Categories: ರಾಜ್ಯ

ರಾಜ್ಯದಲ್ಲಿ 1 ಲಕ್ಷ 17 ಸಾವಿರ ನೇಕಾರರಿದ್ದಾರೆ- ಜವಳಿ ಇಲಾಖೆ ಕೆಲ ಯೋಜನೆಗಳು ಅನುಷ್ಠಾನವಾಗಿಲ್ಲ- ನೇಕಾರಿಕೆ ಉದ್ಯೋಗ ಅವಲಂಬಿತರಿಗೆ ಅನುದಾನ ನೀಡಬೇಕು- ಶಾಸಕ‌ ಧೀರಜ್ ಮುನಿರಾಜು

ರಾಜ್ಯದಲ್ಲಿ 1 ಲಕ್ಷ 17 ಸಾವಿರ ನೇಕಾರರಿದ್ದಾರೆ, ಯಾವ ಭಾಗದಲ್ಲಿ ಹೆಚ್ಚು ನೇಕಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅದರ ಆಧಾರದ ಮೇಲೆ ಅನುದಾನಗಳನ್ನು ಬಿಡುಗಡೆ ಮಾಡಬೇಕು ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಅವರು ಸರ್ಕಾರವನ್ನು ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜವಳಿ ಇಲಾಖೆಯ ಅಡಿಯಲ್ಲಿ ತಾಲ್ಲೂಕುಗಳ ಜನಸಾಂದ್ರತೆ ಅನುಗುಣವಾಗಿ ಅನುದಾನಗಳನ್ನು ಕೊಡುವ ಬದಲು ಉದ್ಯೋಗ ಅವಲಂಬಿತರ ಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ನೇಕಾರರ ಮಕ್ಕಳಿಗಾಗಿ ಸರ್ಕಾರ ಜಾರಿಗೆ ತಂದಿರುವ ವಿದ್ಯಾರ್ಥಿ ವೇತನ ಯೋಜನೆ ಶ್ಲಾಘನೀಯ ಎಂದ ಅವರು, ಬಾಗಲಕೋಟೆ ಬೆಳಗಾಂ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 90 ಸಾವಿರ ನೇಕಾರರು ಇದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 16,741 ಮಗ್ಗಗಳಿವೆ. ಜವಳಿ ಇಲಾಖೆ ನೀಡಿರುವ ಯೋಜನೆಯಲ್ಲಿ ಒಂದು ಪವರ್ ಲೂಂ ಮತ್ತು ಮೂರು ವಿದ್ಯುತ್ ಜಕಾರ್ಡ್ ಮಗ್ಗದ ಗುರಿ ನೀಡಲಾಗಿದೆ ಇದು ಅವೈಜ್ಞಾನಿಕವಾದುದು ಎಂದರು.

ಜವಳಿ ಇಲಾಖೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ ಆದರಲ್ಲಿ ಯಾವ ಯೋಜನೆಯೂ ಅನುಷ್ಠಾನವಾಗಿಲ್ಲ, ಉದಾಹರಣೆಗೆ ನಿಧಿ ಯೋಜನೆ, ಮಿನಿ ಪವರ್ ಲೂಂ ಪಾರ್ಕ್ ಮತ್ತು ಪ್ರೊಸೆಸಿಂಗ್ ಘಟಕ ಸ್ಥಾಪನೆ ಮುಂತಾದ ಯಾವುದೇ ಯೋಜನೆಗಳಿಗೆ ಅನುದಾನ ದೊರೆಯುತ್ತಿಲ್ಲ ಎಂದರು.

ನಾನು ಕೇಳಿಕೊಳ್ಳುವುದು ಜವಳಿ ಮತ್ತು ಕೈಮಗ್ಗ ಇಲಾಖೆ ವತಿಯಿಂದ ವಿದ್ಯುತ್ ಮಗ್ಗದ ನೇಕಾರರಿಗೆ ಇರುವಂತ ಸಾಲ ಸೌಲಭ್ಯವನ್ನು ತಾಲ್ಲೂಕುವಾರು ಹಂಚಿಕೆ ಮಾಡುವುದಕ್ಕಿಂತ ನೇಕಾರರ ಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಬೇಕು, ಜವಳಿ ಉತ್ಪಾದನೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ರಾಜ್ಯದಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿದೆ ಅದರ ಆಧಾರದ ಮೇಲೆ ಗುರಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರ ನೀಡಿದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ಧೀರಜ್ ಮುನಿರಾಜು ಅವರ ಪ್ರಶ್ನೆ ವಾಸ್ತವಕ್ಕೆ ಹತ್ತಿರವಿದೆ ಅದನ್ನು ನಾನು ಅಲ್ಲಗಳಿಯುವುದಿಲ್ಲ. ಆದರೆ, ನೇಕಾರರು ನೇಕಾರಿಕೆ ಬಿಟ್ಟು ಮೈಗ್ರೆಟ್ ಆಗುತ್ತಿರುವುದು ಸಾಮಾನ್ಯವಾಗುತ್ತಿದೆ. ಅಂಕಿ ಅಂಶಗಳು ಅದನ್ನು ದೃಢಪಡಿಸುತ್ತಿವೆ ಎಂದರು.

 ನಿಮ್ಮ ತಾಲ್ಲೂಕಿನಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳು ಪವರ್ ಲೂಂ ಹಾಕಿ ಉದ್ಯೋಗ ಪಡೆಯುತ್ತಿರುವ ವರ ಸಂಖ್ಯೆಯೂ ಹೆಚ್ಚಾಗಿದ್ದಾರೆ ನಾನು ಒಪ್ಪಿಕೊಳ್ಳುತ್ತೇನೆ. ವಿಶೇಷವಾಗಿ ನಿಮ್ಮ ತಾಲ್ಲೂಕಿಗೆ ಹಿಂದಿನ ಸರ್ಕಾರಗಳು ಹೆಚ್ಚು ಒತ್ತು ಕೊಟ್ಟಿವೆ ನಾವು ಸಹ ಕೊಡುತ್ತಿದ್ದೇವೆ. ಟಫ್ ಸ್ಕೀಂನಲ್ಲೂ ದೊಡ್ಡ ಕೈಗಾರಿಕೆ ಮಾಡಿದ್ದೇವೆ. ದೊಡ್ಡಬಳ್ಳಾಪುರಕ್ಕೆ 50 ಎಕರೆ ಮತ್ತು 183 ಪಾರ್ಕ್ ಸಹ ಬಂದಿದೆ, ಯೋಜನೆಗಳನ್ನು ಯಾವ ಮಾದಂಡ ಅಥವಾ ಸಾಂದ್ರತೆ ಮೇಲೆ ನೀಡುವುದಿಲ್ಲ, ಇಡೀ ಯೋಜನೆ ಒಂದು ಕಡೆ ಕೇಂದ್ರೀಕರಣ ಆಗಬಾರದು ಎಂದರು.

ಹೆಚ್ಚು ನೇಕಾರರು ಇರುವುದು ಉತ್ತರ ಕರ್ನಾಟಕದಲ್ಲಿ. ಆದರೆ, ಸುದೈವ ಎಂಬಂತೆ ಬೆಂಗಳೂರು ಗ್ರಾಮಾಂತರದಲ್ಲೂ ಬಹಳ ಜನ ನೇಕಾರಿಕೆ ಅಳವಡಿಸಿಕೊಂಡು ಬರುತ್ತಿದ್ದಾರೆ, ಅವರು ಸ್ಕಿಲ್ ಆಗಿ ಸಹ ಮಾಡುತ್ತಿದ್ದಾರೆ. ತಮಿಳುನಾಡು, ಮಹಾರಾಷ್ಟ್ರ ಮತ್ತು ಸೂರತ್‌ನಲ್ಲೂ ಮಾರ್ಕೆಟಿಂಗ್ ಮಾಡುವ ಜನ ನಿಮ್ಮ ಕ್ಷೇತ್ರದಲ್ಲಿ ಇರುವುದರಿಂದ ನೀವು ಕೇಳುವ ಪವರ್ ಲೂಂ ಜಕಾರ್ಡಿಗೆ ಹೆಚ್ಚಿನ ಆದ್ಯತೆ ಕೊಡಬೇಕೆಂಬ ಆಸಕ್ತಿ ನಿಮ್ಮಲ್ಲಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ನೀಡಲಾಗುವುದು. 2019 ರಿಂದ 23-24 ರ ಸಾಲಿನ ಅನುದಾನಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ 24 ರಲ್ಲಿ ಪರಿಶೀಲನೆ ಮಾಡಿ ನಿಮ್ಮ ತಾಲ್ಲೂಕಿಗೆ ವಿಶೇಷ ಆದ್ಯತೆ ನೀಡಲು ಪ್ರಯತ್ನ ಮಾಡುತ್ತೇವೆ ಎಂದರು.

ಅಫೆರಲ್ ಪಾರ್ಕ್‌ನಿಂದ ಸಾಮಾನ್ಯ ನೇಕಾರರಿಗೆ ಅನುಕೂಲವಾಗಿಲ್ಲ:

ಸಚಿವರ ಉರಮತ್ತರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಧೀರಜ್ ಮುನಿರಾಜು ಅವರು ಸಚಿವರು ಹೇಳುತ್ತಿರುವುದು ಖಂಡಿತವಾಗಿ ಸರಿ ಇದೆ‌. ಉತ್ತರ ಕರ್ನಾಟಕದಲ್ಲಿ ಕೈಮಗ್ಗದ ನೇಕಾರರು ಹೆಚ್ಚಿದ್ದಾರೆ‌ ಆದರೆ, ಪವರ್ ಲೂಂ ಅದರಲ್ಲೂ ನೇಕಾರಿಕೆ ಕುಲ ಕಸುಬು ಮಾಡುವಂತಹ ದೇವಾಂಗ, ಪದ್ಮಶಾಲಿ, ತೊಗಟವೀರ ಕುಲದ ಸಂಖ್ಯೆ ಹೆಚ್ಚಿದೆ. ದಕ್ಷಿಣ ಕನ್ನಡದಲ್ಲೂ ಹೆಚ್ಚಿದ್ದಾರೆ.ನೇಕಾರಿಕೆ ಮಾಡುತ್ತಿರುವ ಆ ಸಮಾಜದವರಿಗೆ ದಯವಿಟ್ಟು ಅವರಿಗೆ ಸೌಲಭ್ಯಗಳನ್ನು ನೀಡಬೇಕು. ಏಕೆಂದರೆ ಈ ಸಮುದಾಯಗಳು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿವೆ. ನೀವು ಹೇಳಿದಂತೆ ಅಫೆರಲ್ ಪಾರ್ಕ್, ಟೆಕ್ಸ್ ಟೈಲ್ ಪಾರ್ಕ್ ಗಳಿಂದ ಸಾಮಾನ್ಯ ನೇಕಾರ ಅಥವಾ ಕೂಲಿ ಕಾರ್ಮಿಕರಿಗೆ ಅನುಕೂಲವಾಗಿಲ್ಲ ದೊಡ್ಡ ದೊಡ್ಡ ಕಂಪನಿಗಳಿಗೆ ಖಂಡಿತ ಅನುಕೂಲವಾಗಿದೆ. ಎಂಪ್ಲಾಯ್‌ ಮೆಂಟ್ ಜನರೆಟ್ ಆಗಿದೆ. ಆದರೆ, ಅದೇ ನೇಕಾರಿಕೆ ನಂಬಿರುವ ಕುಲದವರಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಜೊತೆಗೆ ಪವರ ಸಬ್ಸಿಡಿ ಘೋಷಣೆ ಮಾಡಿದ್ದೀರಿ ಅದನ್ನು ಅತೀ ಶೀಘ್ರವಾಗಿ ಜಾರಿ ಮಾಡಬೇಕು ಏಕೆಂದರೆ ಕಳೆದ ತಿಂಗಳ ಬಿಲ್ ಬಂದಿದೆ, ಎಇಇ ಅವರು ಬಿಲ್ ಕಟ್ಟದಿದ್ದರೂ ಪರವಾಗಿಲ್ಲ ಎಂದಿದ್ದಾರೆ‌. ಮುಂದೆ ನೇಕಾರರಿಗೆ ಇದು ಸಮಸ್ಯೆ ಆಗಬಾರದು ಎಂದು ಮನವಿ ಮಾಡಿದರು.

Ramesh Babu

Journalist

Recent Posts

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

8 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

9 hours ago

ದೇಶದ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ರಾಯಚೂರಿನ ಕವಿತಾಳ ಪೊಲೀಸ್ ಠಾಣೆ ಆಯ್ಕೆ

ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…

14 hours ago

ನಾಯಿ, ಹಾವು/ ಇತರೆ ಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳು

ನಮ್ಮ‌ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…

16 hours ago

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು….ಮನಸ್ಸಿನ ದಾರಿಯಲ್ಲಿ ಅನಂತ ಪಯಣ….

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…

18 hours ago

ನಿರ್ಜನ ಪ್ರದೇಶದಲ್ಲಿ ದೊರೆತಿದ್ದ ನವಜಾತ ಶಿಶುವಿನ ಆರೋಗ್ಯ ಸ್ಥಿರ: ಜಿಲ್ಲಾ ಸರ್ಕಾರಿ ದತ್ತು ಕೇಂದ್ರಕ್ಕೆ ಹಸ್ತಾಂತರ

ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…

20 hours ago