ಲಾರಿ, ಕಾರು‌ ನಡುವೆ ಭೀಕರ ಅಪಘಾತ ; ಒಂದೇ ಕುಟುಂಬದ ನಾಲ್ವರು ದುರ್ಮರಣ..!

ಕುಣಿಗಲ್: ಲಾರಿ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ದೇವರ ದರ್ಶನ ಪಡೆದು ವಾಪಸ್ಸ್ ಆಗುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿರುವ ಘಟನೆ‌ ಕುಣಿಗಲ್ ತಾಲೂಕಿನ ರಾಜ್ಯ ಹೆದ್ದಾರಿ 33 ಟಿ.ಎಂ‌ ರಸ್ತೆ ಹೊನ್ನೇನಹಳ್ಳಿ ಚಿಗಣಿಪಾಳ್ಯ ಮಧ್ಯೆ ಶನಿವಾರ ನಡೆದಿದೆ.

ಮಂಡ್ಯ ನಗರದ ವಾಸಿ ಕುಮಾರ್ ನರಸಿಂಹಸ್ವಾಮಿ( 65) ಆತನ ಹೆಂಡತಿ ಕೆ.ಆರ್ ಗಾಯಿತ್ರಿ (60) ಮತ್ತೋರ್ವ ಗಾಯಿತ್ರಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.

ಕುಮಾರ್ ನರಸಿಂಹಸ್ವಾಮಿ ಕುಟುಂಬದವರು ತುಮಕೂರು ಜಿಲ್ಲೆ  ದೇವರಾಯನದುರ್ಗ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ವಾಪಸ್ಸ್ ಮಂಡ್ಯಕ್ಕೆ ಹೊಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ತೆರಳುತ್ತಿದ್ದ ಲಾರಿ‌ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ..

Leave a Reply

Your email address will not be published. Required fields are marked *

error: Content is protected !!