ಮೂರನೇ ಮಹಡಿ ಮೇಲಿಂದ ತಳ್ಳಿ ತಾಯಿಯ ಜೀವ ತೆಗೆದ ಪಾಪಿ ಮಗ

ಮಗನಿಂದಲೇ ತಾಯಿ ಕೊಲೆಯಾಗಿರುವ ಘಟನೆ‌ ಇಂದು ಮಧ್ಯಾಹ್ನ ಬೆಂಗಳೂರಿನ ಆರ್ ಆರ್ ನಗರದ ಬೆಮಲ್ ಲೇಔಟ್ ನಲ್ಲಿ ನಡೆದಿದೆ…

ಮೂರನೇ ಮಹಡಿ ಮೇಲಿಂದ ತಾಯಿಯನ್ನ ತಳ್ಳಿ ಕೊಲೆ ಮಾಡಿದ್ದಾನೆ.

ಸಾವಿತ್ರಮ್ಮ(72) ಕೊಲೆಯಾದ ದುರ್ದೈವಿ ಮಹಿಳೆ. ಮಗ ವೆಂಕಟೇಶ್ (42) ಎಂಬಾತನಿಂದ ಕೃತ್ಯ.

ಸಾವಿತ್ರಮ್ಮ 4-5 ವರ್ಷದಿಂದ ಅನಾರೋಗ್ಯ (ಪಾರ್ಶ್ವವಾಯು) ಪೀಡಿತರಾಗಿದ್ದರು. ಇದೇ ಬೇಸರದಿಂದ ತಾಯಿಯನ್ನ ತಳ್ಳಿ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ..

ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Leave a Reply

Your email address will not be published. Required fields are marked *

error: Content is protected !!