ಊಟದ ಸಮಯದಲ್ಲಿ ಶಾಲಾ ಮಕ್ಕಳು ಹೊರಗೆ ಬಂದಿದ್ದು, ಈ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಿಡಿಗೇಡಿಗಳು ಮಕ್ಕಳನ್ನು ಅಪಹರಿಸಲು ಯತ್ನಿಸಿರುವ ಘಟನೆ ತಾಲೂಕಿನ ಚಿಕ್ಕತುಮಕೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
4ನೇ ತರಗತಿಯ ಗೌತಮ್ ಹಾಗೂ 1ನೇ ತರಗತಿಯ ಗುರುದತ್ ಎಂಬ ವಿದ್ಯಾರ್ಥಿಗಳನ್ನ ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಖದೀಮರು. ಗೌತಮ್ ಹಾಗೂ ಗುರುದತ್ ಇಬ್ಬರೂ ಸಹೋದರರು. ಅಪರಿಸುವ ವೇಳೆ ಮಕ್ಕಳು ವಿರೋಧಿಸಿದಾಗ ಅವರನ್ನ ಅಲ್ಲಿಯೇ ಬಿಟ್ಟು ಪರಾರಿಯಾಗಿರುವ ದುಷ್ಕರ್ಮಿಗಳು. ಶಾಲಾ ಮಕ್ಕಳನ್ನ ಅಪಹರಿಸಿದ ಪ್ರಕರಣ ಇಡೀ ಗ್ರಾಮವೇ ಬೆಚ್ಚು ಬೀಳುವಂತೆ ಮಾಡಿದೆ.
ಇಂದು ಚಿಕ್ಕತುಮಕೂರು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಹೊಸ ಸಮವಸ್ತ್ರವನ್ನ ವಿತರಣೆ ಮಾಡಲಾಗಿತ್ತು, ಶಾಲೆಯ ವಿದ್ಯಾರ್ಥಿಗಳಾಗಿದ್ದ ಗೌತಮ್ ಮತ್ತು ಗುರುದತ್ ತಮ್ಮ ಸಮವಸ್ತ್ರವನ್ನ ಮನೆಯಲ್ಲಿ ಇಟ್ಟು ಬರಲು ಮನೆಯತ್ತ ನಡೆದಿದ್ದಾರೆ, ಇದನ್ನೇ ಬಂಡವಾಳ ಮಾಡಿಕೊಂಡು ಅಪಹರಣಕ್ಕೆ ಹೊಂಚು ಹಾಕಿ ಕುಳಿತಿದ್ದ ಕಿಡಿಗೇಡಿಗಳು ಸಹೋದರರನ್ನ ಬಲವಂತವಾಗಿ ಬೈಕ್ ನಲ್ಲಿ ಕೂರಿಸಿಕೊಂಡು ಅಪಹರಣ ಮಾಡಲು ಯತ್ನಸಿದ್ದಾರೆ, ಆದರೆ ಗುರುದತ್ ಬಲವಾಗಿ ವಿರೋಧಿಸಿದ್ದಲ್ಲದೆ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದಾನೆ, ಅದಲ್ಲದೇ ಗುರುದತ್ ಸಹಪಾಠಿಗಳು ಸಹ ಜೋರಾಗಿ ಕೂಗಿಕೊಂಡಾಗ ಇದರಿಂದ ಬೆದರಿದ ಅಪಹರಣಕಾರರು ಮಕ್ಕಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಾರಿಯಾಗುವ ಮುನ್ನ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಕೆಯನ್ನು ನೀಡಿ ಹೋಗಿದ್ದಾರೆ ಎನ್ನಲಾಗಿದೆ.
ಅಂದಹಾಗೇ, ಗುರುದತ್ ಮತ್ತು ಗೌತಮ್ ಸಹೋದರರು ಸಿದ್ದರಾಜು ಹಾಗೂ ಶಾಂತಮ್ಮ ದಂಪತಿ ಮಕ್ಕಳು, ಈ ಸಿದ್ದರಾಜು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿದ್ದಾರೆ.
ಈ ಕುರಿತು ಅಪಹರಣಕ್ಕೆ ಒಳಗಾಗಿದ್ದ ಮಕ್ಕಳ ತಂದೆ ಸಿದ್ದರಾಜು ಮಾತನಾಡಿ, ಶಾಂತಮ್ಮ ಸಹೋದರಿ ಅನುಸೂಯ ಅವರ ಮಗನನ್ನು ನಮ್ಮ ಮನೆಯಲ್ಲೇ ಇಟ್ಟುಕೊಂಡು ಓದಿಸುತ್ತಿದ್ದೇವೆ, ಅನುಸೂಯ ಅವರು ಗಂಡನನ್ನು ಬಿಟ್ಟಿದ್ದು, ಮುನಿರಾಜು ಎಂಬ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಆರೋಪಿಸಿದ್ದಾರೆ.
ಈ ಮುನಿರಾಜುಗೆ ಅನುಸೂಯಳ ಮಗ ನಮ್ಮ ಮನೆಯಲ್ಲಿರುವುದು ಇಷ್ಟ ಇರಲಿಲ್ಲ, ಇದೇ ಕಾರಣಕ್ಕೆ ಇಂದು ಮುನಿರಾಜು ಅನುಸೂಯ ಅವರ ಮಗನನ್ನು ಅಪಹರಣ ಮಾಡಲು ಬಂದಿದ್ದ. ಆದರೆ ಆ ಬಾಲಕ ಸಿಗದ ಹಿನ್ನೆಲೆ ನಮ್ಮ ಮಕ್ಕಳನ್ನಾದರೂ ಅಪಹರಿಸಿ ಬೆದರಿಕೆವೊಡ್ಡಿ ಅನಸೂಯ ಮಗನನ್ನ ಕರೆದುಕೊಂಡು ಹೋಗುವ ಪ್ಲ್ಯಾನ್ ನನ್ನು ಮುನಿರಾಜು ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿದ್ದರಾಜು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…
ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…
ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…
ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…
ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…