Categories: ಹಾಸನ

ಯುವಕನ ಮೇಲೆ ಫೆನ್ಸಿಂಗ್ ಕಲ್ಲು ಎತ್ತಾಕಿ ಹತ್ಯೆ: ಹತ್ಯೆ ಬಳಿಕ ಹಂತಕರು ಶವ ಮುಂದೆ ಸೆಲ್ಫಿ ವಿಡಿಯೋ ಮಾಡಿ ವಿಕೃತಿ

ಗಾಂಜಾ ಅಮಲಿನಲ್ಲಿ ಯುವಕನೋರ್ವನ ತಲೆ ಮೇಲೆ ಕೂಚ ಕಲ್ಲು ಎತ್ತು ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ನಡೆದಿದೆ..

ಹಾಸನ ತಾಲೂಕಿನ ಹೂವಿನಹಳ್ಳಿ ಕಾವಲು ಗ್ರಾಮದ ನಿವಾಸಿ ಮೆಕ್ಯಾನಿಕ್ ಕೀರ್ತಿ(22) ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಹಂತಕರು ಶವ ಮುಂದೆ ಸೆಲ್ಫಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ.

ನಾವೇ ಇವನನ್ನು ಹೊಡೆದು ಕೊಂದಿದ್ದೇವೆಂದು ಶವದೊಂದಿಗೆ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಫುಲ್ ವೈರಲ್ ಆಗಿದೆ…

ಸದ್ಯ ವೈರಲ್ ಆದ ವಿಡಿಯೋವನ್ನು ಆಧರಿಸಿ ಸ್ಥಳಕ್ಕೆ ಶ್ವಾನದಳ, ಎ‌ಎಸ್‌ಪಿ ಭೇಟಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಆತ ವೃತ್ತಿಯಲ್ಲಿ ವ್ಯಕ್ಯಾನಿಕ್ ಆಗಿದ್ದ. ಕೆಲಸ ಮಾಡುತ್ತಾ ತನ್ನ ಪಾಡಿಗೆ ತಾನಿದ್ದವನು. ರೀಲ್ಸ್ ಮಾಡುತ್ತಾ ಸ್ನೇಹಿತರ ಜೊತೆ ಸುತ್ತಾಡ್ತಾ ಇದ್ದವನು ನಿನ್ನೆ (ಡಿಸೆಂಬರ್ 08) ಎಷ್ಟೊತ್ತಾದ್ರು ಮನೆಗೆ ಬಂದಿಲ್ಲ ಏನಾಯ್ತು ಎಂದು ಎಲ್ಲರೂ ಆತಂಕದಲ್ಲಿರುವಾಗ ಬೆಳಿಗ್ಗೆ ವೀಡಿಯೋ ವೊಂದು ವೈರಲ್ ಆಗಿದೆ. ಕ್ರೂರಿಯೊಬ್ಬ ಶವದ ಮುಂದೆ ಸೆಲ್ಪೀ ವೀಡಿಯೋ ಮಾಡಿ ನಾವು ಕೊಲೆ ಮಾಡಿದಿವಿ ಸಾಯಿಸಿದ್ದೇವೆ ಎಂದು ಹೇಳುತ್ತ ಕ್ರೌರ್ಯ ಮೆರೆದಿದ್ದಾನೆ.

ಈ ವೀಡಿಯೋ ಜಾಡು ಹಿಡಿದು ತನಿಖೆಗಿಳಿದ ಪೊಲೀಸರಿಗೆ ಕೊಲೆಯಾಗಿದ್ದು ಓರ್ವ ಮೆಕ್ಯಾನಿಕ್. ಕೊಲೆ ಮಾಡಿದ್ದು ಆಟೋ ಚಾಲಕ ಎನ್ನುವುದು ಗೊತ್ತಾಗಿದೆ. ಒಟ್ಟಿಗೆ ಹೋಗಿ ಪಾರ್ಟಿ ಮಾಡಿ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.

ಕೊಲೆ ಮಾಡಿದ ಬಳಿಕ ಮನುಷ್ಯತ್ವ ಮರೆತ ಕ್ರೂರಿಯೊಬ್ಬ ನಾವು ಹೊಡೆದಿದ್ದೇವೆ. ನಾವು ಇವನನ್ನ ಸಾಯಿಸಿದ್ದೇವೆ ಎಂದು ವಿಕೃತ ಆನಂದಪಟ್ಟಿದ್ದಾರೆ. ಇನ್ನು ಮತ್ತೊಂದು ವೀಡಿಯೋದಲ್ಲಿ ಹೇಯ್ ನಿಂತ್ಕೊಳ್ರೋ ನಾವು ದೊಡ್ಡದಾಗಿ ಬೆಳೆದು, ನಾವೂ ದೊಡ್ಡವರಾದ್ವಿ ಎಂದು ಹೇಳುತ್ತಾ ಕೊಲೆಯನ್ನ ಸಂಭ್ರಮಿಸಿದ್ದಾರೆ. ಕೊಲೆ ಮಾಡಿ ನಾವು ದೊಡ್ಡವರಾದ್ವಿ ನಾವೂ ಬೆಳೆದ್ವಿ ಎಂದು ಹೇಳುತ್ತಾ ಅಟ್ಟಹಾಸ ಮೆರೆದಿದ್ದಾರೆ. ಗಾಂಜಾ ಅಮಲಿನಲ್ಲಿ ಪುಂಡರ ರಾಕ್ಷಸೀ ಕೃತ್ಯ ಎಸಗಿದ್ದಾರೆ. ಹೀಗಾಗಿ ಈ ಹತ್ಯೆ ವಿಡಿಯೋ ಹಾಸನದಾದ್ಯಂತ ವೈರಲ್ ಆಗಿದ್ದು, ಜನರನ್ನ ಬೆಚ್ಚಿಬೀಳೀಸಿದೆ.

ಅಷ್ಟಕ್ಕೂ ವೀಡಿಯೋ ಮಾಡಿರುವುದು ಉಲ್ಲಾಸ್ ಎಂದು ತಿಳಿದುಬಂದಿದೆ. ಆಟೋ ಚಾಲಕನಾಗಿರುವ ಈತ ಹಾಸನ ಜಿಲ್ಲೆ ಆಲೂರು ಮೂಲದವನು ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಉಲ್ಲಾಸ್ ಹಾಗು ಕೀರ್ತಿ ಎಲ್ಲರೂ ಪರಿಚಿತರಾಗಿದ್ದು, ನಿನ್ನೆ ಕೂಡ ಒಟ್ಟಿಗೆ ಇದ್ದವರು ಒಟ್ಟಿಗೆ ಪಾರ್ಟಿ ಮಾಡಿದ್ದಾರೆ. ಆದ್ರೆ ಬಳಿಕ ಏನಾಯ್ತೋ ಏನೋ ಜೊತೆಗೆ ಬಂಧವನನ್ನ ಬಡಿದು ಕೊಂದು ಶವದ ಎದುರು ವೀಡಿಯೋ ಮಾಡಿದ್ದಾರೆ. ಕೊಲೆ ಮಾಡಿ ವೀಡಿಯೋ ಮಾಡಿರುವ ಪಾತಕಿ ಉಲ್ಲಾಸ್ ಒಂದು ವೀಡಿಯೋದಲ್ಲಿ ತಾನೊಬ್ಬನೇ ಇದ್ದರೆ ಇನ್ನೊಂದು ವೀಡಿಯೋದಲ್ಲಿ ಮತ್ತಿಬ್ಬರು ಇರೋದನ್ನ ತೋರಿಸಿದ್ದಾನೆ. ಜೊತೆಗೇ ತೆರಳಿದ್ದ ಯುವಕರ ಗುಂಪಿನ ನಡುವೆ ಗಲಾಟೆ ನಡೆದು ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದ್ದು, ಹಾಸನ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕೊಲೆಯ ಸೆಲ್ಫಿ ವೀಡಿಯೋ ವೈರಲ್ ಆಗುತ್ತಲೆ ಅಲರ್ಟ್ ಆದ ಪೊಲೀಸರು ವೀಡಿಯೋ ಜಾಡು ಹಿಡಿದು ಪರಿಶೀಲನೆ ನಡಸಿದಾಗ ಶವ ಬಿಟ್ಟಗೌಡನಹಳ್ಳಿ ಬಳಿ ಇರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅದಿಕಾರಿಗಳು, ಸ್ಥಳಕ್ಕೆ ಸೂಕೊ ಟೀಂ, ಶ್ವಾನದಳ, ಬೆರಳಚ್ಚು ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಹಾಸನ ನಗರ ಠಾಣೆ ಪೊಲೀಸರು ಉಲ್ಲಾಸ್​​ ಬಂಧನಕ್ಕೆ ಬಲೆ ಬೀಸಿದ್ದಾರೆ.

Ramesh Babu

Journalist

Recent Posts

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

53 minutes ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

2 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

15 hours ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

15 hours ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…

15 hours ago

ಬಾಶೆಟ್ಟಿಹಳ್ಳಿ ಪಪಂಗೆ ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸರ್ಕಾರವು ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ…

16 hours ago