ಯುಪಿಯ ಸೋನಭದ್ರಾದಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ: ಪಾದರಕ್ಷೆ ನೆಕ್ಕಿಸಿಕೊಂಡ ಆರೋಪಿ ಬಂಧನ

ಮಧ್ಯಪ್ರದೇಶದಲ್ಲಿ ದಲಿತ ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆಯ ಘಟನೆಯ ನಂತರ, ಈ ಘಟನೆ ಮಾಸುವ ಮೊದಲೇ ಉತ್ತರ ಪ್ರದೇಶದ ಸೋನಭದ್ರಾದಲ್ಲಿ ಜಿಲ್ಲೆಯಲ್ಲಿ ಮತ್ತೊಬ್ಬ ದಲಿತ ಯುವಕನನ್ನು ಅಮಾನವೀಯವಾಗಿ ನಡೆಸಿಕೊಂಡ ಘಟನೆಯ ವೀಡಿಯೊ ವೈರಲ್ ಆಗಿದೆ.

ದಲಿತ ಯುವಕನಿಂದ ತನ್ನ ಕಾಲು ನೆಕ್ಕಿಸಿಕೊಂಡ ಅಮಾನವೀಯ ಘಟನೆ ಉತ್ತರ ಪ್ರದೇಶದ ಸೋನಭದ್ರದಲ್ಲಿ ನಡೆದಿದೆ. ದಲಿತ ಯುವಕ ವಿದ್ಯುತ್ ಇಲಾಖೆಯಲ್ಲಿ ಲೈನ್‌ ಮ್ಯಾನ್ ಕೆಲಸ ಮಾಡುತ್ತಿದ್ದು, ಅಮಾನವೀಯವಾಗಿ ಕಾಲು ನೆಕ್ಕಿಸಿಕೊಂಡ ವ್ಯಕ್ತಿಯನ್ನು ತೇಜ್ ಬಾಲಿ ಸಿಂಗ್ ಎಂದು ಗುರುತಿಸಲಾಗಿದೆ.

ದಲಿತ ಯುವಕನಿಗೆ ಥಳಿಸಿ ಚಪ್ಪಲಿ ನೆಕ್ಕುವಂತೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಲಿಪಶುವಿನ ಕಿವಿಯನ್ನು ಹಿಡಿದು ಅವನನ್ನು ಕೂರಿಸುವುದು ಸಹ ಕಂಡುಬರುತ್ತದೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ತೇಜ್ ಬಾಲಿ ಸಿಂಗ್ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ.

ಶಹಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ದಿಹ್ ಗ್ರಾಮದ ವೀಡಿಯೊ ಎಂದು ಹೇಳಲಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಗುತ್ತಿಗೆ ಲೈನ್‌ಮ್ಯಾನ್ ದಲಿತ ಯುವಕನಿಂದ ತೇಜ್ ಬಾಲಿ ಸಿಂಗ್ ಬಲವಂತವಾಗಿ ಚಪ್ಪಲಿಯನ್ನು ನೆಕ್ಕಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವೈರಲ್ ವಿಡಿಯೋವನ್ನು ಪೊಲೀಸರು ತನಿಖೆ ನಡೆಸಿದಾಗ, ಜುಲೈ 6 ರಂದು ಈ ಘಟನೆ ನಡೆದಿರುವುದು ಕಂಡುಬಂದಿದೆ.

ತನ್ನ ತಾಯಿಯ ಚಿಕ್ಕಪ್ಪನ ಮನೆಯಲ್ಲಿ ವಿದ್ಯುತ್ ಕೆಟ್ಟಿದ್ದರಿಂದ ಸಂಜೆ 4 ಗಂಟೆಗೆ ದೋಷವನ್ನು ನೋಡಿದೆ. ಅಷ್ಟರಲ್ಲಿ ಶಹಗಂಜ್ ಪವರ್ ಹೌಸ್ ನಲ್ಲಿ ನೇಮಕಗೊಂಡ ಗುತ್ತಿಗೆ ನೌಕರ ತೇಜ್ಬಾಲಿ ಸಿಂಗ್ ಬಂದು ನನ್ನನ್ನು ನಿಂದಿಸಿ ಥಳಿಸಿ ಜಾತಿ ಸೂಚಕ ಪದಗಳನ್ನು ಬಳಸಿ ಚಪ್ಪಲಿ ನೆಕ್ಕುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ಸುತ್ತಮುತ್ತಲಿನವರು ರಕ್ಷಣೆಗೆ ಬಂದಾಗ ನನ್ನನ್ನು ಬಿಟ್ಟು ಓಡಿ ಹೋದ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರೋ ದಲಿತ ಯುವಕ

Ramesh Babu

Journalist

Recent Posts

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್

  ಮದುವೆಯಾದ 45 ದಿನಕ್ಕೆ ನವವಿವಾಹಿತ ಪತ್ನಿಯಿಂದ ಕಿರುಕುಳ ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ವರ್ತನೆಯೇ ಸಾವಿಗೆ ಕಾರಣ ಎಂದು…

3 hours ago

ವರದಕ್ಷಿಣೆ ಭೂತಕ್ಕೆ ಬಲಿಯಾದ ವಿವಾಹಿತೆ; ಮದುವೆಯಾದ ಎರಡೇ ವರ್ಷಕ್ಕೆ ಮಸಣದ ಪಾಲು

ಬೆಂಗಳೂರು ನಗರದ ಯಡಿಯೂರು ಕೆರೆ ಸಮೀಪದ ನಿವಾಸಿಯೊಬ್ಬರು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.…

5 hours ago

ಆಸ್ತಿ ವ್ಯಾಮೋಹಕ್ಕೆ ಹೆತ್ತ ತಾಯಿಯ ಕೊಲೆ: ಕಲ್ಲು ಎತ್ತಿ ಹಾಕಿ ಕೊಂದ ಮಗ.!

ರಾಯಚೂರು: ಆಸ್ತಿ ಮೇಲಿನ ವ್ಯಾಮೋಹಕ್ಕೆ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಹೃದಯವಿದ್ರಾವಕ ಘಟನೆ ರಾಯಚೂರು…

5 hours ago

ಚೀಲದಲ್ಲಿ ಯುವತಿಯ ಶಿರವಿಲ್ಲದ ದೇಹ ಪತ್ತೆ; ಸಹೋದ್ಯೋಗಿ ಅರೆಸ್ಟ್….! ಏಕೆ ಗೊತ್ತಾ….?

ಆಗ್ರಾ: ಆಗ್ರಾದಲ್ಲಿ ಚೀಲದಲ್ಲಿ ಯುವತಿಯ ಶಿರರಹಿತ ಶವ ಪತ್ತೆಯಾದ ಪ್ರಕರಣದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಆಗ್ರಾದ ಪಾರ್ವತಿ ವಿಹಾರ್‌ನಲ್ಲಿ ಜನವರಿ 24…

6 hours ago

ಪಿಟಿಸಿಎಲ್ ಕಾಯ್ದೆ ವಿರುದ್ದ ತೀರ್ಪು ನೀಡಿದವರ ಮೇಲೆ ಕ್ರಮಕ್ಕೆ ಒತ್ತಾಯ

ಕೋಲಾರ: ರಾಜ್ಯ ಸರ್ಕಾರ 2023ರ ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ಕಂದಾಯ ಇಲಾಖೆ, ನ್ಯಾಯಾಲಯಗಳು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನಲ್ಲಿ…

7 hours ago

ಸಾಲದ ಸುಳಿಗಿಂತಲೂ ಕಿರುಕುಳವೇ ಮಾರಕ…

ಒಂದು ಸುಂದರ ಸಂಸಾರ ಸಾಲದ ಸುಳಿಗೆ ಸಿಲುಕುವುದು ಎಂದರೆ ಅದು ಕೇವಲ ಆರ್ಥಿಕ ಬಿಕ್ಕಟ್ಟಲ್ಲ; ಅದು ಆ ಮನೆಯ ನೆಮ್ಮದಿಯ…

12 hours ago