Categories: ಲೇಖನ

ಭಾರತ ಸರ್ಕಾರದ ಅರ್ಥ ವ್ಯವಸ್ಥೆ ಅಂಕಿಅಂಶ

ಭಾರತದ ಒಟ್ಟು ವಿಸ್ತೀರ್ಣ ಸುಮಾರು 33 ಲಕ್ಷ ಚದರ ಕಿಲೋ ಮೀಟರ್ ಗಳು, ಭಾರತದ ಒಟ್ಟು ಜನಸಂಖ್ಯೆ ಸುಮಾರು 143 ಕೋಟಿ, ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 49 ಲಕ್ಷ ಕೋಟಿ, ಭಾರತದ ಒಟ್ಟು ಆದಾಯ ಸುಮಾರು 32 ಲಕ್ಷ ಕೋಟಿ, ಭಾರತದ ಒಟ್ಟು ಸಾಲ 182 ಲಕ್ಷ ಕೋಟಿ, ಭಾರತ ಕಟ್ಟುತ್ತಿರುವ ಸಾಲದ ಮೇಲಿನ ಬಡ್ಡಿ ಸುಮಾರು 11.5 ಲಕ್ಷ ಕೋಟಿ, ಭಾರತದ ಒಟ್ಟು ಆಂತರಿಕ ಉತ್ಪನ್ನ ಸುಮಾರು 298 ಲಕ್ಷ ಕೋಟಿ…….

ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾಗ ಗಮನಿಸಿದ ಕುತೂಹಲಕರ ಅಂಶವನ್ನು, ನಮ್ಮ ದೇಶದ ಜನರ ಆರ್ಥಿಕ ಪರಿಸ್ಥಿತಿ ತಿಳಿಯಲು ಸಹಾಯ ಆಗಬಹುದು ಎಂದು ಇಲ್ಲಿ ಬರೆಯುತ್ತಿದ್ದೇನೆ.

ಇದರ ಆಧಾರದ ಮೇಲೆ ನಾವುಗಳು ಬಡವರೋ, ಶ್ರೀಮಂತರೋ ನೀವೇ ನಿರ್ಧರಿಸಿ. ಅಲ್ಲದೆ ಭಾರತದಲ್ಲಿ ಬಹುಶಃ ಲೆಕ್ಕಕ್ಕೆ ಸಿಗದ 3 – 4 ಕೋಟಿಗೂ ಹೆಚ್ಚು ಜನ ಇದ್ದಾರೆ ಮತ್ತು ಅಂಬಾನಿ, ಅದಾನಿ, ಟಾಟಾ, ಬಿರ್ಲಾ, ಅಜೀಂ ಪ್ರೇಮ್ಜಿ ಮುಂತಾದ ಬಹುದೊಡ್ಡ ಶ್ರೀಮಂತರು ಮತ್ತು ಊಟಕ್ಕೂ ಪರದಾಡುವ ಅನೇಕ ಬಡವರ ನಡುವಿನ ಅಂತರ ತುಂಬಾ ಇದೆ.

ಸುಮ್ಮನೆ ಭ್ರಮಾಲೋಕದಲ್ಲಿ ಯಾರೋ ಅಂಕಣಕಾರರು, ಭಾಷಣಕಾರರು, ಪ್ರವಚನಕಾರರುಗಳು ಹೇಳುವುದು ಭಾರತ ವಿಶ್ವದ ಬಲಿಷ್ಠ ದೇಶ ಎಂದು.

ವೈಯಕ್ತಿಕವಾಗಿ ಹೇಳಬೇಕೆಂದರೆ ಈ ಅಂಕಿಅಂಶಗಳಿಗಿಂತ ಹೆಚ್ಚಿನ ಬಡತನ ಭಾರತದಲ್ಲಿ ಇದೆ.

ಈ ಅಂಶಗಳನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಸಾಗಬೇಕಾದ ಹಾದಿ, ನಮ್ಮ ಆದ್ಯತಾ ವಲಯಗಳು, ಅದಕ್ಕಾಗಿ ನಾವು ಪಡಬೇಕಾಗಿರುವ ಶ್ರಮ, ನಮ್ಮ ಜವಾಬ್ದಾರಿ ಎಲ್ಲವೂ ಸ್ಪಷ್ಟವಾಗುತ್ತದೆ.

ಚುನಾವಣೆ ಗೆಲ್ಲುವುದೇ ಒಂದು ದೊಡ್ಡ ಸಾಧನೆ ಎಂದು ನಮ್ಮ ರಾಜಕೀಯ ಪಕ್ಷಗಳು ಭಾವಿಸುವುದಾದರೆ ನಮ್ಮ ನಿಜವಾದ ಅಭಿವೃದ್ಧಿ ಕನಸೇ ಆಗಬಹುದು.

ಯಾರೋ ಎಲ್ಲಿಂದಲೋ ನೀಡುವ ಅಂಕಿ ಅಂಶಗಳಿಗಿಂತ ನಾವು ನಮ್ಮ ಸುತ್ತಮುತ್ತ ಗಮನಿಸುವ ಸಾಮಾಜಿಕ ಆರ್ಥಿಕ ಪರಿಸ್ಥಿತಿಯೇ ನಿಜವಾದ ವರದಿಗಳು. ಆ ಪ್ರಕಾರ ಎಷ್ಟೋ ಜನ ಇನ್ನೂ ಅಪೌಷ್ಟಿಕತೆಯಿಂದ ನರಳುತ್ತಿರುವುದನ್ನು ಕಾಣುತ್ತೇವೆ. ಏಕೆಂದರೆ ಅವರು ಇಷ್ಟಪಟ್ಟ ಊಟ, ಬಟ್ಟೆ, ವಸತಿ ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರ ಜೀವನ ಮಟ್ಟದಲ್ಲಿ ನೋಡಿದಾಗ ತುಂಬಾ ಕಳಪೆಯಾಗಿದೆ. ಭ್ರಷ್ಟಾಚಾರ, ಜಾತಿ ಪದ್ಧತಿ, ನಾಗರೀಕ ಪ್ರಜ್ಞೆ ಸಹ ಸಮಾಧಾನಕರ ಮಟ್ಟದಲ್ಲಿಲ್ಲ. ಒಟ್ಟಿನಲ್ಲಿ ಸಾಕಷ್ಟು ಬದಲಾವಣೆಗಳ ಅವಶ್ಯಕತೆ ಇದೆ…..

ವಿಶ್ವದಲ್ಲಿ ನಮಗಿಂತ ಹಿಂದುಳಿದ ಅನೇಕ ದೇಶಗಳು ಇವೆ, ಹಾಗೆಯೇ ನಮಗಿಂತ ಬಹಳಷ್ಟು ಮುಂದುವರಿದ ದೇಶಗಳು ಇವೆ, ಹೋಲಿಕೆ ಮಾಡಿಕೊಂಡು ಖುಷಿಪಡಬಹುದು, ಸಮಾಧಾನವಾಗಬಹುದು, ಅಥವಾ ಬೇಸರವೂ ಆಗಬಹುದು. ಆದರೆ ಅದೆಲ್ಲವನ್ನು ಮೀರಿ ನಮ್ಮನ್ನು ನಾವು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು…..

ಸಣ್ಣ ಪ್ರಮಾಣದಲ್ಲೇ ಆದರೂ ನಾವು ಬದಲಾವಣೆಯತ್ತ ಸಾಗೋಣ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಹೃದಯವಿದ್ರಾವಕ ಘಟನೆ: ಒಂದೇ ದಿನ ಪತಿ-ಪತ್ನಿ ದಾರುಣ ಸಾವು

ಬೆಳಗಾವಿಯಲ್ಲಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಒಂದೇ ದಿನ ಪತಿ-ಪತ್ನಿ ದಾರುಣ ಸಾವನ್ನಪ್ಪಿದ್ದಾರೆ. ಅರವಳ್ಳಿ…

2 hours ago

ಮಾರಕಾಸ್ತ್ರಗಳಿಂದ ಶಿಕ್ಷಕಿಯ ಕ್ರೂರ ಹತ್ಯೆ: ಕೊಲೆ ಬಳಿಕ ದುಷ್ಕರ್ಮಿಗಳಿಂದ ಶವಕ್ಕೆ ಬೆಂಕಿ

ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ. ಕಮಲಾಪುರ ತಾಲೂಕಿನ…

2 hours ago

ಲಾಕಪ್ ಡೆತ್ ಮತ್ತು ಮರಣದಂಡನೆ….

ಸುಮಾರು ಆರು ವರ್ಷಗಳ ಹಿಂದೆ ಅಂದರೆ 2020ರಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದ ಅಮಾನುಷ ಲಾಕಪ್ ಡೆತ್ ಬಗ್ಗೆ ಬರೆದ…

4 hours ago

ತಂದೆ-ಮಗನ ಲಾಕಪ್ ಡೆತ್ ಕೇಸ್; ತಮಿಳುನಾಡಿನ 9 ಪೊಲೀಸರಿಗೆ ಗಲ್ಲು ಶಿಕ್ಷೆ

2020ರಲ್ಲಿ ತಮಿಳುನಾಡಿನಲ್ಲಿ ನಡೆದ ಸಾತಂಕುಲಂ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ…

13 hours ago

ಇಂಧನ ತೈಲ ಮತ್ತು ಅನಿಲ ಪೂರೈಕೆ ಸಮಸ್ಯೆ – ರಾಜ್ಯದ ಜನತೆಗೆ ತೀವ್ರ ಸಂಕಷ್ಟ- ಸಚಿವ ಕೆ.ಎಚ್ ಮುನಿಯಪ್ಪ ಪ್ರತಿಕ್ರಿಯೆ

ರಾಜ್ಯದಲ್ಲಿ ಇಂಧನ ತೈಲ ಮತ್ತು ಅನಿಲ ಪೂರೈಕೆಯ ಸಮಸ್ಯೆ ಗಂಭೀರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ಆಹಾರ, ನಾಗರಿಕ ಸರಬರಾಜು ಮತ್ತು…

14 hours ago

ಆಟೋ ಎಲ್‌ಪಿಜಿಗಾಗಿ ಸಾಲುಗಟ್ಟಿ ನಿಂತ ನೂರಾರು ಆಟೋಗಳು

ಆಟೋ ಎಲ್‌ಪಿಜಿಗಾಗಿ ಡಿಕ್ರಾಸ್ ರಸ್ತೆಯ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲುಗಟ್ಟಿ ನಿಂತಿವೆ. ಆಟೋ ಎಲ್ಪಿಜಿ ಇಲ್ಲದೆ…

16 hours ago