
ದೊಡ್ಡಬಳ್ಳಾಪುರ: ವಡ್ಡರಹಳ್ಳಿ ಮತ್ತು ಮಾಕಳಿದುರ್ಗ ರೈಲು ನಿಲ್ದಾಣಗಳ ನಡುವಿನ ಏಳುಕಮಾನು ರೈಲ್ವೆ ಸೇತುವೆ ಸಮೀಪದ ಘಾಟಿ ಗೋಶಾಲೆ ಬಳಿ ರೈಲ್ವೆ ಹಳಿಯಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿರುವ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ನ.20ರಂದು ಸುಮಾರು 25ರಿಂದ 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 189/2026, ಕಲಂ 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಇನ್ನೂ ಪತ್ತೆಯಾಗಿಲ್ಲ.
ಮೃತನ ಚಹರೆ: ಸುಮಾರು 168 ಸೆಂ.ಮೀ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಸಣ್ಣನೆಯ ಶರೀರ, ಕಪ್ಪು ಗಡ್ಡ ಮತ್ತು ಮೀಸೆ ಹಾಗೂ ಕಪ್ಪು ಕೂದಲು ಹೊಂದಿದ್ದಾನೆ.
ಧರಿಸಿದ್ದ ಬಟ್ಟೆಗಳು: ಬಿಳಿ ಬಣ್ಣದ ಶರ್ಟ್, ಕಾಫಿ ಬಣ್ಣದ ಕಾಲರ್ ಸ್ವೆಟರ್, ಕಾಫಿ ಬಣ್ಣದ ಒಳ ಉಡುಪು ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ಮೃತ ವ್ಯಕ್ತಿಯ ಗುರುತು ಅಥವಾ ವಾರಸುದಾರರ ಬಗ್ಗೆ ಮಾಹಿತಿ ತಿಳಿದಿರುವವರು ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರ ಮೊಬೈಲ್ ಸಂಖ್ಯೆ 9108630967, 9902193960 ಅಥವಾ ರೈಲ್ವೆ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಅವರ ಮೊಬೈಲ್ ಸಂಖ್ಯೆ 9480802118 ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.