ಭಾರತದಲ್ಲಿ ಮರುಬಳಕೆ ಮಾಡಿದ ಪಾಲಿಮರ್‌ಗಳನ್ನು ಬಳಸಿದ ಪ್ಯಾಕೇಜಿಂಗ್ ಪರಿಚಯಿಸಿದ ಟೆಟ್ರಾ ಪ್ಯಾಕ್

ಬೆಂಗಳೂರು: ಪ್ಲಾಸ್ಟಿಕ್‌ನನ್ನು ಮರುಬಳಕೆ ಮಾಡುವತ್ತ ಗಮನಾರ್ಹ ಹೆಜ್ಜೆ ಇಟ್ಟಿರುವ ಟೆಟ್ರಾಪ್ಯಾಕ್‌, ತನ್ನೆಲ್ಲಾ ಪ್ಯಾಕೇಜಿಂಗ್‌ನನ್ನು ಮರುಬಳಕೆ ಮಾಡಿದ ಪಾಲಿಮರ್‌ ಒಳಗೊಂಡ ಟೆಟ್ರಾಪ್ಯಾಕ್‌ನನ್ನು ಪರಿಚಯಿಸಿದೆ.

ಆಹಾರ ಮತ್ತು ಪಾನೀಯ ಪ್ಯಾಕೇಜಿಂಗ್‌ ಉದ್ಯಮದಲ್ಲಿ ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಬಳಕೆ ಮಾಡಿದ ಮೊದಲ ಸಂಸ್ಥೆಯಾಗಿದೆ. ಇದರ ಕಾರ್ಟನ್ ಪ್ಯಾಕೇಜ್‌ಗಳಲ್ಲಿ ಮರುಬಳಕೆ ಮಾಡಿದ ಪಾಲಿಮರ್‌ಗಳಿದ್ದು, ಇದನ್ನು ಸುಸ್ಥಿರತೆ ಪ್ರಮಾಣೀಕರಣ ಸಿಸ್ಟಮ್‌ ಆಗಿರುವ ಐಎಸ್‌ಸಿಸಿ (ಅಂತಾರಾಷ್ಟ್ರೀಯ ಪರಿಸರ ಸ್ನೇಹಿ ಮತ್ತು ಕಾರ್ಬನ್ ಪ್ರಮಾಣೀಕರಣ) ಪ್ರಮಾಣೀಕರಿಸಿದೆ. ಪ್ಯಾಕೇಜಿಂಗ್‌ನಲ್ಲಿ ಶೇ. 5ರಷ್ಟು ಪ್ರಮಾಣಿತ ಮರುಬಳಕೆ ಮಾಡಿದ ಪಾಲಿಮರ್‌ ಇರಲಿದೆ. ಇದನ್ನು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮ 2022 ರ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ನಿಗದಿಪಡಿಸಿದ್ದು, ಇದು ಇದೇ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

ಪರಿಸರ ರಕ್ಷಣೆಯಲ್ಲಿ ಟೆಟ್ರಾ ಪ್ಯಾಕ್ ಬದ್ಧತೆ ಹೊಂದಿದ್ದು, ಪಳೆಯುಳಿಕೆ ಆಧರಿತ ಸಂಪನ್ಮೂಲಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಸಾಮಗ್ರಿಗಳನ್ನು ಮರುಬಳಕೆ ಮಾಡಿಕೊಳ್ಳುವುದರ ಮೇಲೆ ಇದು ಹೆಚ್ಚು ಗಮನ ಕೇಂದ್ರೀಕರಿಸಿದೆ. ಇದರ ಜೊತೆಗೆ, ಕಚ್ಚಾ ಸಾಮಗ್ರಿಗಳನ್ನು ಖರೀದಿ ಮಾಡುವಲ್ಲಿ ಜವಾಬ್ದಾರಿಯುತವಾಗಿ ಟೆಟ್ರಾ ಪ್ಯಾಕ್ ವರ್ತಿಸುತ್ತದೆ. ಮರುಬಳಕೆಯನ್ನು ಹೆಚ್ಚಿಸಲು ಮತ್ತು ಕಸವನ್ನು ಕಡಿಮೆ ಮಾಡಲು ಪ್ಯಾಕೇಜ್‌ಗಳನ್ನು ವಿನ್ಯಾಸ ಮಾಡುವುದು ಮತ್ತು ಪರಿಣಾಮಕಾರಿಯಾಗಿ ಕಲೆಕ್ಷನ್ ಮತ್ತು ರಿಸೈಕ್ಲಿಂಗ್‌ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಉತ್ತಮ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಟೆಟ್ರಾ ಪ್ಯಾಕ್ ಬದ್ಧವಾಗಿದೆ.

ಟೆಟ್ರಾ ಪ್ಯಾಕ್‌ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಕ್ಯಾಸಿಯೋ ಸೈಮೋಸ್ ಮಾತನಾಡಿ, “ಭಾರತದಲ್ಲಿ ಶೇ.5ರಷ್ಟು ಪ್ರಮಾಣಿತ ಮರುಬಳಕೆ ಮಾಡಿದ ಪಾಲಿಮರ್‌ಅನ್ನು ಹೊಂದಿರುವ ಪ್ಯಾಕೇಜಿಂಗ್ ಸಾಮಗ್ರಿಯನ್ನು ಪರಿಚಯಿಸುವುದರಲ್ಲಿ ನಾವು ಪ್ರಥಮ ಹೆಜ್ಜೆ ಇಟ್ಟಿದ್ದೇವೆ. ಈ ಮರುಬಳಕೆ ಮಾಡಿದ ಕಂಟೆಂಟ್ ಅನ್ನು ಭಾರತದಿಂದಲೇ ಪಡೆಯಲಾಗಿದೆ. ಪುಣೆಯಲ್ಲಿ ಚಕನ್‌ನಲ್ಲಿರುವ ಐಎಸ್‌ಸಿಸಿ ಪ್ರಮಾಣಿತ ಫ್ಯಾಕ್ಟರಿಯಲ್ಲಿ ಪ್ಯಾಕೇಜಿಂಗ್ ಸಾಮಗ್ರಿಯನ್ನು ತಯಾರಿಸಲಾಗಿದೆ.

ಸರ್ಕ್ಯುಲಾರಿಟಿಯನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯದ ಬದ್ಧತೆಯನ್ನು ನಾವು ಮೆಚ್ಚುತ್ತೇವೆ. 2025 ರಲ್ಲೇ ಈ ನಿಯಮಾವಳಿಯನ್ನು ಪರಿಚಯಿಸುವ ಮೂಲಕ ವಿಶ್ವದ ಪ್ರಥಮ ದೇಶ ಭಾರತ ಆಗುತ್ತಿರುವುದಕ್ಕೆ ನಮಗೆ ಹೆಮ್ಮೆಯಿದೆ. ಆಹಾರ ಮತ್ತು ಪಾನೀಯ ಉದ್ಯಮದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಇನ್ನಷ್ಟು ಸರ್ಕ್ಯುಲರ್ ಪರಿಹಾರಕ್ಕೆ ಪರಿವರ್ತನೆಯಾಗುವುದಕ್ಕೆ ನಮ್ಮೆಲ್ಲರಿಗೆ ಒಂದು ಅವಕಾಶವಾಗಿದೆ ಎಂದರು. ಐಎಸ್‌ಸಿಸಿ (ಇಂಟರ್ನ್ಯಾಷನಲ್ ಸಸ್ಟೇನಬಿಲಿಟಿ & ಕಾರ್ಬನ್ ಸರ್ಟಿಫಿಕೇಶನ್) ಸರ್ಟಿಫೈಡ್ ಮರುಬಳಕೆ ಮಾಡಿದ ಪಾಲಿಮರ್‌ಗಳನ್ನು ಖರೀದಿ ಮಾಡಿ, ಐಎಸ್‌ಸಿಸಿ ಮಾಸ್ ಬ್ಯಾಲೆನ್ಸ್ ಅಟ್ರಿಬ್ಯುಶನ್ ಮೆಥಡ್‌ಗೆ ಅನುಗುಣವಾಗಿ ನಿಯೋಜಿಸಲಾಗುತ್ತದೆ. ಕೆಮಿಕಲ್ ರಿಸೈಕ್ಲಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಿದ ಮತ್ತು ಮರುಬಳಕೆ ಮಾಡಲಾಗದ ಸಾಮಗ್ರಿಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಅಲ್ಲದೆ, ಟೆಟ್ರಾ ಪ್ಯಾಕ್ ಪೂರೈಕೆ ಸರಣಿಯಾದ್ಯಂತ ಮರುಬಳಕೆ ಮಾಡಿದ ಸಾಮಗ್ರಿಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ. ಈ ರಾಸಾಯನಿಕವಾಗಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ಗಳು ವರ್ಜಿನ್ ಪಾಲಿಮರ್‌ಗಳಂತೆಯೇ ಜಾಗತಿಕ ಆಹಾರ ಸಂಪರ್ಕ ನಿಯಮಗಳನ್ನು ಅನುಸರಿಸುತ್ತವೆ. ಗುಣಮಟ್ಟದ ದೃಷ್ಟಿಯಿಂದ, ರಾಸಾಯನಿಕವನ್ನು ಬಳಸಿ ಮರುಬಳಕೆ ಮಾಡಿದ ಪ್ಲಾಸ್ಟಿಕ್‌ಗಳು ಪಳೆಯುಳಿಕೆ ಆಧರಿತ ಪ್ಲಾಸ್ಟಿಕ್‌ಗಳಿಗೆ ಸಮಾನವಾಗಿವೆ.

ಮರುಬಳಕೆ ಮಾಡಿದ ಸಾಮಗ್ರಿಯನ್ನು ಬಳಸಿದರೆ, ಮರುಬಳಕೆ ದರವನ್ನು ಹೆಚ್ಚಳ ಮಾಡಬಹುದು ಮತ್ತು ಮರುಬಳಕೆಯನ್ನು ಹೆಚ್ಚು ಆರ್ಥಿಕವಾಗಿ ಅನುಕೂಲಕರವನ್ನಾಗಿಸಬಹುದು. ಮರುಬಳಕೆ ಮಾಡಿದ ಕಂಟೆಂಟ್ ಭಾರತ ಸೇರಿದಂತೆ ವಿಶ್ವದ ಎಲ್ಲೆಡೆ ಕಡ್ಡಾಯವಾಗಿದ್ದು, ಉತ್ಪಾದಕರು ಮರುಬಳಕೆ ಮಾಡಿದ ಸಾಮಗ್ರಿಯನ್ನು ಖರೀದಿ ಮಾಡುವುದಕ್ಕೆ ಪ್ರೋತ್ಸಾಹಿಸುತ್ತದೆ. ಇದರಿಂದ, ಬೇಡಿಕೆ ಹೆಚ್ಚಳವಾಗುತ್ತದೆ ಮತ್ತು ಈ ಮೂಲಕ ವಿಸ್ತರಿಸಿದ ಆಫರ್ ಅನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳದರು.

Ramesh Babu

Journalist

Recent Posts

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಒಂದೇ ದಿನ ಇಬ್ಬರು ಯುವಕರು ಆತ್ಮಹತ್ಯೆ….!

ಮದುವೆ ಮಾಡಿಕೊಳ್ಳಲು ಹೆಣ್ಣು ಸಿಗುತ್ತಿಲ್ಲವೆಂದು ಮನನೊಂದು ಒಂದೇ ದಿನ ರಾಜ್ಯದ ಇಬ್ಬರು ಯುವಕರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆಗಳು ಚಿಕ್ಕಮಗಳೂರು…

34 minutes ago

ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ- ಸಿಎಂ ಸಿದ್ದರಾಮಯ್ಯ

ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ…

45 minutes ago

ತೂಬಗೆರೆಯಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ: ಗ್ರಾಮೀಣ ಜನರ ಆರೋಗ್ಯ ಬಹಳ ಮುಖ್ಯ- ಡಾ. ಜ್ಞಾನೇಶ್ವರಿ

ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ಅತ್ಯಂತ ಅವಶ್ಯಕ. ಇಂತಹ ಶಿಬಿರಗಳು ಕಾಲಕಾಲಕ್ಕೆ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಲೇ…

2 hours ago

ಜಾತ್ರೆಯಲ್ಲಿ ವ್ಯಕ್ತಿಯ ಭೀಕರ ಕೊಲೆ

ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಂಗನಗೌಡ ಪಾಟೀಲ್…

8 hours ago

ಲಾರಿ-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು

ಲಾರಿ-ಕಾರು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕು ರಾಜಾಪುರ ಬಳಿ ನಡೆದಿದೆ. ಬೆಂಗಳೂರು…

10 hours ago

ಹಸಿವಿನ ಔಷಧಿ ಮತ್ತು ಮತದಾನ…..

ಇತ್ತೀಚೆಗೆ Social Media ಗಳಲ್ಲಿ ಅತ್ಯಂತ ಗಮನಸೆಳೆದ ಮನಮಿಡಿಯುವ ಚಿತ್ರ...... ಒಬ್ಬ ಬಾಲಕ ಡಾಕ್ಟರ್ ಬಳಿ " ಹಸಿವು ಹೋಗಲಾಡಿಸಲು…

12 hours ago