Categories: ಲೇಖನ

ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ….

ಈ ವಿಷಯ ಸ್ವಲ್ಪ ವಿಚಿತ್ರವಾದರು ಇದರಲ್ಲಿರುವ ವಾಸ್ತವ ಮತ್ತು ಸತ್ಯದ ಹುಡುಕಾಟ ನಡೆಸಬೇಕಾಗಿದೆ……

ಚುನಾವಣೆಗಳಲ್ಲಿ ಮತ ಹಾಕಲು ಹಣ ಪಡೆಯುವವರಿಗೆ ಬೇಡ ಎಂದು ಹೇಳುವುದಕ್ಕಿಂತ ಅತಿ ಹೆಚ್ಚಿನ ಮಹತ್ವ ಹಣ ನೀಡುವ ಖದೀಮರಿಗೆ ಕಠಿಣ ಶಿಕ್ಷೆ ನೀಡಲು ಅಥವಾ ಅವರ ಮನಃಪರಿವರ್ತನೆಗೆ ನೀಡಬೇಕು……

ಲಂಚ ನೀಡುವ ಸಾಮಾನ್ಯ ಜನರಿಗೆ ನೀಡಬೇಡಿ ಎಂದು ಹೇಳುವುದಕ್ಕಿಂತ ಅದನ್ನು ಪಡೆಯುವ ಭ್ರಷ್ಟರಿಗೆ ಬಹಿಷ್ಕಾರ ಹಾಕಬೇಕು…….

ಕೆಟ್ಟ ಕಾರ್ಯಕ್ರಮ ನೋಡಬೇಡಿ ಎಂದು ವೀಕ್ಷಕರಿಗೆ ಹೇಳುವುದಕ್ಕಿಂತ ಆ ರೀತಿಯ ಕೆಟ್ಟ ಕಾರ್ಯಕ್ರಮ ರೂಪಿಸಿ ಪ್ರಸಾರ ಮಾಡುವ ಚಾನಲ್ ಗಳಿಗೆ ಎಚ್ಚರಿಕೆ ಕೊಟ್ಟು ದಂಡ ವಿಧಿಸಬೇಕು……

ಮೌಡ್ಯವನ್ನು ನಂಬಿ ಜ್ಯೋತಿಷಿಗಳ ಮಾತು ಕೇಳುವ ಜನರಿಗೆ ಬುದ್ಧಿ ಹೇಳುವುದಕ್ಕಿಂತ ಜ್ಯೋತಿಷಿಗಳಲ್ಲೇ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಯತ್ನಿಸಬೇಕು ಅಥವಾ ಅವರನ್ನು ಹೊರಹಾಕಬೇಕು……

ಕಲಬೆರಕೆ, ಮೋಸ, ವಂಚನೆಗೆ ಒಳಗಾಗುವ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಿಂತ ಅದನ್ನು ಮಾಡುವ ದುರುಳರನ್ನು ನಿಯಂತ್ರಿಸಲು ಆಸಕ್ತಿ ವಹಿಸಬೇಕು…….

ಏಕೆಂದರೆ ನಮ್ಮ ದೇಶದ ಜನಸಂಖ್ಯೆ 141 ಕೋಟಿಗೂ ಹೆಚ್ಚು. ಇಷ್ಟೊಂದು ಬೃಹತ್ ಮತ್ತು ವೈವಿಧ್ಯಮಯ ಜನರಿಗೆ ಸತ್ಯದ ನೆಲೆಯಲ್ಲಿ ವಾಸ್ತವಾಂಶ ತಿಳಿಸಿ ಬದಲಾಯಿಸುವುದು ಎಂತಹ ಮಹಾತ್ಮನಿಗೂ ಸಾಧ್ಯವಿಲ್ಲ. ಅದಕ್ಕೆ ಬದಲು ಹಣ ಹಂಚುವ, ಲಂಚ ಪಡೆಯುವ, ಮೌಡ್ಯ ಬಿತ್ತುವ, ಕೆಟ್ಟ ಕಾರ್ಯಕ್ರಮ ರೂಪಿಸುವ, ಕಲಬೆರಕೆ ಮಾಡುವ ಜನರ ಸಂಖ್ಯೆ ಕಡಿಮೆ ಇದೆ. ಅವರನ್ನೇ ಗುರಿಯಾಗಿಸಿ ದಕ್ಷ ಕಾರ್ಯಪಡೆ ರಚಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಅವರ ನಾಗರಿಕ ಹಕ್ಕುಗಳನ್ನು ಕಿತ್ತುಕೊಂಡು ಬಯಲು ಜೈಲುಗಳನ್ನು ನಿರ್ಮಿಸಿ ಅಲ್ಲಿ ಅವರನ್ನು ಹಾಕಿ ಅಲ್ಲಿಂದಲೇ ಅವರಿಂದ ದುಡಿಸಿಕೊಂಡು ಅವರ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸಬೇಕು…….

ಅದುಬಿಟ್ಟು ಜನ ಸರಿಯಿಲ್ಲ ಎಂಬುದನ್ನೇ ನೆಪವಾಗಿಟ್ಟುಕೊಂಡು ತಮ್ಮ ಅನೈತಿಕ ದಂಧೆಗಳನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬಾರದು. ಇಷ್ಟೊಂದು ದೊಡ್ಡ ಗಾತ್ರದ, ಅಭಿವ್ಯಕ್ತಿ ಸ್ವಾತಂತ್ರ್ಯವಿರುವ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನ ಮನಸ್ಸುಗಳ ಒಗ್ಗಟ್ಟು ಪ್ರದರ್ಶಿಸುವುದು ಸಾಧ್ಯವಿಲ್ಲದ ಮಾತು……

ಸಂಪೂರ್ಣ ಅಧಿಕಾರ ಹೊಂದಿದ ಒಂದು ಒಳ್ಳೆಯ ಸರ್ಕಾರ ಇದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಮ್ಮೆಲ್ಲರ ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ ಅಂತರಂಗದ ಚಳವಳಿ ರೂಪಿಸಿಕೊಂಡು ಕ್ರಾಂತಿಕಾರಕ ಬದಲಾವಣೆಯ ಮುಖಾಂತರ ಅತ್ಯುತ್ತಮ ಸರ್ಕಾರ ರಚಿಸಿದರೆ ಇದು ಸುಲಭವಾಗುತ್ತದೆ. ನಮ್ಮ ಗಮನ ಆ ಕಡೆಯೇ ಹೆಚ್ಚು ಕೇಂದ್ರೀಕರಿಸಬೇಕಿದೆ. ಸಣ್ಣ ಪುಟ್ಟ ಬದಲಾವಣೆಗಳಿಂದ ವ್ಯವಸ್ಥೆಯ ಬದಲಾವಣೆ ಸಾಧ್ಯವಿಲ್ಲ. ಅದಕ್ಕಾಗಿ ನಿಮ್ಮೊಂದಿಗೆ ……………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ದ್ವಿಚಕ್ರ ವಾಹನ ಹಾಗೂ ಪಂಪ್ ಸೆಟ್ ಗೆ ಅಳವಡಿಸಿದ್ದ ಮೋಟಾರ್ ಗಳ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ರಾಮನಗರ ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳ ರೈತರ ಜಮೀನಿನಲ್ಲಿ ಪಂಪ್ ಸೆಟ್ ಗಳಿಗೆ ಅಳವಡಿಸಿದ್ದ…

9 hours ago

ಬಿಸಿಲಿನ ಬೇಗೆ: ಬಾಯಾರಿದ ಕೋತಿ ನೀರಿಗಾಗಿ ಪರದಾಟ: ವಾಟರ್ ಬಾಟಲ್ ನೀರು ಕುಡಿಯಲು ಹರಸಾಹಸ

ಬಿರುಬಿಸಿಲಿಗೆ ಬಾಯಾರಿಕೆಯಿಂದ ಕೋತಿಯೊಂದು ನೀರಿಗಾಗಿ ವಾಟರ್ ಬಾಟಲ್ ಹಿಡಿದು ಒಂದೊಂದು ಹನಿಗೂ ಪರದಾಡಿದ ದೃಶ್ಯ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ…

10 hours ago

ಪಾಲನಜೋಗಿಹಳ್ಳಿ ಬಳಿ ಅಪಘಾತ: ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು…

15 hours ago

ಚಿಂತಕರು ಸ್ವಾಮಿ ನಾವು ಚಿಂತಕರು….

ಚಿಂತನೆ ಮತ್ತು ಚಿಂತಕರು....... " ಹೃದಯಾಂತರಾಳದಿಂದ ಬರುವ ಮಾತುಗಳು ಹೃದಯವನ್ನು ‌ತಾಕುತ್ತವೆ " ರೂಮಿ........... ಕೃತಕತೆ ಮತ್ತು ಸಹಜತೆಯ ನಡುವಿನ…

16 hours ago

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರಾಗಿ ನರಸಿಂಹ ಮೂರ್ತಿ ನೇಮಕ

ದೊಡ್ಡಬಳ್ಳಾಪುರ ಕಾಂಗ್ರೆಸ್ ಕಾರ್ಮಿಕ ಘಟಕದ ನೂತನ ಅಧ್ಯಕ್ಷರನ್ನಾಗಿ ನರಸಿಂಹ ಮೂರ್ತಿ ಅವರನ್ನು ಅಧಿಕೃತವಾಗಿ ನೇಮಕ ಮಾಡಿದ್ದೇವೆ. ಅವರು ಪಕ್ಷಕ್ಕಾಗಿ ಹಗಲಿರುಳು…

1 day ago

ಪ್ರತಿಯೊಬ್ಬ ಭಾರತೀಯನ ತಲೆ ಮೇಲೆ ರೂ. 4.8 ಲಕ್ಷದಷ್ಟು ಸಾಲದ ಹೊರೆ ಇದೆ- ಸಿಎಂ‌ ಸಿದ್ದರಾಮಯ್ಯ

ಕನ್ನಡಿಗರು ತಮ್ಮ ಬೆವರ ಗಳಿಕೆಯಿಂದ ನೀಡುವ ಒಂದು ರೂಪಾಯಿ ತೆರಿಗೆಗೆ ಪ್ರತಿಯಾಗಿ ಕೇಂದ್ರ ಸರ್ಕಾರ ಹದಿನೈದು ಪೈಸೆ ಮಾತ್ರ ವಾಪಸ್ಸು…

1 day ago