
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆದಿದ್ದು, ಶೇಕಡ 95.94 ರಷ್ಟು ಮತದಾನವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕುಗಳಲ್ಲಿನ ಒಟ್ಟು 6 ಮತದಾನ ಕೇಂದ್ರಗಳಲ್ಲಿ ಮತದಾನ ನಡೆದಿದ್ದು ದೊಡ್ಡಬಳ್ಳಾಪುರ ಟೌನ್- 97.29%, ದೊಡ್ಡಬೆಳವಂಗಲ ಹೋಬಳಿ-99.32%, ದೇವನಹಳ್ಳಿ ಟೌನ್- 97.77%, ಹೊಸಕೋಟೆ ಟೌನ್-94.17%, ನೆಲಮಂಗಲ ಟೌನ್-97.96%, ಸೋಂಪುರ ಹೋಬಳಿ-95.07% ರಷ್ಟು ಮತದಾನವಾಗಿದೆ.
ಮತದಾರರ ಪಟ್ಟಿಯಲ್ಲಿನ ಒಟ್ಟು 2863 ಶಿಕ್ಷಕ ಮತದಾರರ ಪೈಕಿ 1341 ಪುರುಷ ಹಾಗೂ 1398 ಮಹಿಳಾ ಶಿಕ್ಷಕರು ಸೇರಿ 2739 ಶಿಕ್ಷಕ ಮತದಾರರು ಮತದಾನ ಮಾಡಿದ್ದಾರೆ.