ಬೆಂಗಳೂರು: ಮೇಕ್ ಮೈ ಟ್ರಿಪ್ ತಮ್ಮ ಒಟ್ಟು ಬುಕ್ಕಿಂಗ್‌ನಲ್ಲಿ ಶೇ. 10ರಷ್ಟು ಬುಕ್ಕಿಂಗ್ ಆಧ್ಯಾತ್ಮಿಕ ಕೇಂದ್ರಗಳಲ್ಲೇ ಆಗುತ್ತಿದೆ ಎಂದು ಮೇಕ್ ಮೈ ಟ್ರಿಪ್ ತಮ್ಮ ಮೂರನೇ ತ್ರೈಮಾಸಿಕದಲ್ಲಿ ಮಾಹಿತಿ ನೀಡಿದೆ.
ಬುಕ್ಕಿಂಗ್ ಪ್ಲಾಟ್‌ಫಾರಂನಲ್ಲಿ ಅಧ್ಯಾತ್ಮಿಕ ಸ್ಥಳಗಳ ಹುಡುಕಾಟವು 2022 ಕ್ಕೆ ಹೋಲಿಸಿದರೆ 2024 ರಲ್ಲಿ ಶೇ,46ರಷ್ಟು ಹೆಚ್ಚಳವಾಗಿದೆ. ಇದು ಐಷಾರಾಮಿ ಪ್ರವಾಸಕ್ಕಿಂತ ಅರ್ಥವತ್ತಾದ ಮತ್ತು ಅಧ್ಯಾತ್ಮಿಕವಾಗಿ ಶ್ರೀಮಂತವಾದ ಪ್ರಯಾಣಕ್ಕೆ ಪ್ರವಾಸಿಗರು ಹೆಚ್ಚು ಆದ್ಯತೆ ನೀಡುತ್ತಿರುವುದನ್ನು ಸೂಚಿಸುತ್ತಿದೆ.
ನಂಬಿಕೆ ಮತ್ತು ಸಂಪ್ರದಾಯವನ್ನು ಆಧರಿಸಿರುವ ಈ ತೀರ್ಥಯಾತ್ರೆಗಳಲ್ಲಿ ಸಾಮಾನ್ಯವಾಗಿ ಕುಟುಂಬಗಳೂ ಜೊತೆಗಿರುತ್ತವೆ. ಹೀಗಾಗಿ, ವೃದ್ಧರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಇದರಿಂದ ಇಡೀ ಕುಟುಂಬದ ಅಗತ್ಯಕ್ಕೆ ಅನುಗುಣವಾದ ವಾಸವನ್ನು ಹುಡುಕಿಕೊಳ್ಳುವ ಅನಿವಾರ್ಯ ಇರುತ್ತದೆ. 26 ಪ್ರಮುಖ ಅಧ್ಯಾತ್ಮಿಕ ಸ್ಥಳಗಳಲ್ಲಿ 450 ಕ್ಕೂ ಹೆಚ್ಚು ಹೋಟೆಲ್‌ಗಳು ಮತ್ತು ಹೋಮ್‌ಸ್ಟೇಗಳನ್ನು ಇದರ ಅಡಿಯಲ್ಲಿ ಗುರುತು ಮಾಡಲಾಗಿದೆ. ಇದರಡಿಯಲ್ಲಿ ಬುಕ್ಕಿಂಗ್ ಹೆಚ್ಚಾಗಿ ಆಗಿದೆ.
ಹೋಟೆಲ್, ಬೆಳವಣಿಗೆ ಮತ್ತು ಅಭಿವೃದ್ಧಿಗೊಳ್ಳುತ್ತಿರುವ ಉದ್ಯಮದ ಮುಖ್ಯ ಉತ್ಪನ್ನ ಅಧಿಕಾರಿ ಅಂಕಿತ್ ಖನ್ನಾ ಮಾತನಾಡಿ, “ಈಗ ಉತ್ತಮ ರಸ್ತೆಗಳು, ರೈಲು ಮತ್ತು ವಿಮಾನ ಸಂಪರ್ಕದಿಂದಾಗಿ ಭಾರತದ ಅಧ್ಯಾತ್ಮಿಕ ತಾಣಗಳಿಗೆ ತೆರಳುವುದು ಹಿಂದಿಗಿಂತ ಈಗ ಸುಲಭವಾಗಿದೆ. ಭಕ್ತರು ಇಷ್ಟಪಟ್ಟಿರುವುದು ಎಂಬ ಗುರುತಿನ ಮೂಲಕ ಭಕ್ತರಿಗೆ ತಮ್ಮ ಅಗತ್ಯಕ್ಕೆ ಅನುಗುಣವಾದ ವಾಸಸ್ಥಳ ಸಿಗುತ್ತದೆ ಎಂಬುದನ್ನು ಖಾತ್ರಪಡಿಸಿಕೊಳ್ಳಲಾಗುತ್ತದೆ. ಅಸಲಿ ಪ್ರವಾಸಿಗರ ಒಳನೋಟಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿರುವ ಇದು ಪ್ರವಾಸಿಗರು ಅತ್ಯಂತ ಸೂಕ್ತವಾದ ವಾಸವನ್ನು ಹುಡುಕಿಕೊಳ್ಳಲು ಸಹಾಯ ಮಾಡುತ್ತದೆ. ಇದರ ಉದ್ದೇಶ ಅತ್ಯಂತ ಸರಳವಾಗಿದ್ದು, ಯೋಜನೆ ಮಾಡುವ ಒತ್ತಡವನ್ನು ಕಡಿಮೆ ಮಾಡುವುದಾಗಿದೆ. ಇದರಿಂದ, ಭಕ್ತರು ತಮ್ಮ ನಂಬಿಕೆ ಮತ್ತು ಅನುಭವಕ್ಕೆ ಮುಖ್ಯವಾದ ಅಂಶಗಳ ಮೇಲೆ ಹೆಚ್ಚು ಗಮನ ಹರಿಸಬಹುದಾಗಿದೆ ಎಂದರು.
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ…
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಮತದಾನ ಡಿ.21ರಂದು ನಡೆದಿತ್ತು. ಇಂದು (ಡಿ.24)ರಂದು ಮತ ಎಣಿಕೆ ನಡೆದಿದ್ದು, ಬಿಜೆಪಿ 14, ಕಾಂಗ್ರೆಸ್…
ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…