ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಡುತ್ತಿದ್ದ ಬೆಳೆಗಳು ನಳನಳಿಸುತ್ತಿವೆ. ರಾಗಿ, ಜೋಳದ ಬೆಳೆಗೆ ಬೇಕಾದ ರಸಗೊಬ್ಬರಗಳಿಗೆ ಬೇಡಿಕೆಯೂ ಹೆಚ್ಚಾದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ರಸಗೊಬ್ಬರ ಅಂಗಡಿಗಳು, ಡೀಲರ್ ಶಿಪ್ ಪಡೆದ ಕಂಪನಿಗಳು ರೈತರ ಸುಲಿಗೆಗೆ ಇಳಿದಿವೆ ಎನ್ನಲಾಗಿದೆ.
ತಾಲೂಕಿನ ಕಾಡನೂರು ಗ್ರಾಮದಲ್ಲಿರುವ ಕ್ರಿಯಾಜೆನ್ ಕಂಪನಿಯ ಕಿಸಾನ್ ವರ್ಲ್ಡ್ ಔಟ್ ಲೆಟ್ ನಲ್ಲಿ 20-20-20 (ಎನ್ ಪಿಕೆ) ಖರೀದಿಸಿದರಷ್ಟೇ ಯೂರಿಯಾ ನೀಡುವುದಾಗಿ ಹೇಳಿ ರೈತರನ್ನು ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಸರ್ಕಾರಿ ಗೋದಾಮುಗಳಲ್ಲಿ ಇಲ್ಲದ ಯೂರಿಯಾ ಇಲ್ಲಿ ಮಾತ್ರ ಹೇಗೆ ಸಿಗುತ್ತಿದೆ ಎಂದು ಪ್ರಶ್ನಿಸಿದ ಅವರು, ಯೂರಿಯಾ ಬೆಲೆ 295 ರೂಪಾಯಿ ಇದೆ. ಆದರೆ ಇಲ್ಲಿ ಒಂದು ಚೀಲ ಯೂರಿಯಾಗೆ 310 ರೂ.ಪಡೆಯಲಾಗುತ್ತಿದೆ. ಸಾಲದೆಂಬಂತೆ ಎನ್ ಪಿಕೆ(20-20-20) ಖರೀದಿಸಿದರೆ ಮಾತ್ರ ಯೂರಿಯಾ ನೀಡುತ್ತೇವೆ. ಇಲ್ಲವಾದರೆ ಯಾವುದನ್ನೂ ಕೊಡುವುದಿಲ್ಲ ಎಂದು ಹೇಳಿ ರೈತರನ್ನು ಹೆದರಿಸುತ್ತಿದ್ದಾರೆ, ಎಂದು ಮತ್ತೊಬ್ಬ ರೈತ ತಮ್ಮ ಅಳಲು ತೋಡಿಕೊಂಡರು.
ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…
ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…
"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…