ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಜಿಲ್ಲೆಗೆ ಹತ್ತು ತಿಂಗಳ ಅಭಿವೃದ್ಧಿಗೆ ಸಂಬಂಧಸಿದ ದಾಖಲೆಗಳನ್ನು ನೀಡಲು ನಾವು ಸಿದ್ದರಿದ್ದೇವೆ ಬಿಜೆಪಿಯವರಿಗೆ ಧೈರ್ಯ ಇದ್ದರೆ ಹತ್ತು ವರ್ಷದಿಂದ ಜಿಲ್ಲೆ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಬಹಿರಂಗ ಪಡಿಸಲಿ ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಸವಾಲು ಹಾಕಿದರು.
ತಾಲೂಕಿನ ವೇಮಗಲ್ ಹೋಬಳಿಯ ಸೀತಿಹೊಸೂರು ಮತ್ತು ಕುರಗಲ್ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಿಂದ ಬರೀ ಕ್ಲಾರ್ಕ್ ಟವರ್ ನಲ್ಲಿನ ಬಣ್ಣ ಬದಲಾಯಿಸಿದ್ದು ಬಿಟ್ಟರೆ ಸಾಮಾನ್ಯ ಜನಕ್ಕೆ ಅನುಕೂಲವಾಗುವ ಒಂದು ಒಂದು ಯೋಜನೆಯನ್ನು ಜಾರಿ ಮಾಡಲಿಲ್ಲ ಆದರೆ ಕೋಲಾರ ವಿಧಾನಸಭಾ ಕ್ಷೇತ್ರ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 500 ಕೋಟಿ ತಂದಿದ್ದೇವೆ ರಿಂಗ್ ರೋಡ್ ನಿರ್ಮಾಣಕ್ಕೆ 360 ಕೋಟಿ ಜೊತೆಗೆ ಎಪಿಎಂಸಿ ಜಾಗ ಗುರುತಿಸಿದ್ದೇವೆ ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವುಗಳ ಬಗ್ಗೆ ದಾಖಲೆಗಳು ಬೇಕಿದ್ದರೆ ಕೊಡತ್ತೇವೆ ಬಿಜೆಪಿಯವರ ಕೊಡುಗೆ ಇದ್ದರೆ ಜನರ ಮುಂದೆ ಇಡೀ ಎಂದು ತಿಳಿಸಿದರು.
ಬಿಜೆಪಿ ಪಕ್ಷವು ಹಿಂದೂ ಮುಸ್ಲಿಂ ಸಮುದಾಯಗಳನ್ನು ಎತ್ತಿಕಟ್ಟಿ ಜೈ ಶ್ರೀರಾಮ್ ಅಂತ ದೇಶದ ಜನರನ್ನು ಯಾಮಾರಿಸಿದ್ದಾರೆ ಇತ್ತಿಚಿಗೆ ಕೂಡ ರಾಮಮಂದಿರ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ ಶ್ರೀರಾಮ ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ಸಿಮೀತವಲ್ಲ ನಾವು ಕೂಡ ಹಿಂದೂಗಳೇ ನಮ್ಮಲ್ಲಿ ಕೂಡ ದೇವ ಭಕ್ತಿ ಇದೆ ತೋರಿಕೆಗಾಗಿ ಮಾತ್ರ ಭಕ್ತಿ ಭಾವನೆ ತೋರಿಸಬಾರದು ಸಮಾಜದ ಎಲ್ಲಾ ಜಾತಿ ಧರ್ಮಗಳನ್ನು ಪ್ರೀತಿಯಿಂದ ನೋಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ದೇಶದಲ್ಲಿ ಶಾಂತಿ, ನೆಮ್ಮದಿಗಾಗಿ ಕೈ ಗುರುತಿಗೆ ವೋಟ್ ಹಾಕುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳೊಂದಿಗೆ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರ ಅಭಿವೃದ್ಧಿಗೆ ಮಹಾಲಕ್ಷ್ಮಿ ಯೋಜನೆಯಿಂದ ವರ್ಷಕ್ಕೆ ಒಂದು ಲಕ್ಷ, ನಗೇಗಾದಲ್ಲಿ ದಿನಕ್ಕೆ 400 ರೂ ಕೂಲಿ, ರೈತರ ಸಾಲ ಮನ್ನಾ , ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಜಾತಿ ಗಣತಿ ಮಾಡಿಸಿ ಸರ್ಕಾರದ ಯೋಜನೆಗಳನ್ನು ಎಲ್ಲಾ ಸಮುದಾಯಗಳ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ ಎಂದರು.
ಇತ್ತೀಚಿಗೆ ಕೋಲಾರದ ಮಾಜಿ ಸಚಿವರೊಬ್ಬರೂ ಸಭೆಯೊಂದರಲ್ಲಿ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರವನ್ನು ಮೀಸಲು ಕ್ಷೇತ್ರದಿಂದ ತೆಗೆದುಹಾಕಿ ಮುಂದೆ ಸಾಮಾನ್ಯ ಕ್ಷೇತ್ರವಾಗಿ ಮಾಡಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ ಅವರ ಆಟಪಾಠಗಳು ನಾಟಕಗಳನ್ನು ಕ್ಷೇತ್ರದ ಜನ ನೋಡಿದ್ದಾರೆ ಜನ ಯಾಮಾರಿ ಎರಡು ಬಾರಿ ಅವರಿಗೆ ಅವಕಾಶ ನೀಡಿದ್ದಾರೆ ಮುಂದೆ ಇವರ ಆಟ ನಡೆಯಲ್ಲ ಅಂತ ಗೊತ್ತಾಗಿದೆ ಅದಕ್ಕೆ ಸಿಎಂಆರ್ ಶ್ರೀನಾಥ್ ಅವರನ್ನು ಜೊತೆಯಲ್ಲಿ ಇಟ್ಟುಕೊಂಡು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ ಶ್ರೀನಾಥ್ ಅವರಿಗೆ ಬುದ್ದಿ ಇದ್ದು ಈಗಲೇ ಎಚ್ಚತ್ತುಕೊಂಡರೆ ಮುಂದೆ ಒಳ್ಳೆಯದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗನಾಳ ಸೋಮಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ದಯಾನಂದ್, ಉದಯಶಂಕರ್, ಉರಟ ಅಗ್ರಹಾರ ಚೌಡರೆಡ್ಡಿ, ಮೈಲಾಂಡಹಳ್ಳಿ ಮುರಳಿ, ಮಲೇಷಿಯಾ ರಾಜಕುಮಾರ್, ತಿಪ್ಪೇನಹಳ್ಳಿ ನಾಗೇಶ್, ಮುಂತಾದವರು ಇದ್ದರು
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…
ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…
ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…