Categories: ಕೋಲಾರ

ವಿದ್ಯಾರ್ಥಿಗಳು ತಂದೆ-ತಾಯಿ, ಗುರುಗಳ ಮಾರ್ಗದರ್ಶನದಲ್ಲಿ ಯಶಸ್ಸು ಕಾಣಬೇಕು: ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ವಿದ್ಯಾರ್ಥಿಗಳು ತಂದೆ-ತಾಯಿಯರನ್ನು ಮತ್ತು ವಿದ್ಯೆ ಬುದ್ದಿ ಕಲಿಸಿದ ಗುರುಗಳ ಮಾರ್ಗದರ್ಶನದಲ್ಲಿ ನಡೆದರೆ ಮಾತ್ರವೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ತಿಳಿಸಿದರು

ನಗರದ ಹೊರವಲಯದ ಸಮೈಖ್ಯ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ
ಮಾತನಾಡಿದ ಅವರು, ಜೀವನದಲ್ಲಿ ಪ್ರತಿಯೊಬ್ಬರಿಗೂ ವಿದ್ಯೆ ಮತ್ತು ಉದ್ಯೋಗ ಎಂಬುದು ಬಹುಮುಖ್ಯವಾಗಿದೆ, ಅದನ್ನು ಪಡೆಯಲು ಸತತ ಪ್ರಯತ್ನ ಹಾಗೂ ಕಷ್ಟಪಟ್ಟಾಗ ಮಾತ್ರವೇ ಪಡೆಯಲು ಸಾಧ್ಯ ಅದನ್ನು ಪಡೆಯಲು ಓದಿನ ಪ್ರಾರಂಭದಲ್ಲಿಯೇ ಗುರಿ ಇಟ್ಟುಕೊಂಡು ಸಾಧಿಸಲು ಮುಂದಾಗಬೇಕು ಅನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಲೋಚನೆಗಳು ಗುರಿ ಸಾಧನೆ ಕಡೆ ಇರಬೇಕು ಎಂದರು.

ವಿದ್ಯಾರ್ಥಿಗಳಾದವರು ಓದಿನಲ್ಲಿ ಯಾವಾಗಲೂ ಮುಂದೆ ಇರಬೇಕು. ನಮ್ಮಲ್ಲಿನ ಆತ್ಮಸ್ಥೆರ್ಯ ಹಾಗೂ ಛಲದಿಂದ ಪ್ರತಿಯೊಂದು ವಿಷಯದಲ್ಲಿ ಅಧ್ಯಯನ ಮಾಡಬೇಕು. ನೀವು ಮನಸ್ಸು ಮಾಡಿದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು ಎಂಬುದನ್ನು ತನ್ನಲ್ಲಿಯೇ ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಅನೇಕ ಸಾಹಿತಿಗಳು ಸೇರಿದಂತೆ ಐಎಎಸ್, ಐಪಿಎಸ್ ಅಧಿಕಾರಿಗಳು ಸ್ಪೂರ್ತಿದಾಯಕವಾಗಬೇಕು. ಪೋಷಕರು ಮತ್ತು ಗುರುಗಳು ವಿಧ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಧೈರ್ಯ, ಶೌರ್ಯ, ಸಾಹಸ ಗುಣಗಳನ್ನು ಬೆಳೆಸುವಲ್ಲಿ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದು ಹಂತದಲ್ಲೂ ಗುರಿ ಇಟ್ಟುಕೊಂಡು ಬಂದರೆ ಮಾತ್ರವೇ ಉತ್ತಮ ತೀರ್ಮಾನಗಳನ್ನು ತೆಗೆದುಕೊಂಡು ಉತ್ತಮ ಪ್ರಜೆಗಳಾಗಲು ಸಾಧ್ಯ ತಂದೆ ತಾಯಿಗಳು ನಿಮ್ಮಗಳ ಮಧ್ಯೆ ಕನಸು ಕಾಣುತ್ತಾ ಇದ್ದು ಕನಸು ನನಸು ಮಾಡಲು ನೀವುಗಳು ಶ್ರಮಿಸಬೇಕು ವಿದ್ಯೆ, ಕ್ರೀಡೆ, ಸಾಹಿತ್ಯ, ಕಲೆ ಇದು ಒಬ್ಬರ ಸ್ವತ್ತು ಅಲ್ಲ ಎಲ್ಲರಿಗೂ ಸಿಗುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕು ಸಮಯ ಸಿಕ್ಕಾಗ ಯಾವುದು ಮಾಡಬೇಕು ಎಂಬುದನ್ನು ತಿಳಿದು ಸಾಧನೆ ಮಾಡಿ ಸಾಧಕರಾಗಬೇಕು ಎಂದರು.

ವಿದ್ಯಾರ್ಥಿಗಳ ಜೀವನವೇ ದೇಶದ ಭವಿಷ್ಯವನ್ನು ಸೂಚಿಸುತ್ತದೆ ಎಚ್ಚರಿಕೆಯಿಂದ ದೇಶದ ಮತ್ತು ತಮ್ಮ ಭವಿಷ್ಯವನ್ನು ರೂಪಿಸಬೇಕಾಗಿದೆ ಪ್ರತಿಯೊಂದು ಕ್ಷೇತ್ರದಲ್ಲಿ ಅವಕಾಶಗಳು ಇವೆ ಸಮಾಜ ಕಟ್ಟುವ ಪ್ರಮುಖ ಪಾತ್ರವನ್ನು ವಹಿಸಬೇಕು ಜಿಲ್ಲೆಯ ರಾಜ್ಯದ ಕೀರ್ತಿ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹಾರೈಸಿದರು

ಈ ಸಂದರ್ಭದಲ್ಲಿ ಸಮೈಖ್ಯ ಕಾಲೇಜಿನ ಅಧ್ಯಕ್ಷ ರಮೇಶ್, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರಸಭೆ ಸದಸ್ಯ ಶಫಿ ಅಫ್ಸರ್, ವಿಜಯನಗರ ಮಂಜುನಾಥ್, ಕಾಲೇಜಿನ ಕಾರ್ಯದರ್ಶಿ ಸುಬ್ರಮಣಿ, ಹರಿನಾಥ್ ರಾವ್, ಸುಜಯ್ ಗೌಡ, ಶ್ರೀನಿವಾಸ್, ಮುಂತಾದವರು ಇದ್ದರು.

Ramesh Babu

Journalist

Recent Posts

ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ

ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಜೈಲಿನ ಜೈಲರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.. ಕೈದಿಗೆ ಸರ್ಕಾರದಿಂದ ಬಂದ ಹಣ ನೀಡಲು 60 ಸಾವಿರ…

1 hour ago

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

18 hours ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

19 hours ago

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

1 day ago

ಚಿಂತಕರು ಸ್ವಾಮಿ ನಾವು ಚಿಂತಕರು….

ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…

1 day ago

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

2 days ago