ಹಾಸನ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ಮಕ್ಕಳಿದ್ದ ಆಟೋವನ್ನು ನ್ಯೂಟ್ರಲ್ ಮಾಡಿ ಯುವಕ ಹಿಂದೆ ತಳ್ಳಿದ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದ ನೆಹರು ನಗರದಲ್ಲಿ ನಡೆದಿದೆ.
ಕೂಡಲೇ ಓಡಿ ಬಂದ ಚಾಲಕ ಆಟೋವನ್ನು ಹಿಡಿದು ನಿಲ್ಲಿಸಿದ್ದು, ದುರ್ಘಟನೆ ತಪ್ಪಿದೆ. ಶುಕ್ರವಾರ ಬೆಳಗ್ಗೆ ಅಂಗಡಿಯಲ್ಲಿ ದಿನಸಿ ಖರೀದಿಸಲು ಚಾಲಕ ಆಟೋವನ್ನು ರಸ್ತೆ ಬದಿ ನಿಲ್ಲಿಸಿ ತೆರಳಿದ್ದರು. ಆಟೋದಲ್ಲಿ ಮಕ್ಕಳಿದ್ದರು. ರಸ್ತೆ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ಯುವಕ ಬೈಕ್ ನಿಲ್ಲಿಸಿದ್ದನು. ಬೈಕ್ ಹಿಂದೆ ಆಟೋ ಪಾರ್ಕ್ ಮಾಡಲಾಗಿತ್ತು.
ಇದರಿಂದ ಬೈಕ್ ತೆಗೆಯಲಾಗದೆ ವ್ಯಕ್ತಿ ಪರದಾಡಿದ್ದಾನೆ. ಆಗ, ಸಿಟ್ಟಿನಿಂದ ಯುವಕ ಆಟೋ ಬಳಿ ಹೋಗಿ ಮಕ್ಕಳನ್ನು ನೋಡಿಯೂ ನ್ಯೂಟ್ರಲ್ ಮಾಡಿ ಹಿಂದೆ ತಳ್ಳಿದ್ದಾನೆ.
ಆಟೋ ವೇಗವಾಗಿ ಹಿಂದೆ ಚಲಿಸೋದನ್ನು ಕಂಡು ಸ್ಥಳದಲ್ಲಿದ್ದವರು ಗಾಬರಿಯಲ್ಲಿ ಕೂಗಾಡಿದ್ದು, ಕೂಡಲೆ ಸ್ಥಳಕ್ಕೆ ಬಂದ ಚಾಲಕ ಆಟೋ ನಿಲ್ಲಿಸಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೀಡಿಯೋ ಪರಿಶೀಲನೆ ನಡೆಸಿದ ಪೊಲೀಸರು ಯುವಕನನ್ನು ಕರೆಸಿ ವಾರ್ನಿಂಗ್ ನೀಡಿ ಕಳುಹಿಸಿದ್ದಾರೆ.
ವಾಹನ ಸವಾರರು ವಾಹನ ಪಾರ್ಕಿಂಗ್ ವೇಳೆ ನಿಯಮ ಪಾಲನೆ ಮಾಡುವಂತೆಯೂ ಎಚ್ಚರಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…