Categories: ಲೇಖನ

ನಿರುದ್ಯೋಗ ಸಮಸ್ಯೆ ತುಂಬಾ ಗಂಭೀರವಾಗಿ, ಬೃಹದಾಕಾರವಾಗಿ ಬೆಳೆಯುತ್ತಿದೆ…..

ಯುವಕರ ದಂಗೆ……

ನಿರುದ್ಯೋಗ ದಂಗೆ,
ಕೆಪಿಎಸ್ಸಿ ಪರೀಕ್ಷಾ ಅಕ್ರಮ, ಎರಡೂವರೆ ಲಕ್ಷ ಸರ್ಕಾರಿ ಉದ್ಯೋಗಗಳ ಭರ್ತಿ ಇಲ್ಲ,
ದೀರ್ಘಕಾಲದಿಂದ ಅತಿಯಾದ ಭ್ರಷ್ಟಾಚಾರ, ನಿಧಾನವಾಗಿ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ,
ಇವುಗಳ ಆಳದಲ್ಲಿ ಅಡಗಿರುವ ಸತ್ಯ, ಮೇಲ್ನೋಟದ ಭ್ರಮೆ, ಆಡಳಿತ ಸುಧಾರಣಾ ಆಯೋಗದ ವೈಫಲ್ಯ
ನಮ್ಮ ಮೌನ…….

ಈ ಎಲ್ಲಾ ಅಂಶಗಳು ಒಂದಕ್ಕೊಂದು ಪೂರಕವಾಗಿ ವ್ಯವಸ್ಥೆಯ ಅಧೋಗತಿಗೆ ಕಾರಣವಾಗಿದೆ.

ನಿರುದ್ಯೋಗ ಸಮಸ್ಯೆ ತುಂಬಾ ಗಂಭೀರವಾಗಿ, ಬೃಹದಾಕಾರವಾಗಿ ಬೆಳೆಯುತ್ತಿದೆ. ಪರೀಕ್ಷಾ ಅಕ್ರಮಗಳು ಎಲ್ಲೇ ಮೀರಿ ಪತ್ತೆ ಹಚ್ಚಲಾಗದಂತೆ ವಿವಿಧ ರೂಪದಲ್ಲಿ ನಡೆಯುತ್ತಿದೆ. ಭ್ರಷ್ಟಾಚಾರ ಎಲ್ಲವನ್ನೂ ಮೀರಿಸುತ್ತಿದೆ. ಖಾಸಗೀಕರಣ ಇಡೀ ವ್ಯವಸ್ಥೆಯನ್ನೇ ನಿಯಂತ್ರಿಸುತ್ತಿದೆ. ಈ ನಡುವೆ ಕೃತಕ ಬುದ್ಧಿಮತ್ತೆ ಉದ್ಯೋಗ ಕಸಿಯುವ ಮತ್ತಷ್ಟು ಭಯ ಹುಟ್ಟಿಸುತ್ತಿದೆ…

ಸರ್ಕಾರ ಆರ್ಥಿಕ ಕೊರೆತೆಯ ನೆಪವೊಡ್ಡಿ ಉದ್ಯೋಗ ಭರ್ತಿಯನ್ನು ಮುಂದೂಡುತ್ತಲೇ ಇದೆ. ದಿನಗೂಲಿ ಮತ್ತು ತಾತ್ಕಾಲಿಕ ಒಪ್ಪಂದದ ಮೇಲೆ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಂಡು ಇಡೀ ಸರ್ಕಾರಿ ಕೆಲಸ ಕಾರ್ಯಗಳ ಕಾರ್ಯದಕ್ಷತೆಯೇ ಕುಸಿಯುವಂತೆ ಮಾಡಿದೆ. ಉದ್ಯೋಗಿಗಳಲ ಅಭದ್ರತೆಯನ್ನೇ ಬಂಡವಾಳ ಮಾಡಿಕೊಂಡು ಆಡಳಿತ ನಡೆಸುತ್ತಿದೆ. ಕಾಲಕಾಲಕ್ಕೆ ಆಡಳಿತ ಸುಧಾರಣಾ ಆಯೋಗ ನೀಡುವ ಸಲಹೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷಾ ಮಾದರಿಯೇ ಅಪಹಾಸ್ಯಕ್ಕೆ ಒಳಗಾಗುತ್ತಿದೆ. ಈಗ ಯೋಚಿಸುವ ಸರದಿ ನಮ್ಮದು…..

ಇಲ್ಲಿ ಅನೇಕ ಆಯಾಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಿದೆ.

ಈ ನಿರುದ್ಯೋಗಿ ಯುವಕರು ಸರ್ಕಾರದ ಉದ್ಯೋಗಕ್ಕಾಗಿಯೇ ಒತ್ತಾಯಿಸುವುದು, ಬದುಕಿಗಾಗಿಯೋ, ಸಂಬಳದ ಭದ್ರತೆಗಾಗಿಯೋ, ಕೆಲಸದ ಆರಾಮ ಮತ್ತು ಸೋಮಾರಿತನಕ್ಕಾಗಿಯೋ, ಭ್ರಷ್ಟ ಹಣಕ್ಕಾಗಿಯೋ ಎಂಬುದು ಒಂದು ಕಡೆಯಾದರೆ, ಇದೇ ಉದ್ಯೋಗಾಕಾಂಕ್ಷಿಗಳು,
ಪ್ರಾಮಾಣಿಕ ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತಾಯಿಸುವವರು ಉದ್ಯೋಗ ಪಡೆದ ನಂತರ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಸಹ ಪ್ರಶ್ನಾರ್ಹವಲ್ಲವೇ……

ಹಾಗೆಯೇ ಸರ್ಕಾರಿ ಉದ್ಯೋಗಗಳಲ್ಲಿ ಇರುವ ಭದ್ರತೆಯಷ್ಟೇ ಉದ್ಯೋಗ ಭದ್ರತೆಯನ್ನು ಖಾಸಗಿ ಸಂಸ್ಥೆಗಳಲ್ಲಿಯೂ ನೀಡುವಂತ ನೀತಿ ನಿಯಮಗಳನ್ನು ಕಠಿಣಗೊಳಿಸಿ ಕಾನೂನು ರೂಪಿಸಬಹುದಲ್ಲವೇ. ಖಾಸಗಿ ಉದ್ಯಮಪತಿಗಳು ತಮಗಿಷ್ಟ ಬಂದಂತೆ ಯುವಕರನ್ನು ಉದ್ಯೋಗಕ್ಕೆ ತೆಗೆದುಕೊಂಡು ಅವರನ್ನು ದುಡಿಸಿ ಇಷ್ಟವಿಲ್ಲದಿದ್ದಾಗ ತೆಗೆದುಹಾಕುವ ನೀತಿ ಏಕಮುಖವಲ್ಲವೇ, ಅದನ್ನು ಸರಿಪಡಿಸಬೇಕಲ್ಲವೇ, ಇಲ್ಲಿನ ಎಲ್ಲಾ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವವರಿಗೆ ಸಾಮಾಜಿಕ ಜವಾಬ್ದಾರಿಯು ಇರಬೇಕಲ್ಲವೇ…..

ಏನೇ ಮಾಡಿದರು ಈಗಿನ ಉದ್ಯೋಗಾಕಾಂಕ್ಷಿಗಳ ಸ್ಪರ್ಧಾತ್ಮಕ ಪರೀಕ್ಷಾ ಅಕ್ರಮ ಸರಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಡೀ ವ್ಯವಸ್ಥೆಯೇ ಕಳ್ಳರ ಸಂತೆಯಾಗಿದೆ. ಇಲ್ಲಿ ಅವರು ಇವರು ಎನ್ನುವ ವ್ಯತ್ಯಾಸವೇ ಇಲ್ಲ…

ಈ ನಿಟ್ಟಿನಲ್ಲಿ ಉದ್ಯೋಗಿಗಳ ಅರ್ಹತೆಯ ಮಾನದಂಡವನ್ನು ಪರೀಕ್ಷೆಗೊಳಪಡಿಸಲು ಆಧುನಿಕ ತಂತ್ರಜ್ಞಾನ ಬಳಸಿ ಇಡೀ ವ್ಯಕ್ತಿತ್ವ ತುಲನೆ ಮಾಡುವ ಹೊಸ ವಿಧಾನವನ್ನು ಕಂಡು ಹಿಡಿಯಲು ಪ್ರಯತ್ನಿಸಬೇಕಲ್ಲವೇ. ಯಾವುದೇ ಕಾರಣಕ್ಕೂ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ತಂತ್ರಜ್ಞಾನ ರೂಪಿಸಿದರೆ ಉತ್ತಮವಲ್ಲವೇ…

ಸರ್ಕಾರಗಳು ಕಾಲಕಾಲಕ್ಕೆ ವಿವಿಧ ಇಲಾಖೆಗಳಲ್ಲಿ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡುವ ಶಿಸ್ತನ್ನು ರೂಪಿಸಿಕೊಂಡಿದ್ದರೆ ಈ ಸಮಸ್ಯೆ ಉದ್ಭವವಾಗುತ್ತಿರಲಿಲ್ಲ. ಹಾಗೆಯೇ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಹೇಗೆ ಕಾರ್ಯಯೋಜನೆ ರೂಪಿಸುತ್ತಾರೋ ಹಾಗೆಯೇ ನಿರುದ್ಯೋಗಗಳಿಗೆ ತಕ್ಕ ಉದ್ಯೋಗ ಒದಗಿಸಲು ಯುದ್ಧೋಪಾದಿಯಲ್ಲಿ ಕಾರ್ಯಯೋನ್ಮುಖರಾಗಬೇಕಲ್ಲವೇ, ಅಲ್ಲಿಯೂ ಸರ್ಕಾರದ ವಿಫಲತೆಯನ್ನು ಕಾಣಬಹುದು…

ಅವಶ್ಯ ಇರುವಷ್ಟು ಉದ್ಯೋಗಿಗಳನ್ನು ನೇಮಿಸಿಕೊಂಡರೆ ಸರ್ಕಾರದ ಕಾರ್ಯದಕ್ಷತೆಯು ಹೆಚ್ಚುತ್ತದೆಯಲ್ಲವೇ , ಉದ್ಯೋಗಿಗಳಿಗೆ ಜೀವನ ಭದ್ರತೆಯೂ, ಸಾರ್ವಜನಿಕರಿಗೆ ಸುಲಭ ಪರಿಹಾರವೂ, ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಯೂ ಇದರಿಂದ ಸಾಧ್ಯವಲ್ಲವೇ..

ಸರ್ಕಾರಗಳೇ ಒಪ್ಪಂದದ ಆಧಾರದ ಮೇಲೆ ನೌಕರರನ್ನು ಶೋಷಿಸಿದರೆ ಇನ್ನು ಅವರನ್ನು ರಕ್ಷಿಸುವವರಾರು. ಅತಿಥಿ ಶಿಕ್ಷಕರೆಂದು ಕಡಿಮೆ ಸಂಬಳಕ್ಕೆ ಅವರನ್ನು ದುಡಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ…

ಸರ್ಕಾರಿ ಆಡಳಿತ ವ್ಯವಸ್ಥೆಗೆ ಕಷ್ಟಪಟ್ಟು ಉದ್ಯೋಗಕ್ಕೆ ಸೇರಿದ ಇದೆ ಮನುಷ್ಯರೇ, ತಮ್ಮ ಹಳೆಯದನ್ನು ಮರೆತು, ನಮ್ಮದೇ ನಿರುದ್ಯೋಗಿಗಳ ಬಗ್ಗೆ ಅಸಡ್ಡೆ ಮನೋಭಾವ ಪ್ರದರ್ಶಿಸುವುದು, ಮತ್ತದೇ ಮಾನವೀಯ ಮೌಲ್ಯಗಳ ಕುಸಿತದ ಪರಿಣಾಮ. ಕಾನೂನು, ನ್ಯಾಯ, ನೀತಿ ಏನೇ ಇರಲಿ, ವ್ಯಕ್ತಿಗಳ ವ್ಯಕ್ತಿತ್ವವೇ ಅದೋಗತಿಗಿಳಿದಿರುವಾಗ, ರಾಜಕಾರಣಿಗಳು ತಮ್ಮ ಕುರ್ಚಿಗಾಗಿಯೇ ಕಿತ್ತಾಡುತ್ತಾ, ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿರುವಾಗ, ಯಾವ ನಿಯಮವನ್ನು, ಯಾವ ಹಕ್ಕುಗಳನ್ನು, ಯಾರ ಬಳಿ ಕೇಳುವುದು…

ಹುಚ್ಚರ ಸಂತೆಯಂತೆ ಇಡೀ ವ್ಯವಸ್ಥೆ ಕಾಣುತ್ತಿದೆ. ಸಾರ್ವಜನಿಕರೇನು ಸಾಚಾಗಳಲ್ಲ. ಅವರೂ ಸ್ವಾರ್ಥಿಗಳಾಗಿ, ಭ್ರಷ್ಟರಾಗಿ, ಕೆಟ್ಟ ಸಮಯದಲ್ಲಿ ಮಾತನಾಡದೆ ಮೌನವಾಗಿ, ತಮ್ಮ
ಸ್ವಹಿತಾಸಕ್ತಿಯನ್ನು ಮಾತ್ರ ಗಮನಿಸುತ್ತಿರುವುದರಿಂದ ಈ ಎಲ್ಲಾ ಸಮಸ್ಯೆಗಳು ಉದ್ಭವವಾಗುತ್ತಿದೆ. ನಿಧಾನವಾಗಿ ಅಸಹಾಯಕತೆ ಆಕ್ರೋಶವಾಗಿ ಯುವಸಮೋಹ ದಃಗೆಯತ್ತ ಮುನ್ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ವಿಶ್ವದ ಅನೇಕ ಘಟನೆಗಳ ನಡೆಯುತ್ತಿವೆ.

ದಯವಿಟ್ಟು ಆಡಳಿತಗಾರರು ಈಗಲೇ ಎಚ್ಚೆತ್ತುಕೊಂಡರೆ ಉತ್ತಮ. ಇಲ್ಲದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವುದು, ಇಡೀ ವ್ಯವಸ್ಥೆಯ ಕುಸಿತ ಕೆಲವೇ ವರ್ಷಗಳಲ್ಲಿ ಆಗಬಹುದು ಎನಿಸುತ್ತದೆ……

ವ್ಯವಸ್ಥೆಯನ್ನು ಉತ್ತಮಪಡಿಸಿಕೊಳ್ಳಲು, ಸಂಪನ್ಮೂಲಗಳನ್ನು ಸಮರ್ಪವಾಗಿ ಬಳಸಲು ಎಲ್ಲಾ ಸಾಧ್ಯತೆ ಮತ್ತು ಅವಕಾಶಗಳಿವೆ. ಆದರೆ ಪ್ರಾಮಾಣಿಕತೆ, ದಕ್ಷತೆ, ಕ್ರಿಯಾತ್ಮಕತೆಯ ಕೊರತೆ ಮಾತ್ರ ಕಾಣುತ್ತಿದೆ. ಅದು ಸರಿ ಹೋದರೆ ಎಲ್ಲವೂ ಸರಿಹೋದೀತು. ಆ ಭರವಸೆಯೊಂದಿಗೆ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಕೆಲವು ಶಿಕ್ಷಕರ ಮತ ಮಾರಾಟ……

ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು…

4 hours ago

ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್…

6 hours ago

ಯುವ ಸಂಸತ್ತು ಸ್ಪರ್ಧೆ: ಕೊಂಗಾಡಿಯಪ್ಪ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ: ರವಿಕುಮಾರ್‌ಗೆ ದ್ವಿತೀಯ ಸ್ಥಾನ; ಜಿಲ್ಲಾ ಮಟ್ಟಕ್ಕೆ ಆಯ್ಕೆ

ದೊಡ್ಡಬಳ್ಳಾಪುರ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಣಕು ಸ್ಪರ್ಧೆಯಲ್ಲಿ ಶ್ರೀ ಕೊಂಗಾಡಿಯಪ್ಪ ಕಾನೂನು…

18 hours ago

ಗೀತಂ ವಿವಿ ಹಾಸ್ಟೆಲ್‌ನಲ್ಲಿ ದುರಂತ: 6ನೇ ಮಹಡಿಯಿಂದ ಬಿದ್ದು ಬಿ.ಟೆಕ್ ವಿದ್ಯಾರ್ಥಿನಿ ಸಾವು

ದೊಡ್ಡಬಳ್ಳಾಪುರ: ತಾಲೂಕಿನ ನಾಗದೇನಹಳ್ಳಿ ಸಮೀಪದ ಗೀತಂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ…

24 hours ago

ಮಳೆ ಕೊರತೆಯ ಹೊಡೆತಕ್ಕೆ ರಾಗಿ ಬೆಳೆ ಸಂಕಷ್ಟ: ರೈತರು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಇಳುವರಿಗೆ ಹೊಡೆತ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮುಂಗಾರು ಮಳೆಯ ಏರುಪೇರಿನಿಂದ ಮಳೆಯಾಶ್ರಿತ ಕೃಷಿ ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಪ್ರಮುಖ ಆಹಾರ ಬೆಳೆಯಾದ ರಾಗಿಯನ್ನು…

1 day ago

ಪೆನ್ ಡ್ರೈವ್…….

ಪೆನ್ ಡ್ರೈವ್....... ನಾಚಿಕೆಯಿಂದ ತಲೆತಗ್ಗಿಸಿ ನಾನೂ ಈ ವಿಷಯವನ್ನೇ ಕುರಿತು ಬರೆಯುವ ಅನಿವಾರ್ಯ ಸೃಷ್ಟಿಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತಾ...... ಬರಗಾಲ -…

1 day ago