ಕೋಲಾರ: ಮಾಲೂರಿನ ಸರ್ವೆ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐ ಗೆ ಒಪ್ಪಿಸಿ ನೂರಾರು ಹಳ್ಳಿಗಳ ಪಿ-ನಂಬರ್ ದುರಸ್ತಿ ಕಡತಗಳನ್ನು ಎ.ಡಿ.ಎಲ್.ಆರ್. ಕೊಠಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಅಧಿಕಾರಿ ನಿವೇದಿತ, ಭೂದಾಖಲೆಗಳ ಸಹಾಯಕ ನಿರ್ದೇಶಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ರೈತರ ಹೆಸರಿನಲ್ಲಿ ಭೂ ಮಾಫಿಯಾ ರವರಿಗೆ ಸರ್ಕಾರಿ ಜಮೀನು ಮಂಜೂರಾತಿಯನ್ನು ರದ್ದು ಮಾಡಬೇಕೆಂದು ರೈತ ಸಂಘದಿಂದ ಮಾಲೂರು ತಾಲ್ಲೂಕು ಕಚೇರಿ ಮುಂದೆ ಪೊರಕೆಗಳನ್ನು ಹಿಡಿದು ಹೋರಾಟ ಮಾಡಿ, ತಾಲ್ಲೂಕು ಅಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗೆ ಹಾಗೂ ಆಯುಕ್ತರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮಾಲೂರಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಿರಂತರವಾಗಿ ಭ್ರಷ್ಟಾಚಾರ ಮತ್ತು ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮತ್ತು ರೈತಾಪಿ ವರ್ಗದ ಜನರ ಯಾವುದೇ ಪೋಡಿ, ಹದ್ದುಬಸ್ತು, ಇ-ಸ್ವತ್ತು, ವಿವಿಧ ಅಳತೆ ಕಾರ್ಯಗಳಿಗಾಗಿ ಮತ್ತು ನಕ್ಷೆಗಳಿಗಾಗಿ ಅಕ್ರಮ ಸಂಭಾವನೆ ಪಡೆಯುತ್ತಿರುವ ಬಗ್ಗೆ ಅನೇಕ ಬಾರಿ ಪ್ರತಿಭಟನೆಗಳು ನಡೆಸಲಾಗಿತ್ತು ಮತ್ತು ಇತ್ತೀಚೆಗೆ ಎಡಿಎಲ್‍ಆರ್ ಅಶ್ವಿನಿ ರವರು ಲಂಚ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲಿಗೆ ಹೋದ ಬೆನ್ನಲ್ಲೆ ಉತ್ತಮವಾದ ಅಧಿಕಾರಿಗಳನ್ನು ನಿಯೋಜಿಸುವ ಬದಲು ಮೇಲಾಧಿಕಾರಿಗಳ ಮೇಲೆ ಜನಪ್ರತಿನಿಧಿಗಳು ಒತ್ತಡ ಹೇರಿ ಮುಳಬಾಗಿಲು ತಾಲ್ಲೂಕಿನಲ್ಲಿ ಅನೇಕ ಅಕ್ರಮಗಳಲ್ಲಿ ಭಾಗಿಯಾಗಿರುವ ಕುಮಾರಿ ನಿವೇದಿತ, ಭೂದಾಖಲೆಗಳ ಸಹಾಯಕ ನಿರ್ದೇಶಕರವರನ್ನು ಪ್ರಭಾರೆ ಎಡಿಎಲ್‍ಆರ್ ಆಗಿ ಹಾಗೂ ಕೋಲಾರದಿಂದ ಭ್ರಷ್ಟ ಅಧಿಕಾರಿ
ರವಿಕುಮಾರ್, ರ‍್ವೆ ಸೂಪರ್ ವೈಸರ್ ರವರನ್ನು ಪ್ರಭಾರೆಯಾಗಿ ನಿಯೋಜಿಸಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಭ್ರಷ್ಟಾಚಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಜುಲೈ ತಿಂಗಳಲ್ಲಿ ಕೆಲವು ಜನಪ್ರತಿನಿಧಿಗಳು ಸಿಸಿ ಟಿವಿ ಆಫ್ ಮಾಡಿರುತ್ತಾರೆಂದು ದಾಖಲೆಗಳನ್ನು ಸೇರಿಸಿರುತ್ತಾರೆಂದು ದೂರುಗಳ ನೆಪದಲ್ಲಿ ಸಿಸಿ ಟಿವಿ ಫೂಟೇಜಸ್ ಅನ್ನು ಡಿಲೀಟ್ ಮಾಡುವ ಮೂಲಕ ಈ ಹಿಂದಿನ ಎಡಿಎಲ್‍ಆರ್ ಅಶ್ವಿನಿ ರವರು ಮಾಡಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯವನ್ನು ನಾಶ ಮಾಡಿರುತ್ತಾರೆಂದು ಅನೇಕ ಅನುಮಾನಗಳು ಬಂದ
ಹಿಂದೆಯೇ ಈಗ ಮತ್ತೇ ಅಕ್ರಮಗಳಿಗೆ ಅವಕಾಶ ಮಾಡಿಕೊಡುತ್ತಿರುವುದು ಇಲಾಖೆಯ ಕಿರಿಯ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳ ಹಿಡತ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪ ಮಾಡಿದರು.
ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಹರೀಶ್ ಸುಪ್ರಿಂ ಚಲ, ವಿನುತ್ ಪಾರುಕ್‍ಪಾಷ, ಬಂಗಾರಿ ಮಂಜು, ವಿಜಯ್‍ಪಾಲ್, ಭಾಸ್ಕರ್, ಶಶಕುಮಾರ್, ಮುನಿರಾಜು, ರತ್ನಮ್ಮ, ಶೈಲಜ, ಗೌರಮ್ಮ, ವೆಂಕಟಮ್ಮ,, ನಾರೆಮ್ಮ,
ಸಾವಿತ್ರಮ್ಮ, ಮುನಿರತ್ನಮ್ಮ, ಸರೋಜಮ್ಮ, ಜಯಲಕ್ಷ್ಮಮ್ಮ, ಮುನಿಯಮ್ಮ, ರಾಮಕ್ಕ ಮುಂತಾದವರು ಇದ್ದರು.
ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…