ವಿಜೃಂಭಣೆಯಿಂದ ಜರುಗಿದ ಸುಮಾರು 600 ವರ್ಷಗಳ ಇತಿಹಾಸವಿರುವ ರಂಗನಾಥಸ್ವಾಮಿ ಕೋಲು ಬೇಟೆ ಜಾತ್ರಾ ಮಹೋತ್ಸವ


ಹುಲಿಕುಂಟೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀವರಪ್ರದ ಬೇಟೆ ರಂಗನಾಥಸ್ವಾಮಿ ಕೋಲು ಬೇಟೆ ಜಾತ್ರಾ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಹುಲಿಕುಂಟೆ ಗ್ರಾಮದ ಬೇಟೆ ಕೊಡುವ ಕದಿರು ಆಲದ ಮರದ ದಿನ್ನೆಯವರೆಗೆ ಸಾಗಿದ ರಂಗನಾಥಸ್ವಾಮಿ ಉತ್ಸವದಲ್ಲಿ ರಾಜ್ಯದ ವಿವಿಧಡೆಗಳಿಂದ ಆಗಮಿಸಿದ್ದ ಸಹಸ್ರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು. ಪೇಟಧಾರಿ ಬೇಟೆ ರಂಗನಾಥಸ್ವಾಮಿಯನ್ನು ಹೂವುಗಳಿಂದ ಸಿಂಗರಿಸಲಾಗಿತ್ತು.

ಹುಲಿಕುಂಟೆ, ಮಾವಿನಕುಂಟೆ, ಸೀತಕಲ್ಲು, ಚಿಕ್ಕಬೆಳವಂಗಲ ಮತ್ತಿತರೆ ಗ್ರಾಮಗಳಿಂದ ಕೋಲು, ಕುಡುಗೋಲು, ಭರ್ಜಿಗಳನ್ನು ಹಿಡಿದುಕೊಂಡು ತಂಡೋಪ ತಂಡವಾಗಿ ಆಗಮಿಸಿ ಕೋಲು ಬೇಟೆ ಸಂಪ್ರದಾಯವನ್ನು ಸಾಂಕೇತಿಕವಾಗಿ ಆಚರಿಸಿದರು.

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಯಲ್ಲಿ ಕೋಲುಬೇಟೆ, ವಿವಿಧ ರೀತಿಯ ತಿಂಡಿ ತಿನಿಸುಗಳ ಅಂಗಡಿಗಳು ಗಮನ ಸೆಳೆದವು.

ಸುಮಾರು 600 ವರ್ಷಗಳ ಇತಿಹಾಸವಿರುವ ಚೋಳರ ಕಾಲದ ಇತಿಹಾಸ ಹೊಂದಿರುವ ಹುಲಿಕುಂಟೆ ಕೋಲುಬೇಟೆ ಕಾರಣಕ್ಕೆ ಮಹತ್ವದ್ದೆನಿಸಿದೆ.

ಮಾಗಡಿ ತಾಲ್ಲೂಕಿನ ಜನತೆಯ ಆರಾಧ್ಯ ದೈವವಾದ ಮಾಗಡಿ ರಂಗನಾಥ, ದೊಡ್ಡಬಳ್ಳಾಪುರ ತಾಲ್ಲೂಕಿನ ಹಣಬೆ ಗ್ರಾಮದ ಸುತ್ತಲಿನ ಜನರು ಪೂಜಿಸುವ ಹಣಬೆ ರಂಗನಾಥ ಮತ್ತು ಹುಲಿಕುಂಟೆ ಸುತ್ತಲಿನ ಜನತೆಯ ಆರಾದ್ಯ ದೈವ ಹುಲಿಕುಂಟೆ ಬೇಟೆ ರಂಗನಾಥ ಈ ಮೂರು ಐತಿಹಾಸಿಕ ವ್ಯಕ್ತಿಗಳ ಶಕ್ತಿ ಸಂಚಯನದ ಸಾಕಾರ ರೂಪವೇ ಹುಲಿಕುಂಟೆ ಬೇಟೆ ರಂಗನಾಥ.

ಮೂರೂ ಜನ ವ್ಯಕ್ತಿಗಳು ಸೇರಿ ತಮ್ಮ ಶಕ್ತಿಯನ್ನು ಕ್ರೋಢೀಕರಿಸಿ ಹುಲಿಕುಂಟೆಯಲ್ಲಿ ‘ಬೇಟೆ ರಂಗನಾಥಸ್ವಾಮಿ’ ಹೆಸರಿನ ಗುಡಿಯೊಂದನ್ನು ಕಟ್ಟಿ ವಿಗ್ರಹವೊಂದನ್ನು ಸ್ಥಾಪಿಸಿ ಯುದ್ಧವೊಂದಕ್ಕೆ ಸಿದ್ಧರಾಗುತ್ತಾರೆ.

ರಂಗನಾಥಸ್ವಾಮಿಯೇ ಬೇಟೆಯ ನಾಯಕ ಎಂದು ಈ ಆಚರಣೆಯನ್ನು ಸಾಂಕೇತಿಕವಾಗಿ ಈಗಲೂ ನಡೆಸುತ್ತ ಬರಲಾಗುತ್ತಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ರಂಗನಾಥಸ್ವಾಮಿಗೆ ಮೊದಲ ಬಲಿ ಸಿಗುತ್ತದೆ. ಆ ಮೊದಲ ಬಲಿ ಸಿಕ್ಕ ಜಾಗದಲ್ಲಿ ಒಂದು ಮಂಟಪ ಕಟ್ಟಿ ಸ್ವಾಮಿಯನ್ನು ಶಾಂತಗೊಳಿಸಲಾಗುತ್ತದೆ.

ಈಗಲೂ ಅದೇ ಜಾಗದಲ್ಲಿ ಬೇಟೆ ಮುಗಿಸಿಕೊಂಡು ಬಂದ ಬೇಟೆ ರಂಗನಾಥಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಕುರಿತ ಆಚರಣೆಗೆ ‘ಕೋಲು ಬೇಟೆ’ ಎಂದೇ ಕರೆಯಲಾಗುತ್ತದೆ. ಪ್ರತಿ ವರ್ಷದ ಶೂನ್ಯ ಮಾಸದ ಕಡೆಯ ಗುರುವಾರ ಈ ಆಚರಣೆ ನಡೆಯುತ್ತದೆ. ಬೆಳೆಗಳ ಕೊಯ್ಲು ಮುಗಿದು ದಾನ್ಯ ಮನೆಗೆ ಬರುವ ಕಾಲವಾದ್ದರಿಂದ ದಾನ್ಯಗಳನ್ನು ಹೊಲಗಳಲ್ಲಿಯೇ ಕೂಡಿಡುವ ಪರಿಪಾಟವಿದ್ದುದರಿಂದ ಸುತ್ತಲಿನ ಪ್ರದೇಶದ ಪ್ರಾಣಿಗಳನ್ನು ನಿಯಂತ್ರಿಸುವ ಕಾರಣಕ್ಕೆ ಸುತ್ತಲಿನ ಜನ ಬೇಟೆಯಾಡಿ ಪ್ರಾಣಿಗಳನ್ನು ನಿಯಂತ್ರಿಸುವ ಪದ್ಧತಿ ಬೆಳೆದು ಬಂದಿರಬಹುದು ಎನ್ನಲಾಗಿದೆ.

ಹಳ್ಳಿಗಳ ಜನ ಸುತ್ತಲಿನ ಕಾಡುಗಳನ್ನು ತಿರುಗಿ,ಕೋಲು ಹಿಡಿದುಕೊಂಡು ಈ ಸ್ಥಳಕ್ಕೆ ಬಂದು ಸೇರಿ ಸಾಂಪ್ರದಾಯಿಕ ಕೋಲು ಬೇಟೆ ಆಚರಣೆಯನ್ನು ಮಾಡಲಾಗುತ್ತದೆ.

Ramesh Babu

Journalist

Recent Posts

ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜಿನಲ್ಲಿ ಯಾವ ಲೋಪಗಳು ಉಂಟಾಗದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವ ಸಲುವಾಗಿ ರಾಜ್ಯದ ಎಲ್ಲ…

49 minutes ago

14 ರಿಂದ 15 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ತಪ್ಪದೇ ಎಚ್.ಪಿ.ವಿ ಲಸಿಕೆ ಹಾಕಿಸಿ- ಡಿಸಿ ಅನುರಾಧ

ಗರ್ಭಕಂಠ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಲಸಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು 14 ರಿಂದ 15 ವರ್ಷದೊಳಗಿನ…

1 hour ago

ಕೃಷಿ ಹೊಂಡದಲ್ಲಿ ಈಜಲು ಹೋಗಿ 34 ವರ್ಷದ ವ್ಯಕ್ತಿ ಸಾವು

ಕೃಷಿ ಹೊಂಡದಲ್ಲಿ ಈಜಲು ಹೋಗಿ 34ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಲಿಂಗಾಪುರ ಗ್ರಾಮದಲ್ಲಿ ಇಂದು…

1 hour ago

ನಾಳೆ (ಏ.9ಕ್ಕೆ) ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟ

ಮಾ.9ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ 2026ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ…

5 hours ago

ಕರ್ನಾಟಕ ವಿರೋಧಿ ‘ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯ ಬಿಟ್ಟು ತೊಲಗಲಿ’- ಕರ್ನಾಟಕ ರಕ್ಷಣಾ ವೇದಿಕೆ‌ ಜಿಲ್ಲಾಧ್ಯಕ್ಷ ಪುರುಷೋತ್ತಮಗೌಡ ಆಗ್ರಹ

ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ…

7 hours ago

ಮಾನಸಿಕ ಗುಣಮಟ್ಟ ಪರೀಕ್ಷಿಸಿಕೊಳ್ಳುವ ಆತ್ಮಾವಲೋಕನ ನಡೆಯಲಿ…

ಭಾವ ಬಯಲಿನ‌ ಅಕ್ಕ......... ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು…

12 hours ago