Categories: ಲೇಖನ

ಮಳೆ ನೀರಿನ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಕಾರ್ಯ ಯೋಜನೆ ಜಾರಿಯಾಗಬೇಕು….

ಬರಗಾಲವನ್ನು ಮರೆಸುವಷ್ಟು ಮಳೆಯಾಗುತ್ತಿದೆ. ಮಳೆ ತುಂಬಾ ಕಡಿಮೆ ಎನ್ನಲಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಕಲ್ಯಾಣ ಕರ್ನಾಟಕದ ಮೂಲೆಮೂಲೆಗಳಲ್ಲಿ ಸಹ ಮಳೆ ಬೀಳುತ್ತಿದೆ…….

ಕೃಷಿ ದೃಷ್ಟಿಯಿಂದ ಈ ಮಳೆಯ ಪರಿಣಾಮ ಲಾಭವೋ ನಷ್ಟವೋ ವೈಯಕ್ತಿಕವಾಗಿ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಆದರೆ ಅಂತರ್ಜಲದ ಮಟ್ಟ ಮಾತ್ರ ಉತ್ತಮವಾಗಬಹುದು ಎಂದು ಹೇಳಲಾಗುತ್ತದೆ…..

ಏನೇ ಇರಲಿ, ಪ್ರಕೃತಿಯ ಎಲ್ಲಾ ವೈಪರೀತ್ಯಗಳನ್ನು ನಾವು ಸಹಿಸಲೇಬೇಕು. ಅದು ಅನಿವಾರ್ಯ. ಆದರೆ ಆಡಳಿತ ವ್ಯವಸ್ಥೆ, ಪರಿಸರ, ಕೃಷಿ ಮತ್ತು ನೀರಾವರಿ ತಜ್ಞರು ಈ ಅಧಿಕ ಮಳೆಯ ಗರಿಷ್ಠ ಉಪಯೋಗ ಪಡೆಯಲು ಮತ್ತು ಕೆಲವು ಶಾಶ್ವತ ಭವಿಷ್ಯದ ಯೋಜನೆಗಳನ್ನು ರೂಪಿಸಲು ಪ್ರಯತ್ನಿಸಬೇಕು…..

ವಾತಾವರಣ ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವು ವರ್ಷಗಳ ನಂತರ ಬರಗಾಲ ಬರಬಹುದು. ಅದರ ಪರಿಣಾಮ ಕಡಿಮೆ ಮಾಡಲು ನೀರಿನ ಸಂಗ್ರಹ ಮತ್ತು ಹಂಚಿಕೆಯ ಬಗ್ಗೆ ಏನಾದರೂ ಕಾರ್ಯ ಯೋಜನೆಯನ್ನು ಜಾರಿಗೊಳಿಸಬೇಕು…..

ಅತಿವೃಷ್ಟಿ ಮತ್ತು ಅನಾವೃಷ್ಟಿಯ ಅನುಭವದ ಆಧಾರದ ಮೇಲೆ ಇದನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಿದರೆ ಸಾಧ್ಯವಾಗಬಹುದು. ಮುಖ್ಯವಾಗಿ ಶಾಶ್ವತ ಬರಗಾಲ ಪೀಡಿತ ಪ್ರದೇಶಗಳು ಎಂದು ಕರೆಯಲಾಗುತ್ತಿದ್ದ ಜಿಲ್ಲೆ, ತಾಲ್ಲೂಕುಗಳಲ್ಲಿ ಮುಂದೆ ಮಳೆ ಕಡಿಮೆಯಾದಾಗ ಈಗಿನ ಅಧಿಕ ನೀರು ಅಥವಾ ಅಂತರ್ಜಲ ಮಟ್ಟವನ್ನು ಹೇಗೆ ಒಂದಷ್ಟು ಕಾಲ ಉಪಯೋಗಿಸಿಕೊಳ್ಳಬಹುದು ಎಂಬುದರ ಅಂದಾಜು ಭೂಗರ್ಭ ಶಾಸ್ತ್ರಜ್ಞರು ಮಾಡಬಹುದು. ಅದೇರೀತಿ ಈ ಮಳೆಯ ಕಾರಣದಿಂದ ಸೃಷ್ಟಿಯಾದ ಗಿಡಮರಗಳನ್ನು ಒಂದು ದಟ್ಟ ಅರಣ್ಯ ಪ್ರದೇಶವಾಗಿ ಬೆಳೆಸುವ ಸಾಧ್ಯತೆಗಳನ್ನು ಪರಿಶೀಲಿಸಬಹುದು…..

ಸಾಮಾನ್ಯ ಜನರಾದ ನಮಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ತಿಳಿವಳಿಕೆ ಇರುವುದಿಲ್ಲ. ಆದರೆ ಈ‌ ಕ್ಷೇತ್ರಗಳ ತಜ್ಞರು ಈ ಬಗ್ಗೆ ‌ಜಾಗೃತರಾಗಿ ಸರ್ಕಾರದ ಗಮನಸೆಳೆದು ನಿರಂತರ ಕೆಲಸ ಮಾಡಬೇಕು. ಸಾಮಾನ್ಯ ಜನ ಅವರ ಮೇಲೆಯೇ ಭರವಸೆ ಇಟ್ಟಿರುತ್ತಾರೆ ಮತ್ತು ಅವಲಂಬಿಸಿರುತ್ತಾರೆ. ಇದು ಸರ್ಕಾರ ಮತ್ತು ತಜ್ಞರ ಕರ್ತವ್ಯ ಮತ್ತು ಜವಾಬ್ದಾರಿ……

ಆದರೆ ದುರಾದೃಷ್ಟವಶಾತ್ ‌ರಾಜಕೀಯ ಪಕ್ಷಗಳಿಗೆ, ಮಾಧ್ಯಮದವರಿಗೆ ಈ‌‌ ರೀತಿಯ ಶಾಶ್ವತ ‌ಅಭಿವೃದ್ಧಿಗಿಂತ  ಚುನಾವಣೆಯೇ ಬಹುದೊಡ್ಡ ಸುದ್ದಿ ‌ಎಂಬಂತೆ ಪ್ರಚಾರ ಮಾಡುತ್ತಾರೆ. ತಮ್ಮ ಎಲ್ಲಾ ‌ಸಮಯ‌ ತಂತ್ರಗಾರಿಕೆ ಹಣ ಎಲ್ಲವೂ ಅದರಲ್ಲಿಯೇ ಕಳೆಯುತ್ತಾರೆ……

ಅತಿವೃಷ್ಟಿ ಮತ್ತು ಅನಾವೃಷ್ಟಿ ಸಮಯದಲ್ಲಿ ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ಒತ್ತಡ ಬೀಳುತ್ತದೆ. ಕೆಲವೊಮ್ಮೆ ಸಾಲ ಮಾಡಿ ಹಣ ನೀಡಬೇಕಾಗುತ್ತದೆ. ಆದ್ದರಿಂದ ಇಂತಹ ಸಮೃದ್ಧ ನೀರಿನ ಸಂಪನ್ಮೂಲಗಳು ಪ್ರಾಕೃತಿಕವಾಗಿ ಸಿಗುತ್ತಿರುವಾಗ ಇದರ ಪರಿಣಾಮಕಾರಿ ಉಪಯೋಗ ಪಡೆಯುವುದು ಆಡಳಿತದ ಜವಾಬ್ದಾರಿ…..

ಆದರೆ, ಏನು ಮಾಡುವುದು ಸರ್ಕಾರ ಎಂಬುದು ರಾಜಕೀಯ ಪಕ್ಷಗಳಿಗೆ ಬಾಡಿಗೆ ಮನೆ ಇದ್ದಂತೆ. ಇರುವಷ್ಟು ದಿನ ಮಾತ್ರ  ತಮಗೆ ಎಷ್ಟು ಅನುಕೂಲವೋ ಅಷ್ಟು ಮಾಡಿಕೊಂಡು ಹೋಗುವಾಗ ಮನೆಯನ್ನು ಕೆಡಿಸಿಯೇ ಹೋಗುತ್ತಾರೆ. ಮುಂದೆ ಮತ್ತೊಬ್ಬರು….

ರಾಜ್ಯ ನಮ್ಮ ಸ್ವಂತ ಆಸ್ತಿ. ಅದನ್ನು ಮುಂದಿನ ತಲೆಮಾರಿಗೂ ಕೂಡ ಇನ್ನೂ ಉತ್ತಮವಾಗಿ ಬಿಟ್ಟು ಹೋಗಬೇಕು ಎಂಬ ಕಾಳಜಿ ಕಾಣುತ್ತಿಲ್ಲ. ಪ್ರತಿ ಮಳೆಗಾಲ ಅಥವಾ ಬರಗಾಲ ಇವರಿಗೆ ಹಣ ಮಾಡುವ ದಂಧೆಯಾಗಿದೆ…..

ಪ್ರಾಕೃತಿಕ ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಪ್ರಕೃತಿಯ ವಿಕೋಪಗಳ ದುಷ್ಪರಿಣಾಮಗಳನ್ನು ಖಂಡಿತ ಕಡಿಮೆ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಪ್ರಕೃತಿಯ ಸಹಜ ವೈಪರೀತ್ಯಗಳನ್ನೇ ಸಹಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಆಗುವುದು ಖಚಿತ…..

ಆದ್ದರಿಂದ, ದಯವಿಟ್ಟು ಸರ್ಕಾರ ಯಾರದೇ ಇರಲಿ, ದೀರ್ಘಕಾಲದ ಶಾಶ್ವತ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಿ ಮುಂದೆ ಹಣ ಸಮಯ ಉಳಿತಾಯ ಮಾಡಲು ಪ್ರಯತ್ನಿಸಿ. ಅಧಿಕಾರ ಎಂಬುದು ನಿಮ್ಮ ಸ್ವಂತ ಆಸ್ತಿಯಲ್ಲ. ಅದು ಒಂದು ಸಾರ್ವಜನಿಕ ಸೇವಾ ವೇದಿಕೆ.

ಅದೇ ಮಾನವೀಯ ಧರ್ಮ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

5 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

20 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

1 day ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

1 day ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

2 days ago