ಅಣ್ಣ ಮದುವೆಯಾಗಿದ್ದ ಮನೆಗೆ ಬಂದು ಹೋಗುತ್ತಿದ್ದ ಆತ, ಬಂದು ಹೋಗುವ ಗ್ಯಾಪ್ ನಲ್ಲಿ ಅತ್ತಿಗೆ ತಂಗಿಯನ್ನ ಲವ್ ಮಾಡಿ ಮದುವೆಯಾದ, ಅವಳಿಗೆ ಇಬ್ಬರು ಮಕ್ಕಳನ್ನ ಕೊಟ್ಟವನು ಈಗ ಮತ್ತೊಬ್ಬಳನ್ನು ಮದುವೆಯಾಗುವ ಮೂಲಕ ಇಬ್ಬರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ರಘು ಎಂಬಾತನ್ನು 10 ವರ್ಷಗಳ ಹಿಂದೆ ಮೊದಲನೇ ಹೆಂಡತಿ ಶಿಲ್ಪಾ ಪ್ರೀತಿಸಿ ಮದುವೆಯಾಗಿದ್ದರು. ಅಂದಹಾಗೇ ಈ ರಘು ಶಿಲ್ಪಾಳ ಅಕ್ಕ ಪ್ರೇಮ ಮದುವೆಯಾಗಿದ್ದ, ಗಂಡನ ತಮ್ಮ, ಮದುವೆಯಾದ ಪ್ರಾರಂಭದಲ್ಲಿ ರಘು ಮತ್ತು ಶಿಲ್ಪಾ ದಾಪಂತ್ಯ ಚೆನ್ನಾಗಿಯೇ ಇತ್ತು. ಇಬ್ಬರು ಮುದ್ದಿನ ಗಂಡು ಮಕ್ಕಳಿದ್ದರು. ಎರಡನೇ ಮಗ ಅನಾರೋಗ್ಯದಿಂದ ಸಾವನ್ನಪ್ಪಿದ ನಂತರ ರಘುವಿನ ವರ್ತನೆಯೇ ಬದಲಾಯ್ತು ಅಂತಾರೆ ಶಿಲ್ಪಾ.
ಹೆಂಡತಿ ಹೆಸರಿನಲ್ಲಿ ಸಾಲ ಮಾಡುತ್ತಿದ್ದ ರಘು, ಏಕೆ ಸಾಲ ಮಾಡ್ತಿರಾ ಅಂತಾ ಹೆಂಡತಿ ಕೇಳಿದ್ರೆ, ನನಗೆ ಹಣ ಬೇಕು, ನಿನ್ನ ಸಹೋದರರಿಂದ ವರದಕ್ಷಿಣೆಯ ಹಣ ತಂದುಕೊಡುವಂತೆ ಕೇಳುತ್ತಿದ್ದನಂತೆ, ಹಣ ತಂದು ಕೊಡದಿದ್ದಾರೆ ಮತ್ತೊಂದು ಮದುವೆಯಾಗುವೆ ಎಂದು ಕಿರುಕುಳ ಕೊಡುತ್ತಿದ್ದಾನಂತೆ, ಶಿಲ್ಪಾ ವರದಕ್ಷಿಣೆ ಕಿರುಕುಳ ಪ್ರಕರಣವನ್ನ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿದ್ದಾರೆ.
ರಘು ದೊಡ್ಡಬಳ್ಳಾಪುರದ ಹುಡುಗಿಯೊಬ್ಬಳನ್ನು ಎರಡನೇ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆತನ ತಂದೆಯೇ ಎರಡನೇ ಮದುವೆಯಾಗಿರುವ ಬಗ್ಗೆ ಸುದ್ದಿ ತಿಳಿಸಿದ್ದಾರೆ ಎಂದು ಶಿಲ್ಪಾ ಆರೋಪ ಮಾಡಿದ್ದಾರೆ, ರಘು ಎರಡನೇ ಮದುವೆಯಾಗಿರುವ ಹುಡುಗಿಗೂ ಸಹ ಇದು ಎರಡನೇ ಮದುವೆ, ಮೊದಲನೇ ಗಂಡ ಸಾವನ್ನಪ್ಪಿದ್ದಾನೆ, ಆಕೆಯ ಗಂಡನಿಂದ ಹಣ ಬರುವ ಸುಳಿವು ಸಿಕ್ಕ ರಘು ಮತ್ತು ಆತನ ಕುಟುಂಬದವರು ಆಕೆಯ ಜೊತೆ ಎರಡನೇ ಮದುವೆ ಮಾಡಿಸಿದ್ದಾರೆಂದು ಶಿಲ್ಪಾ ಮತ್ತು ಆಕೆಯ ಕುಟುಂಬ ಆರೋಪ ಮಾಡಿದೆ.
ನನಗೆ ನನ್ನ ಗಂಡ ಬೇಕು, ಯಾವುದೇ ಕೆಲಸಕ್ಕೆ ಹೋಗದ ನಾನು ಮಗನನ್ನು ಸಾಕುವುದು ಹೇಗೆ ನನಗೆ ನ್ಯಾಯ ಬೇಕೆಂದು ಕೇಳಿಕೊಂಡಿದ್ದಾರೆ, ಇತ್ತಾ ರಘು ಕುಟುಂಬದವರಿಂದ ಜೀವ ಬೆದರಿಕೆ ಇದ್ದು ನಮ್ಮ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿರುವಂತಹ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ…
ಅಭಿಮಾನಿಗಳ ಅತಿರೇಕ.... ಹುಚ್ಚುತನದ ಪರಮಾವಧಿ..... ದಚ್ಚು - ಕಿಚ್ಚ. (ದರ್ಶನ್ - ಸುದೀಪ್) + (ಡೆವಿಲ್ - ಮಾರ್ಕ್)........ ಅವರ…
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…
ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…
ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ…