ಬೆ. ಗ್ರಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ; ಮಹಿಳೆಯರಿಗೆ ಹೆಚ್ಚಿನ ಆದ್ಯತೆ

ದೊಡ್ಡಬಳ್ಳಾಪುರ: ಮುಂಬರುವ ಐದು ವರ್ಷಗಳ ಅವಧಿಗೆ ನಡೆಯಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 28 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಮೀಸಲಾತಿಯ ಅಂತಿಮ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರ ಅಡಿಯಲ್ಲಿ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಕಳೆದ ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಪ್ರಕಟಿಸಿ, ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ನೀಡಲಾಗಿತ್ತು. ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದ ಬಳಿಕ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಲಾಗಿದೆ.

ಮೀಸಲಾತಿ ವಿವರ ಹೀಗಿದೆ:

 

1-ನೆಲವಾಗಿಲು- ಸಾಮಾನ್ಯ

2-ಶಿವನಾಪುರ- ಅನುಸೂಚಿತ ಜಾತಿ (ಮಹಿಳೆ)

3-ಮುಗಬಾಳ- ಹಿಂದುಳಿದ ವರ್ಗ “ಅ” (ಮಹಿಳೆ)

4-ಜಡಿಗೇನಹಳ್ಳಿ- ಸಾಮಾನ್ಯ

5-ಅನುಗೊಂಡನಹಳ್ಳಿ- ಸಾಮಾನ್ಯ (ಮಹಿಳೆ)

6-ದೊಡ್ಡಗಟ್ಟಿಗನಬ್ಬೆ- ಹಿಂದುಳಿದ ವರ್ಗ “ಬ” (ಮಹಿಳೆ)

7-ಚೊಕ್ಕಹಳ್ಳಿ- ಅನುಸೂಚಿತ ಜಾತಿ

8-ಆವತಿ- ಹಿಂದುಳಿದ ವರ್ಗ “ಅ”

9-ಸೂಲಿಬೆಲೆ- ಅನುಸೂಚಿತ ಜಾತಿ (ಮಹಿಳೆ)

10-ಕುಂದಾಣ- ಸಾಮಾನ್ಯ

11-ಬಿಜ್ಜವಾರ- ಅನುಸೂಚಿತ ಜಾತಿ

12-ಚನ್ನರಾಯಪಟ್ಟಣ- ಅನುಸೂಚಿತ ಪಂಗಡ (ಮಹಿಳೆ)

13 -ಬೂದಿಗೆರೆ- ಸಾಮಾನ್ಯ (ಮಹಿಳೆ)

14-ಕನ್ನಮಂಗಲ- ಸಾಮಾನ್ಯ

15-ಕನಸವಾಡಿ- ಸಾಮಾನ್ಯ (ಮಹಿಳೆ)

16-ದೊಡ್ಡಬೆಳವಂಗಲ- ಅನುಸೂಚಿತ ಜಾತಿ (ಮಹಿಳೆ)

17 ಸಾಸಲು- ಸಾಮಾನ್ಯ

18-ತೂಬುಗೆರೆ- ಸಾಮಾನ್ಯ (ಮಹಿಳೆ)

19-ರಾಜಘಟ್ಟ- ಹಿಂದುಳಿದ ವರ್ಗ “ಅ” (ಮಹಿಳೆ)

20-ದರ್ಗಾಜೋಗಿಹಳ್ಳಿ- ಸಾಮಾನ್ಯ

21-ಕೊಡಿಗೇಹಳ್ಳಿ- ಸಾಮಾನ್ಯ (ಮಹಿಳೆ)

22-ಮೋಟಗೊಂಡನಹಳ್ಳಿ- ಸಾಮಾನ್ಯ (ಮಹಿಳೆ)

23- ಟಿ ಬೇಗೂರು- ಸಾಮಾನ್ಯ

24-ತ್ಯಾಮಗೊಂಡ್ಲು- ಹಿಂದುಳಿದ ವರ್ಗ “ಅ”

25-ಮಣ್ಣೆ- ಅನುಸೂಚಿತ ಜಾತಿ

26-ಸೋಂಪುರ- ಅನುಸೂಚಿತ ಪಂಗಡ

27- ಶಿವಗಂಗೆ- ಸಾಮಾನ್ಯ

28-ಸೋಲೂರು- ಅನುಸೂಚಿತ ಜಾತಿ (ಮಹಿಳೆ)

ಒಟ್ಟು 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ, 7 ಕ್ಷೇತ್ರಗಳನ್ನು ಅನುಸೂಚಿತ ಜಾತಿಗೆ, 2 ಕ್ಷೇತ್ರಗಳನ್ನು ಅನುಸೂಚಿತ ಪಂಗಡಕ್ಕೆ, 5 ಕ್ಷೇತ್ರಗಳನ್ನು ಹಿಂದುಳಿದ ವರ್ಗ ‘ಅ’ ಮತ್ತು 1 ಕ್ಷೇತ್ರವನ್ನು ಹಿಂದುಳಿದ ವರ್ಗ ‘ಬ’ಕ್ಕೆ ಮೀಸಲಿಡಲಾಗಿದೆ. ಮಹಿಳೆಯರಿಗೆ ಒಟ್ಟು 12 ಕ್ಷೇತ್ರಗಳಲ್ಲಿ ಮೀಸಲಾತಿ ಕಲ್ಪಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ಕೆ.ಎಚ್. ಅವರು ರಾಜ್ಯಪಾಲರ ಆದೇಶಾನುಸಾರ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!