
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿ ಸೇರಿದಂತೆ ತೂಬಗೆರೆ ಸುತ್ತಮುತ್ತಲಿನ ಕೆಲ ಪ್ರದೇಶದಲ್ಲಿ ಶುಕ್ರವಾರ (ಅ.23) ಬೆಳಿಗ್ಗೆ ಸುಮಾರು 9ಕ್ಕೆ 3.0 ತೀವ್ರತೆಯ ಭೂಕಂಪ ಸಂಭವಿಸಿದೆ.
ಭೂಕಂಪದ ಕೇಂದ್ರಬಿಂದು 13.368° ಉತ್ತರ ಅಕ್ಷಾಂಶ ಹಾಗೂ 77.563° ಪೂರ್ವ ರೇಖಾಂಶದಲ್ಲಿದ್ದು, ಭೂಮಿಯ ಮೇಲ್ಮೈಯಿಂದ ಸುಮಾರು 10 ಕಿ.ಮೀ. ಆಳದಲ್ಲಿ ಕಂಪನ ದಾಖಲಾಗಿದೆ.
ಭೂಕಂಪದ ಪರಿಣಾಮ ಹಾಗೂ ಯಾವುದೇ ಹಾನಿ ಸಂಭವಿಸಿರುವ ಕುರಿತು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ನಾವು ಮನೆಯಲ್ಲಿದ್ದಾಗ ಮನೆಗಳ ಮೇಲ್ಛಾವಣಿಯಲ್ಲಿ ಶಬ್ಧ ಉಂಟಾಯಿತು. ಭೂಮಿ ಕಂಪನ ಆದ ಅನುಭವ ಆಯ್ತು, ಸದ್ಯ ಯಾವುದೇ ಹಾನಿ ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.