ನು – ಕಾನೂನನ್ನು ಅವಶ್ಯವಿರುವ ಜನರಿಗೆ ನಿಷ್ಪಕ್ಷಪಾತವಾಗಿ ತಲುಪಿಸುವವರು.

ವಕೀಲರು

ಕೇವಲ ವೃತ್ತಿಪರರಲ್ಲ – ಹೊಟ್ಟೆ ಪಾಡಿನ ಕೆಲಸದವರಲ್ಲ – ಕಾನೂನು ಅರ್ಥೈಸುವವರಲ್ಲ – ಕಕ್ಷಿದಾರರ ಹಿತಾಸಕ್ತಿ ಕಾಪಾಡುವವರಲ್ಲ – ಚಾಣಾಕ್ಷತನದಿಂದ ವಾದ ಮಾಡುವವರು ಮಾತ್ರವಲ್ಲ….

ಜೊತೆಗೆ ಮುಖ್ಯವಾಗಿ,

ಶೋಷಿತರಿಗೆ – ಧಮನಿತರಿಗೆ – ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವವರು.

ಬರಹಗಾರರು

ಕೇವಲ ಅಕ್ಷರಗಳನ್ನು ಜೋಡಿಸುವವರಲ್ಲ – ಪದ ಲಾಲಿತ್ಯ ಹೊರಡಿಸುವವರಲ್ಲ – ವಾಕ್ಯಗಳ ಆಕರ್ಷಕ ನಿರೂಪಣೆ ಮಾಡುವವರಲ್ಲ – ಭಾವನೆಗಳನ್ನು ವ್ಯಕ್ತಪಡಿಸುವವರಲ್ಲ – ಪುಸ್ತಕ ಪ್ರಕಟಿಸುವವರಲ್ಲ – ಪ್ರಶಸ್ತಿ ಪಡೆಯುವವರಲ್ಲ – ಅಧ್ಯಕ್ಷತೆ ವಹಿಸುವವರು ಮಾತ್ರವಲ್ಲ …

ಜೊತೆಗೆ ಮುಖ್ಯವಾಗಿ,

ಸತ್ಯದ ಹುಡುಕಾಟಗಾರರು ಮತ್ತು ನಿರ್ಭಯವಾಗಿ ಅದನ್ನು ದಾಖಲಿಸುವವರು.

ವೈದ್ಯರು

ಕೇವಲ ರೋಗ ಗುಣಪಡಿಸುವವರಲ್ಲ – ವೃತ್ತಿಪರರಲ್ಲ – ಆರೋಗ್ಯದ ಮಾಹಿತಿ ನೀಡುವವರಲ್ಲ –

ಅತಿಮಾನುಷರಲ್ಲ – ಜೀವ ನೀಡುವವರು ಉಳಿಸುವವರು ಮಾತ್ರವಲ್ಲ….

ಜೊತೆಗೆ ಮುಖ್ಯವಾಗಿ,

ಜನರಲ್ಲಿ ಬದುಕಿನ ಆತ್ಮವಿಶ್ವಾಸ ಮೂಡಿಸುವವರು.

ಶಿಕ್ಷಕರು

ಕೇವಲ ಅಕ್ಷರ ಕಲಿಸುವವರಲ್ಲ – ಪಾಠ ಮಾಡುವವರಲ್ಲ – ಬುದ್ದಿವಾದ ಹೇಳುವವರಲ್ಲ – ಪದವಿ ನೀಡುವವರಲ್ಲ – ಉದ್ಯೋಗ ಕೊಡಿಸುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಬದುಕಲು ಕಲಿಸುವವರು, ಯೋಚಿಸಲು ಪ್ರೇರೇಪಿಸುವವರು.

ರಾಜಕಾರಣಿಗಳು

ಕೇವಲ ರಸ್ತೆ ಮಾಡಿಸುವವರಲ್ಲ – ವಿದ್ಯುತ್ ಹರಿಸುವವರಲ್ಲ – ಕಾನೂನು ಮಾಡುವವರಲ್ಲ – ಆಡಳಿತ ನಡೆಸುವವರಲ್ಲ -ರಕ್ಷಣೆ ಮಾಡುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಜನರ ಜೀವನಮಟ್ಟ ಸುಧಾರಿಸುವವರು.

ಧರ್ಮದ ಪೀಠಾಧಿಪತಿಗಳು

ಕೇವಲ ಭೋದನೆ ಮಾಡುವವರಲ್ಲ – ಉಪನ್ಯಾಸ ನೀಡುವವರಲ್ಲ – ಆಶ್ರಯ ಅನ್ನ ಶಿಕ್ಷಣ ನೀಡುವವರಲ್ಲ – ಧರ್ಮ ಪ್ರಚಾರಕರಲ್ಲ – ಭಕ್ತಿ ಭಾವ ಮೂಡಿಸುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಜ್ಞಾನದ ಬಲದಿಂದ ಜನರ ನೋವು ಸಂಕಷ್ಟ ಕಡಿಮೆ ಮಾಡುವವರು.

ಕಲಾವಿದರು

ಕೇವಲ ಮನರಂಜನೆ ನೀಡುವವರಲ್ಲ – ಭಾವಾತಿರೇಕಗಳನ್ನು ವ್ಯಕ್ತಪಡಿಸುವವರಲ್ಲ – ಜನರನ್ನು ಭ್ರಮಾಲೋಕಕ್ಕೆ ಒಯ್ಯುವವರಲ್ಲ – ಜನಪ್ರಿಯತೆ ಗಳಿಸುವವರಲ್ಲ – ದುಡ್ಡು ಮಾಡುವವರು ಮಾತ್ರವಲ್ಲ…..

ಜೊತೆಗೆ ಮುಖ್ಯವಾಗಿ,

ಜವಾಬ್ದಾರಿಯಿಂದ ಜನರನ್ನು ಒಳ್ಳೆಯ ನಡತೆ ಅಳವಡಿಸಿಕೊಳ್ಳಲು, ಜೀವನೋತ್ಸಾಹ ಹೆಚ್ಚಿಸಿಕೊಳ್ಳಲು ಪ್ರೇರೇಪಿಸುವವರು.

ಇನ್ನೂ ಮುಂತಾದ ಸೇವಾ ವಲಯಗಳಲ್ಲಿ ಈ ರೀತಿಯ ಮೌಲ್ಯಗಳು ಪುನರ್ ಸ್ಥಾಪನೆಯಾಗಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆ ಈಗ ತುರ್ತಾಗಿ ಆಗಬೇಕಿದೆ.

ಇದನ್ನು ಹೊರತುಪಡಿಸಿ ಬೆವರು ಸುರಿಸುವ ರಕ್ತ ಬಸಿಯುವ ಅನೇಕ ಶ್ರಮಜೀವಿಗಳು ನಮ್ಮ ನಡುವೆ ಇದ್ದಾರೆ. ಆದರೆ ಅವರಲ್ಲಿ ಬಹುತೇಕರಿಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲ. ಹೊಟ್ಟೆ ಪಾಡಿನ ಕೌಟುಂಬಿಕ ನಿರ್ವಹಣೆಯ ಮೂಲಭೂತ ಅವಶ್ಯಕತೆಗಳಿಗೇ ಕೊರತೆ ಇರುವಾಗ ಸದ್ಯದ ಪರಿಸ್ಥಿತಿಯಲ್ಲಿ ಅವರಲ್ಲಿ ಆದರ್ಶಗಳನ್ನು ಹುಡುಕುವುದು ತುಂಬಾ ಕಷ್ಟ.

ಸಾಮಾನ್ಯರಾದ ನಾವು ಮಾನವೀಯ ಮೌಲ್ಯಗಳ ಉಳಿವಿಗಾಗಿ ಸಾಧ್ಯವಾದಷ್ಟು ಈಗಿನಿಂದಲೇ ಪ್ರಯತ್ನಿಸೋಣ.

ಇದು ಸಾಧ್ಯವಿಲ್ಲ. ಈ ಸಮಾಜ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದೆ ಎಂಬ ಸಿನಿಕತನ ಬೇಡ. ಒಳ್ಳೆಯದಾಗಲಿ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮಾತುಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

12 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

15 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

23 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

24 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

2 days ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

2 days ago