ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪೌರಸೇವಾ ನೌಕರರ ಮುಷ್ಕರ ಆರಂಭ: ಸ್ವಚ್ಛತೆ ಸೇರಿ ಹಲವು ಕೆಲಸ ಸ್ಥಗಿತ: ಜೂನ್ 2ರಿಂದ ನೀರು ಪೂರೈಕೆಯೂ ಸ್ಟಾಪ್

ದೊಡ್ಡಬಳ್ಳಾಪುರ: ಪೌರಸೇವಾ ನೌಕರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಕರೆ ನೀಡಿರುವ ಅನಿರ್ಧಿಷ್ಟಾವಧಿ ಮುಷ್ಕರ ಬೆಂಬಲಿಸಿ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಮುಂದೆ ಶುಕ್ರವಾರ ಪೌರಾಸೇವಾ ನೌಕರರು ಮುಷ್ಕರ ಆರಂಭಿಸಿದ್ದಾರೆ.

ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಹಲವಾರು ಬೇಡಿಕೆಗಳು ದಶಕಗಳಿಂದ ಬಾಕಿ ಉಳಿದಿವೆ. ಹಲವು ಬಾರಿ ಮನವಿ ಮಾಡಿದರೂ ಬೇಡಿಕೆಗಳನ್ನು ಈವರೆಗೂ ಈಡೇರಿಸಿಲ್ಲ. ಹೀಗಾಗಿ ಮುಷ್ಕರ ಆರಂಭಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಶಾಖೆಗಳಲ್ಲಿನ ಕಾರ್ಯಗಳನ್ನು ಸ್ಥಗಿತಗೊಳಿಸಲು ಹಾಗೂ ನಗರದ ಸ್ವಚ್ಛತ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವದಿ ಮುಷ್ಕರ ಪ್ರಾರಂಭಿಸಲಾಗುತ್ತಿದೆ. ಜೂನ್ 2 ರಿಂದ ನೀರು ಸರಬರಾಜು ಸಹ ಸ್ಥಗಿತಗೊಳಿಸಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಪಿ.ಪಾಂಡುಸಿಂಧೆ ತಿಳಿಸಿದರು.

ಬೇಡಿಕೆಗಳು: ರಾಜ್ಯ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೊಂದು ಸವಲತ್ತುಗಳನ್ನು ಪೌರಸೇವಾ ನೌಕರರಿಗೆ ಪ್ರತ್ಯೇಕ ಆದೇಶವಿಲ್ಲದೇ ವಿಸ್ತರಿಸಬೇಕು. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ, ಕ್ಷೇಮಾಭಿವೃದ್ಧಿ ಅಧಿನಿಯಮದಡಿ ಇರುವ ನೌಕರರನ್ನು ಸಕ್ರಮಗೊಳಿಸಬೇಕು. ನಗರಸಭೆಗಳಲ್ಲಿ ಶೇ 100 ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿದಡಿ ನೇಮಕಾತಿ ಮಾಡಬೇಕು.

2022ನೇ ಸಾಲಿನ ವಿಶೇಷ ನೇಮಕಾತಿಯಡಿ ಆಯ್ಕೆಯಾದ ಪೌರಕಾರ್ಮಿಕರು, ರೋಡರ್ಸ್‌ಗಳಿಗೆ ಎಸ್‌ಎಫ್‌ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು. ನಗರ ಸ್ಥಳೀಯ ನೌಕರರಿಗೆ ಜ್ಯೋತಿ ಸಂಜೀವಿನಿ, ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಬೇಕು. ಐಟಿ ಸಿಬ್ಬಂದಿ, ಅಕೌಂಟ್ ಕನ್ಸಲ್‌ಟೆಂಟ್, ಕಂಪ್ಯೂಟರ್ ಆಪರೇಟ‌ರ್, ವಾಹನ 250, ಸ್ಯಾನಿಟರಿ ಸೂಪರ್ ವೈಜರ್ ಹಾಗೂ ಇತರೆ ವೃಂದದ ನೌಕರರನ್ನು ಪೌರಸೇವಾ ನೌಕರರೆಂದು ಪರಿಗಣಿಸಿ ವಿಲೀನಗೊಳಿಸಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ ಎಂದರು.

ಪೌರ ಕಾರ್ಮಿಕರ ಸಂಘದ ಶಾಖಾ ಖಜಾಂಚಿ ವೆಂಕಟೇಶ್ ಬಾಬು, ಶಾಖಾ ಕಾರ್ಯದರ್ಶಿ ಜೆ.ಸಿ.ಪಿ.ಮಂಜು ಇದ್ದರು.

Ramesh Babu

Journalist

Recent Posts

ಘಾಟಿ ಸುಬ್ರಹ್ಮಣ್ಯ‌ ದೇವಾಲಯ ಹುಂಡಿ ಎಣಿಕೆ: 77.58 ಲಕ್ಷ ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು. ಎಣಿಕೆಯಲ್ಲಿ…

44 seconds ago

ಲಗೇಜ್ ಟ್ರಾಲಿಯಲ್ಲಿ ಚಿನ್ನ ಸಾಗಾಟ: ಇಬ್ಬರ ಬಂಧನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಟ್ರಾಲಿಯಲ್ಲಿ ಚಿನ್ನದ ಬಿಸ್ಕೆಟ್‌ಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಪ್ರಯಾಣಿಕರನ್ನು ಡೈರೆಕ್ಟರೇಟ್…

36 minutes ago

ಆಧುನಿಕ ತಂತ್ರಜ್ಞಾನ–ಸಾವಯವ ಕೃಷಿಯಿಂದ ಮಾದರಿಯಾದ ನೆಲಮಂಗಲದ ರೈತ ಮಹಿಳೆ

ನೆಲಮಂಗಲ: ಕಡಿಮೆ ಶಿಕ್ಷಣದ ನಡುವೆಯೂ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಿರುವ ನೆಲಮಂಗಲ ತಾಲೂಕಿನ…

1 hour ago

ನೊಬೆಲ್ ಪ್ರಶಸ್ತಿ ಮತ್ತೆ ಮನಸ್ಸು ಮತ್ತು ಸಮಾಜ ಪುನ:ಶ್ಚೇತನಗೊಳ್ಳುವಂತೆ ಮಾಡಲಿ

ನೊಬೆಲ್ ಪ್ರಶಸ್ತಿ ಘೋಷಣೆಯ ವಾರ....... ಈ ವಾರ ಪ್ರಕಟವಾಗುತ್ತಿರುವ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ..........…

5 hours ago