
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಕಾವಲಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಮಂಗಳವಾರ ಸಂಜೆ ಸಿಡಿಲು ಬಡಿದ ಪರಿಣಾಮ ಎರಡು ಸೀಮೆ ಹಸುಗಳು ಸಾವನ್ನಪ್ಪಿವೆ.
ಗಂಟಿಗಾನಹಳ್ಳಿ ಗ್ರಾಮದ ಕೀರ್ತಿ ಕುಮಾರ್ ಅವರಿಗೆ ಸೇರಿದ ಹಸುಗಳನ್ನು ತೋಟದಲ್ಲಿರುವ ಮರದ ಕೆಳಗೆ ಕಟ್ಟಿ ಇಡಲಾಗಿದ್ದ ವೇಳೆ, ಸಂಜೆ ಸುಮಾರು 5.15ರ ಹೊತ್ತಿಗೆ ಆಕಸ್ಮಿಕವಾಗಿ ಸಿಡಿಲು ಬಡಿದಿದೆ. ಇದರ ಪರಿಣಾಮವಾಗಿ ಸ್ಥಳದಲ್ಲೇ ಎರಡು ಹಸುಗಳು ಮೃತಪಟ್ಟಿವೆ ಎನ್ನಲಾಗಿದೆ.
ಈ ಘಟನೆ ಸ್ಥಳೀಯ ರೈತರಿಗೆ ಆತಂಕ ಮೂಡಿಸಿದ್ದು, ಮಳೆಗಾಲದಲ್ಲಿ ಪಶುಗಳನ್ನು ಮರಗಳ ಕೆಳಗೆ ಕಟ್ಟದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.